Breaking News

ಮೋದಿ ಗೆದ್ದಿರುವುದು 1.5 ಲಕ್ಷ ಮತಗಳ ಅಂತರದಲ್ಲಿ ಮಾತ್ರ: ಸಂತೋಷ್ ಲಾಡ್

Spread the love

ಧಾರವಾಡ: ‘ಮೋದಿ ಅಲೆ ಕೆಲವು ಕಡೆ ಮಾತ್ರ ಇದೆ, ಎಲ್ಲ ಕಡೆ ಇಲ್ಲ. ಮೋದಿ ಅವರು ಗೆದ್ದಿರುವುದೇ 1.5 ಲಕ್ಷ ಮತಗಳ ಅಂತರದಲ್ಲಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಕುಟುಕಿದರು.ಮೋದಿ ಗೆದ್ದಿರುವುದು 1.5 ಲಕ್ಷ ಮತಗಳ ಅಂತರದಲ್ಲಿ ಮಾತ್ರ: ಸಂತೋಷ್ ಲಾಡ್

ಸೋಮವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಪ್ರಧಾನಿಗಳು 5 ಲಕ್ಷಕ್ಕೂ ಹೆಚ್ಚು ಅಂತರ ಪಡೆದವರೇ ಹೆಚ್ಚು.

ಕಡಿಮೆ ಮತಗಳ ಅಂತರದಲ್ಲಿ ಗೆದ್ದ ಎರಡನೇ ಪ್ರಧಾನಿ ಮೋದಿ. ಚಂದ್ರಶೇಖರ್ ಅವರು 1.5 ಲಕ್ಷ ಮತಗಳ ಅಂತರದಲ್ಲಿ ಗೆದ್ದಿದ್ದರು ಎಂದರು.

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಮೋದಿ ಹೆಸರಿನಲ್ಲೇ ಮತಯಾಚಿಸಿದರು. ಇಲ್ಲಿ ಗೆಲುವಿನ ಅಂತರ ಎಷ್ಟಿದೆ? ಕಾಂಗ್ರೆಸ್ ಪ್ರಬಲ ಪೈಪೋಟಿ ನೀಡಿತು. ಧಾರವಾಡ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ ಗಳಿಕೆ ಶೇ 11 ಹೆಚ್ಚಾಗಿದೆ ಎಂದರು.

ಇದೇ ವೇಳೆ ಧಾರವಾಡ ತಾಲ್ಲೂಕಿನ ಹಾರೋಬೆಳವಡಿ ಗ್ರಾಮ ಸಮೀಪ ತುಪ್ಪರಿ ಹಳ್ಳ ಪ್ರದೇಶವನ್ನು ಅವರು ಪರಿಶೀಲಿಸಿದರು. ಶಾಸಕ ಎನ್.ಎಚ್.ಕೋನರೆಡ್ಡಿ, ಜಿಲ್ಲಾಧಿಕಾರಿ ದಿವ್ಯಪ್ರಭು ಸಾಥ್‌ ನೀಡಿದ್ದರು.


Spread the love

About Laxminews 24x7

Check Also

ಪ್ರೀತಿಸಿ ಮದುವೆ – ಲಾಡ್ಜ್‌ನಲ್ಲಿ ಹೆಂಡತಿಯನ್ನು ಉಸಿರುಗಟ್ಟಿಸಿ ಕೊಂದು ಗಂಡ ಪರಾರಿ

Spread the loveಚಿಕ್ಕಬಳ್ಳಾಪುರ: ಪತ್ನಿಯನ್ನು ಲಾಡ್ಜ್‌ಗೆ  ಕರೆದುಕೊಂಡು ಬಂದ ಪತಿ, ಆಕೆಯನ್ನು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ