Breaking News

ದಾಂಡೇಲಿಯಲ್ಲಿ ವ್ಯಾಪಕ ಮಳೆ. ಅಂಗಡಿ, ಮನೆಗಳಿಗೆ ನುಗ್ಗಿದ ಕೊಳಚೆ ನೀರು

Spread the love

ದಾಂಡೇಲಿ : ನಗರದಲ್ಲಿ ವ್ಯಾಪಕವಾಗಿ ಮಳೆಯಾಗಿ ಪಟೇಲ್ ವೃತ್ತದ ಹತ್ತಿರ ಎರಡು ಅಂಗಡಿ ಸೇರಿದಂತೆ ಸ್ಥಳೀಯ ಮನೆಗಳಿಗೆ ನೀರು ನುಗ್ಗಿರುವ ಘಟನೆ ಇಂದು ಶನಿವಾರ(ಅ.05) ನಡೆದಿದೆ.

ನಗರದ ಪಟೇಲ್ ವೃತ್ತದ ಹತ್ತಿರ ಕಳೆದೆರಡು ತಿಂಗಳ ಹಿಂದೆ ಮುರಿದು ಬಿದ್ದಿದ್ದ ಬಿದಿರನ್ನು ತುಂಡರಿಸಿ ಅಲ್ಲಿ ರಾಶಿ ಹಾಕಿದ ಹಿನ್ನೆಲೆಯಲ್ಲಿ ಮಳೆಯ ನೀರು ಗಟಾರದಲ್ಲಿ ಸರಾಗವಾಗಿ ಹರಿಯದೆ ಇರುವುದರಿಂದ ಮಳೆಯ ನೀರು ಹಾಗು ತ್ಯಾಜ್ಯ ನೀರು ತುಂಬಿ ರಸ್ತೆ ಹಾಗೂ ಪಕ್ಕದಲ್ಲಿರುವ ಎರಡು ಅಂಗಡಿಗಳಿಗೆ ಮತ್ತು ಹತ್ತಿರದ ಮನೆಗಳಿಗೆ ನುಗ್ಗಿದೆ.Heavy Rain: ದಾಂಡೇಲಿಯಲ್ಲಿ ವ್ಯಾಪಕ ಮಳೆ. ಅಂಗಡಿ, ಮನೆಗಳಿಗೆ ನುಗ್ಗಿದ ಕೊಳಚೆ ನೀರು

ಅಂಗಡಿಗೆ ಮಳೆ ನೀರು ನುಗ್ಗಿರುವುದರಿಂದ ಅಂಗಡಿಯಲ್ಲಿದ್ದ ವಸ್ತುಗಳಿಗೆ ಹಾನಿಯಾಗಿದೆ.

ಗಟಾರದ ಮೇಲೆ ರಾಶಿ ಹಾಕಿಟ್ಟಿರುವ ಬಿದಿರು ಸೇರಿದಂತೆ ತ್ಯಾಜ್ಯ ವಸ್ತುಗಳನ್ನು ಕೂಡಲೇ ವಿಲೇವಾರಿ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ