Breaking News

ಮಹಾರಾಷ್ಟ್ರದಲ್ಲಿ ಹಲ್ಲೆ: ಬೆಳಗಾವಿಯ ಮೂವರು ಸಂತರಿಗೆ ಗಾಯ

Spread the love

ಬೆಳಗಾವಿ: ಪಂಢರಪುರದಿಂದ ಮರಳುತ್ತಿದ್ದ ಬೆಳಗಾವಿಯ ಸಂತರ ಗುಂಪಿನ ಮೇಲೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮಾಲಗಾಂವ ಬಳಿ ಗುರುವಾರ ಹಲ್ಲೆ ನಡೆದಿದೆ. ಮೂವರಿಗೆ ಗಾಯಗಳಾಗಿವೆ. ಮೀರಜ್ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮಹಾರಾಷ್ಟ್ರದಲ್ಲಿ ಹಲ್ಲೆ: ಬೆಳಗಾವಿಯ ಮೂವರು ಸಂತರಿಗೆ ಗಾಯ

ತಾಲ್ಲೂಕಿನ ತುರಮರಿ ಗ್ರಾಮ ಪಂಚಾಯಿತಿ ಸದಸ್ಯ ಸುರೇಶ ರಾಜೂಕರ (63), ಇಲ್ಲಿನ ಶಿವಾಜಿ ನಗರದ ಬಾಳು ಮನವಾಡಕರ (60), ಪರಶುರಾಮ ಜಾಧವ (42) ಅವರಿಗೆ ಗಾಯ ಆಗಿದೆ.

ಇವರು ಮೀರಜ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಶನಿವಾರ ಬೆಳಗಾವಿಗೆ ಮರಳಿದ್ದಾರೆ.

’30ಕ್ಕೂ ಹೆಚ್ಚು ಸಂತರು ಲಾರಿಯಲ್ಲಿ ಪಂಢರಪುರಕ್ಕೆ ತೆರಳಿದ್ದು, ಜುಲೈ 18ರಂದು ಮರಳುವಾಗ ಮಾಲಗಾಂವ ಬಳಿ ರಸ್ತೆಯಲ್ಲಿ ಕಾರು ನಿಂತಿತ್ತು. ಕಾರನ್ನು ಸರಿಸಿ, ಲಾರಿಗೆ ಮುಂದೆ ಸಾಗಲು ಅವಕಾಶ ನೀಡಲು ಕೋರಿದೆವು. ಆದರೆ, ಕಾರಿನಲ್ಲಿದ್ದವರು ಜಾಗ ಬಿಡದೇ, ವಾಗ್ವಾದ ಮಾಡಿದರು. ನಾವು 3 ಕಿ.ಮೀ ಮುಂದಕ್ಕೆ ಸಾಗಿ ಬಂದೆವು. ಬೆನ್ನಟ್ಟಿ ಬಂದ 25ಕ್ಕೂ ಹೆಚ್ಚು ಮಂದಿ, ಲಾರಿ ಅಡ್ಡಗಟ್ಟಿದರು. ನಂತರ ಮಾರಕಾಸ್ತ್ರ ಮತ್ತು ಕಟ್ಟಿಗೆಯಿಂದ ಹಲ್ಲೆ ಮಾಡಿದರು’ ಎಂದು ಸುರೇಶ ರಾಜೂಕರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ