Breaking News

ಕರ್ನಾಟಕದಿಂದ ಮಹರಾಷ್ಟ್ರದತ್ತ ಮುಖ ಮಾಡಿದ ಟಯೋಟ ಕಿರ್ಲೋಸ್ಕರ್‌

Spread the love

ಬೆಂಗಳೂರು, ಅ.8- ಬಂಡವಾಳ ಹೂಡಿಕೆಯಲ್ಲಿ ದೇಶದಲ್ಲೇ ನಂಬರ್‌ ಒನ್‌ ಸ್ಥಾನದಲ್ಲಿದ್ದ ಕರ್ನಾಟಕವನ್ನು, ಮಹಾರಾಷ್ಟ್ರ ಹಿಂದಿಕ್ಕುತ್ತಿದ್ದು 21 ಸಾವಿರ ಕೋಟಿ ರೂಪಾಯಿಗಳ ಅಂದಾಜು ವೆಚ್ಚದ ಬೃಹತ್‌ ಉದ್ಯಮವನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ.ಕರ್ನಾಟಕದಿಂದ ಮಹರಾಷ್ಟ್ರದತ್ತ ಮುಖ ಮಾಡಿದ ಟಯೋಟ ಕಿರ್ಲೋಸ್ಕರ್‌

ಈಗಾಗಲೇ ಬೆಂಗಳೂರಿನ ಬಿಡದಿಯ ಬಳಿ ಬೃಹತ್‌ ಉತ್ಪಾದನಾ ಘಟಕವನ್ನು ಟಯೋಟ ಕಿರ್ಲೋಸ್ಕರ್‌ ಹೊಂದಿದೆ. ಇಲ್ಲಿ ವರ್ಷಕ್ಕೆ ಮೂರು ಲಕ್ಷದ ಇಪ್ಪತ್ತು ಸಾವಿರ ವಾಹನಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

1997ರಲ್ಲಿ 90 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಆರಂಭವಾದ ಮೊದಲ ಘಟಕದಲ್ಲಿ ವರ್ಷಕ್ಕೆ ಒಂದು ಲಕ್ಷ ವಾಹನಗಳನ್ನು ಉತ್ಪಾದಿಸುವ ಸಾಮರ್ಥ್ಯವಿದೆ. 2010ರಲ್ಲಿ ಆರಂಭಿಸಲಾದ ಎರಡನೇ ಘಟಕ ಎರಡು ಲಕ್ಷದ ಇಪ್ಪತ್ತು ಸಾವಿರ ವಾಹನಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಇಲ್ಲಿ ಇನ್ನೋವಾ, ಫಾರ್ಚುನರ್‌, ಕೊರೋಲಾ ಆಲ್ಟೀಸ್‌‍, ಟಯೋಟಾ ಯಾರೀಸ್‌‍, ಈಟಿಯೋಸ್‌‍ ಲೈವಾ, ಈಟಿಯೋಸ್‌‍ ಕ್ರಾಸ್‌‍, ಕಾಮ್ರಿ, ಹೈಬ್ರೀಡ್‌ನಂತಹ ಲಕ್ಸುರಿ ಮತ್ತು ಎಕನಾಮಿಕ್‌ ಕಾರುಗಳನ್ನು ಉತ್ಪಾದಿಸಲಾಗುತ್ತಿದೆ.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ