Breaking News

ಆನ್‌ಲೈನ್‌ ವಂಚಕನ ಸೆರೆ: ₹1.21 ಕೋಟಿ ವಶ

Spread the love

ಳ್ಳಾರಿ: ನಗರದ ‘ಹಿಂದೂಸ್ತಾನ್ ಕ್ಯಾಲ್ಸಿನ್ಡ್ ಮೆಟಲ್ಸ್ ಪ್ರೈವೆಟ್ ಲಿಮಿಟೆಡ್’ಗೆ ₹2.11 ಕೋಟಿ ವಂಚಿಸಿದ್ದ ಆನ್‌ಲೈನ್‌ ವಂಚಕರ ತಂಡದ ದುಷ್ಕರ್ಮಿಯೊಬ್ಬನನ್ನು ಬಂಧಿಸುವಲ್ಲಿ ಬಳ್ಳಾರಿಯ ಸೈಬರ್, ಆರ್ಥಿಕ, ಮಾದಕ ವಸ್ತು (ಸಿಇಎನ್‌) ಅಪರಾಧ ಪೊಲೀಸರು ಯಶಸ್ವಿಯಾಗಿದ್ದಾರೆ.

 

ವಂಚನೆಯ ಜಾಲ ಬೆನ್ನುಹತ್ತಿದ್ದ ಸಿಇಎನ್‌ ವಿಭಾಗದ ಡಿಎಸ್‌ಪಿ ಸಂತೋಷ್‌ ಚೌವ್ಹಾಣ್‌ ಅವರ ತಂಡ, ಮಧ್ಯಪ್ರದೇಶಕ್ಕೆ ತೆರಳಿ ಸಿದಿ ಜಿಲ್ಲೆಯ ಅಜಯ್‌ ಕುಮಾರ್‌ ಜೈಸ್ವಾಲ್‌ ಎಂಬಾತನನ್ನು ಬಂಧಿಸಿ ರಾಜ್ಯಕ್ಕೆ ಕರೆತಂದಿದ್ದಾರೆ.

‘ಅಜಯ್‌ ಕುಮಾರ್ ಬಂಧನದಿಂದಾಗಿ ₹1.21 ಕೋಟಿ ವಶಕ್ಕೆ ಪಡೆಯಲು ಸಾಧ್ಯವಾಗಿದೆ. ಇದರ ಜತೆಗೆ ₹27.97 ಲಕ್ಷವನ್ನು ಖಾತೆಯಲ್ಲೇ ಫ್ರೀಜ್‌ ಮಾಡಲಾಗಿದೆ. ಕೃತ್ಯಕ್ಕೆ ಬಳಸಿದ ಒಂದು ಮೊಬೈಲ್‌ ಜಫ್ತಿ ಮಾಡಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ. ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ