Breaking News

ಅಕಾಲಿಕ ಮಳೆ | ಅಪಾರ ಬೆಳೆ ನಾಶ: ಪರಿಶೀಲನೆ

Spread the love

ತ್ತಿಗೇರಿ/ ಮುಗಳಿಹಾಳ: ಕಳೆದ ಒಂದು ವಾರದಿಂದ ಸುರಿದ ಮಳೆಯಿಂದ ಯರಗಟ್ಟಿ ತಾಲ್ಲೂಕಿನ ಕೊಡ್ಲಿವಾಡ, ಅಕ್ಕಿಸಾಗರ ಗುಡಮಕೇರಿ, ಇಟ್ನಾಳ ಗ್ರಾಮಗಳಲ್ಲಿ ಬೆಳೆದ ಬೆಳೆಗಳು ಹಾನಿಯಾಗಿವೆ. ಹಾನಿ ಪರಿಶೀಲನೆಗೆ ಈಗಾಗಲೇ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ತಂಡ ಸಮೀಕ್ಷೆ ಶುರು ಮಾಡಿದೆ.

 

ಯರಗಟ್ಟಿ ತಾಲ್ಲೂಕಿನ ಹತ್ತಿ, ಶೇಂಗಾ, ಈರುಳ್ಳಿ, ಗೋವಿನಜೋಳ ಮುಂತಾದ ಹಾನಿಗೊಳಗಾದ ಬೆಳೆಗಳನ್ನು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಶಿವಪ್ರಕಾಶ್ ಪಾಟೀಲ ಮತ್ತು ಗ್ರಾಮ ಲೆಕ್ಕಾಧಿಕಾರಿಗಳು, ಎ.ಬಿ. ಹುಣಶ್ಯಾಳ, ಕೃಷಿ ಇಲಾಖೆ ಅಧಿಕಾರಿ ಎಸ್.ಎಲ್. ದೇಸಾಯಿ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ರೈತ ಸಂಘದ ಮುಖಂಡ ಸಿಂದೂರ್ ತೆಗ್ಗಿ ಮಾತನಾಡಿ, ‘ರೈತರಿಗೆ ಈ ಬಾರಿ ಸಾಕಷ್ಟು ಬೆಳೆ ಹಾನಿಯಾಗಿದೆ. ಸಾಲ ಮಾಡಿ ರೈತ ಗೋವಿನ ಜೋಳ, ಹತ್ತಿ ಮುಂತಾದ ಹಾನಿಗೊಳಗಾದ ಬೆಳೆಗಳಿಗೆ ಪರಿಹಾರ ನೀಡಬೇಕು’ ಎಂದು ಹೇಳಿದರು.

‘ಮಳೆಯಿಂದ ನೀರಾವರಿ, ಒಣಭೂಮಿಯ ಬೆಳೆಗಳೂ ಹಾಳಾಗಿವೆ. ಪರಿಹಾರ ಮತ್ತು ಬೆಳೆವಿಮೆ ನೀಡಬೇಕು. ಬೆಳೆ ಪರಿಹಾರ ನೀಡುವಲ್ಲಿ ಯಾವುದೇ ತಾರತಮ್ಯ ಮಾಡದೇ ಆದಷ್ಟು ಬೇಗನೆ ಪರಿಹಾರ ಒದಗಿಸಬೇಕು’ ಎಂದು ಅಗ್ರಹಿಸಿದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ