Breaking News

LIC ಆರೋಗ್ಯ ವಿಮೆಗೆ : ಖಾಸಗಿ ಕಂಪೆನಿ ಖರೀದಿ?

Spread the love

ಹೊಸದಿಲ್ಲಿ: ಸರಕಾರಿ ಸ್ವಾಮ್ಯದ ಎಲ್‌ಐಸಿ ಆರೋಗ್ಯ ವಿಮಾ ಕ್ಷೇತ್ರ ಪ್ರವೇಶಿ ಸುವ ಅಂಶ ಬಹುತೇಕ ಖಚಿತವಾಗಿದೆ. ಅದಕ್ಕಾಗಿ ದೇಶದಲ್ಲಿ ಕಾರ್ಯ ನಿರ್ವ ಹಿಸುತ್ತಿರುವ ಆರೋಗ್ಯ ವಿಮಾ ಕ್ಷೇತ್ರದ ಲ್ಲಿನ 5 ಅಗ್ರ ಕಂಪೆನಿಗಳ ಪೈಕಿ ಒಂದನ್ನು ಖರೀದಿಸಿ ಹೊಸ ಕ್ಷೇತ್ರಕ್ಕೆ ಕಾಲಿಡುವ ಸಾಧ್ಯತೆ ಇದೆ ಎಂದು ಆಂಗ್ಲ ವಾಣಿಜ್ಯ ಪತ್ರಿಕೆಯೊಂದು ವರದಿ ಮಾಡಿದೆ.

ಈ ಉದ್ದೇಶಕ್ಕಾಗಿ ಭಾರತೀಯ ವಿಮಾ ನಿಯಂತ್ರಣ ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ)ಕ್ಕೆ ತಾನು ಜಾರಿಗೊಳಿಸ ಲಿರುವ ಉದ್ದೇಶಿತ ಆರೋಗ್ಯ ವಿಮೆಯ ಯೋಜನೆಯ ವಿವರಗಳನ್ನು ಸಲ್ಲಿಕೆ ಮಾಡಿದೆ ಎಂದು ತಿಳಿದು ಬಂದಿದೆ.LIC ಆರೋಗ್ಯ ವಿಮೆಗೆ : ಖಾಸಗಿ ಕಂಪೆನಿ ಖರೀದಿ?

ಪರವಾನಿಗೆ ಪಡೆಯಲು ಇನ್ನೂ 2-3 ತಿಂಗಳು ಬೇಕಾಗಬಹುದು. ಆ ಅವಧಿ ಯಲ್ಲಿ ದೇಶದಲ್ಲಿ ಸದ್ಯ ಕಾರ್ಯ ವೆಸಗುತ್ತಿರುವ ಖಾಸಗಿ ಕ್ಷೇತ್ರದ ಅಗ್ರ ಆರೋಗ್ಯ ವಿಮೆ ನೀಡುವ ಕಂಪೆನಿಗಳ ಪೈಕಿ ಒಂದನ್ನು ಖರೀದಿ ಮಾಡುವ ಬಗ್ಗೆ ಎಲ್‌ಐಸಿ ಚಿಂತನೆ ನಡೆಸಲಿದೆ ಎನ್ನಲಾ ಗಿದೆ. ಈ ನಿಟ್ಟಿನಲ್ಲಿ ಆಂತರಿಕವಾಗಿ ಹಲವು ಕೆಲಸಗಳು ನಡೆದಿವೆ ಎಂದು ಹೇಳಲಾಗಿದೆ. ದೇಶದಲ್ಲಿ ಸದ್ಯ 29 ಕಂಪೆ ನಿಗಳು ಆರೋಗ್ಯ ವಿಮೆ ನೀಡುವ ಕಂಪೆನಿಗಳು ಇವೆ. ಎಲ್‌ಐಸಿಯ ಒಟ್ಟು 52,000 ಕೋ. ರೂ. ಮೌಲ್ಯದ ಆಸ್ತಿ ಹೊಂದಿದೆ.


Spread the love

About Laxminews 24x7

Check Also

ಶಿಕ್ಷಿಸುವುದಕ್ಕಿಂತ ಸರಿಯಾದ ದಾರಿಗೆ ತರೋದೇ ನಮ್ಮ ಧರ್ಮ: ನಿಂದಿಸಿದ ಮಕ್ಕಳನ್ನು ಕ್ಷಮಿಸಿದ ಮೋದಿ

Spread the loveನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಘಟನೆ ಮತ್ತು ತಮ್ಮ ಹಾಗೂ ತಮ್ಮ ದಿವಂಗತ ತಾಯಿಯವರ ವಿರುದ್ಧ ವ್ಯಕ್ತವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ