Breaking News

ಚನ್ನಮ್ಮನ ಕಿತ್ತೂರು | ಶೌಚಕ್ಕೆ ವಿದ್ಯಾರ್ಥಿನಿಯರ ಪರದಾಟ

Spread the love

ಚನ್ನಮ್ಮನ ಕಿತ್ತೂರು: ಗ್ರಾಮಾಂತರ ಪ್ರದೇಶದ ಪ್ರಥಮ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಎಂಬ ಹೆಗ್ಗಳಿಕೆ ಹೊಂದಿರುವ ಇಲ್ಲಿನ ಸರೋಜಾತಾಯಿ ಮಾರಿಹಾಳ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯು ವಿದ್ಯಾರ್ಥಿನಿಯರ ಸಂಖ್ಯೆಗೆ ಅಗತ್ಯವಾಗಿರುವ ಮೂತ್ರಾಲಯ ವ್ಯವಸ್ಥೆಯನ್ನು ಹೊಂದಿಲ್ಲ.

ಹೀಗಾಗಿ ಅವರು ನಿತ್ಯ ತೊಂದರೆ ಅನುಭವಿಸುವಂತಾಗಿದೆ.

‘ವರ್ಷದಿಂದ ವರ್ಷಕ್ಕೆ ಏರುತ್ತಿರುವ ವಿದ್ಯಾರ್ಥಿನಿಯರ ಸಂಖ್ಯೆಗೆ ಅನುಗುಣವಾಗಿ ಸರ್ಕಾರ ಮೂತ್ರಾಲಯ ಸೌಲಭ್ಯ ಕಲ್ಪಿಸಬೇಕಿತ್ತು. ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನ ಹರಿಸಲು ಹೋಗಿಲ್ಲ’ ಎಂದು ದೂರುತ್ತಾರೆ ಪಾಲಕರು.ಚನ್ನಮ್ಮನ ಕಿತ್ತೂರು | ಶೌಚಕ್ಕೆ ವಿದ್ಯಾರ್ಥಿನಿಯರ ಪರದಾಟ

‘ಬಾಲಕಿಯರ ಪ್ರೌಢಶಾಲೆಯ ಬಳಿಯೇ ಪದವಿ ಪೂರ್ವ ಸರ್ಕಾರಿ ಕಾಲೇಜು ಸ್ಥಾಪನೆಯಾಗಿ ಅನೇಕ ವರ್ಷಗಳು ಉರುಳಿವೆ. ಅಲ್ಲಿ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಅವರಲ್ಲಿ ಸುಮಾರು ಅರ್ಧದಷ್ಟು ವಿದ್ಯಾರ್ಥಿನಿಯರು ಇದ್ದಾರೆ. ಅವರೂ ಇದೇ ಶೌಚಾಲಯ ಅವಲಂಬಿಸಿರುವುದರಿಂದ ಪರಿಸ್ಥಿತಿ ಗಂಭೀರವಾಗಿದೆ’ ಎನ್ನುತ್ತಾರೆ ಅವರು.

‘ಎಸ್. ಆರ್. ಕಂಠಿ ಅವರು ಶಿಕ್ಷಣ ಸಚಿವರಾಗಿದ್ದ 1966ರ ಅವಧಿಯಲ್ಲಿ ಬಾಲಕಿಯರಿಗಾಗಿಯೇ ಪ್ರೌಢಶಾಲೆ ಸ್ಥಾಪನೆಯಾಯಿತು. ವಿದ್ಯಾರ್ಥಿನಿಯರ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತ ಬಂದಿದೆ. ಕಳೆದ ವರ್ಷ ಈ ಶಾಲೆಯಲ್ಲಿ 434 ವಿದ್ಯಾರ್ಥಿನಿಯರು ಓದುತ್ತಿದ್ದರು’ ಎಂದು ಶಾಲೆಯ ಮೂಲಗಳು ತಿಳಿಸುತ್ತವೆ.

‘8ನೇ ತರಗತಿಯಲ್ಲಿ ಎರಡು, 9 ಮತ್ತು 10ನೇ ತರಗತಿಯಲ್ಲಿ ಮೂರು ವಿಭಾಗ (ಡಿವಿಜನ್) ಗಳನ್ನಾಗಿ ಮಾಡಲಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಎಂಟು ಕೊಠಡಿಗಳಲ್ಲಿ ಸಮಾರು 450 ವಿದ್ಯಾರ್ಥಿನಿಯರು ಇರಲಿದ್ದಾರೆ ಎಂದು ಅಂದಾಜಿಸಲಾಗಿದೆ. 25 ಜನ ಸಿಬ್ಬಂದಿಯೂ ಇದ್ದಾರೆ. ಇವರಲ್ಲಿ 15ಕ್ಕೂ ಹೆಚ್ಚು ಮಹಿಳೆಯರಿದ್ದಾರೆ. 10 ನಿಮಿಷದ ಲಘು ವಿರಾಮ ಇದ್ದಾಗ ಈಗ ಲಭ್ಯವಿರುವ 8 ಮೂತ್ರಾಲಯ ಮುಂದೆ ವಿದ್ಯಾರ್ಥಿನಿಯರು ಸರತಿಯಲ್ಲಿ ನಿಲ್ಲಬೇಕು. ಮಳೆಗಾಲದಲ್ಲಂತೂ ಪರಿಸ್ಥಿತಿ ಹೇಳತೀರದು’ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ವಿದ್ಯಾರ್ಥಿನಿಯರು.

‘ಈ ಸಮಸ್ಯೆ ಬಗ್ಗೆ ಕೆಲ ಶಾಲಾ ಸಿಬ್ಬಂದಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. 25 ಮೂತ್ರಾಲಯವಾದರೂ ನಿರ್ಮಾಣ ಮಾಡಿದರೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಅವರು.


Spread the love

About Laxminews 24x7

Check Also

12 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ 65ರ ವೃದ್ಧ

Spread the loveಕಾರವಾರ: ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಆಕೆಯನ್ನು ಗರ್ಭಿಣಿಯನ್ನಾಗಿಸಿದ ಆಘಾತಕಾರಿ ಪ್ರಕರಣ ಮುಂಡಗೋಡು ತಾಲೂಕಿನಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ