Breaking News

ಕಾಸು ಕೊಟ್ಟು ಪೊರಕೆ, ಏಟು ತಿನ್ನಲು ಮುಗಿಬಿದ್ದ ಭಕ್ತರು

Spread the love

ಆನೇಕಲ್, ಮೇ 25: ಕಾಸು ಕೊಟ್ಟು ಪೊರಕೆ ಮೊರದಲ್ಲಿ ಏಟು ತಿನ್ನಲು ಭಕ್ತರು (Devotees) ಮುಗಿಬಿದ್ದಿರುವಂತಹ ಅಪರೂಪದ ಘಟನೆಯೊಂದು ನಗರದಲ್ಲಿ ನಡೆದಿದೆ.

ಶ್ರೀ ಧರ್ಮರಾಯಸ್ವಾಮಿ ದ್ರೌಪತಮ್ಮ ಕರಗದ (Karaga) ಅಂಗವಾಗಿ ನಡೆಯುವ ಕೋಟೆ ಜಗಳ ಎಂಬ ವಿಶಿಷ್ಟ ಧಾರ್ಮಿಕ ಆಚರಣೆಯಲ್ಲಿ ಕಾಳಿ ವೇಷಧಾರಿಯಿಂದ ಭಕ್ತರಿಗೆ ಪೊರಕೆ ಮೊರದೇಟು ನೀಡಲಾಗಿದೆ.

ಬಲಿ ನೀಡಲಾದ ಮೇಕೆಯ ಶ್ವಾಸಕೋಶವನ್ನು ಬಾಯಿಯಲ್ಲಿ ಕಚ್ಚಿಕೊಳ್ಳುವ ಕಾಳಿ ವೇಶಧಾರಿ, ಸಿಕ್ಕ ಸಿಕ್ಕವರಿಗೆ ಪೊರಕೆ, ಮೊರದಲ್ಲಿ ಹೊಡೆಯುವ ದೃಶ್ಯ ಮಾತ್ರ ರೋಮಾಂಚಕಾರಿ ಆಗಿರುತ್ತದೆ.

ಕೋಟೆ ಜಗಳಕ್ಕಾಗಿ ನೂರಾರು ಮಂದಿ ಜನರು ಜಮಾಯಿಸಿದ್ದರು. ಈ ಜಗಳದಲ್ಲಿ ಕಾಳಿ ದೇವಿಯ ಆವಾಹನೆಗೆ ವ್ಯಕ್ತಿ ಒಳಗಾಗುತ್ತಾರೆ. ಕರಗದ ಗುಡಿಯಲ್ಲಿ ಗುಡಿಸಿದ ಪೊರಕೆ, ಮೊರದಲ್ಲಿ ಹೊಡೆಸಿಕೊಂಡರೇ ಒಳ್ಳೆದಾಗುತ್ತೆ, ನಕಾರಾತ್ಮಕ ಅಂಶಗಳು ನಾಶವಾಗುತ್ತದೆ ಎಂಬುದು ಭಕ್ತರ ನಂಬಿಕೆ.

ಹೀಗಾಗಿ ಪೊರಕೆ ಮೊರದಲ್ಲಿ ಹೊಡೆಸಿಕೊಳ್ಳಲು ಮಹಿಳೆಯರು ಮತ್ತು ಮಕ್ಕಳು ಮುಗಿಬಿದಿದ್ದರು. 


Spread the love

About Laxminews 24x7

Check Also

ಜನರ ಆರೋಗ್ಯ ಕಾಪಾಡುವ ಸರಕಾರದ ಸಂಕಲ್ಪಕ್ಕೆ ಕೈಜೋಡಿಸಿ: ಲಕ್ಷ್ಮೀ ಹೆಬ್ಬಾಳಕರ್

Spread the loveಜನರ ಆರೋಗ್ಯ ಕಾಪಾಡುವ ಸರ್ಕಾರದ ಸಂಕಲ್ಪ ಸಾಕಾರಗೊಳ್ಳಬೇಕಾದರೆ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳು ಕೈಜೋಡಿಸುವುದು ಅಗತ್ಯ ಎಂದು ಮಹಿಳಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ