Breaking News

ಧರ್ಮದ ಆಧಾರದ ಮೇಲೆ ಯಾವುದೇ ದಾಖಲೆಗಳಿಲ್ಲ – ಹಿಂದೂಗಳು ನಾಪತ್ತೆ ಎಂಬ ಯೋಗಿ ಹೇಳಿಕೆಗೆ ಯುಪಿ ಸಿಇಒ ಕೌಂಟರ್‌

Spread the love

ಲಕ್ನೋ: ರಾಜ್ಯ ಮತದಾರರ ಪಟ್ಟಿಯಿಂದ 1.27 ಕೋಟಿ ಹಿಂದೂ ಮತದಾರರನ್ನ (Hindu Voters) ಹೊರಗಿಡಲಾಗಿದೆ ಎಂಬ ಸಿಎಂ ಯೋಗಿ ಆದಿತ್ಯನಾಥ್‌ (Yogi Adityanath) ಹೇಳಿಕೆಗೆ ಮುಖ್ಯ ಚುನಾವಣಾ ಅಧಿಕಾರಿ ನವದೀಪ್ ರಿನ್ವಾ ಸ್ಪಷ್ಟನೆ ನೀಡಿದ್ದಾರೆ.

ಲಕ್ನೋದ ಲೋಕ ಭವನದಲ್ಲಿ ಮಂಗಳವಾರ (ಇಂದು) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣಾ ಆಯೋಗದ ದತ್ತಾಂಶವು ಮತದಾರರ ಧರ್ಮ ಅಥವಾ ಜಾತಿಯ ಬಗ್ಗೆ ದಾಖಲೆಗಳನ್ನ ಹೊಂದಿಲ್ಲ. ವಿಶೇಷ ತೀವ್ರ ಪರಿಷ್ಕರಣೆ ಸಮಯದಲ್ಲಿ ನಿರ್ದಿಷ್ಟ ಸಮುದಾಯವನ್ನ ಗುರಿಯಾಗಿಸುವ ಯಾವುದೇ ಪಿತೂರಿಯೂ ಇಲ್ಲ ಎಂದು ಹೇಳಿದ್ದಾರೆ.

ಮತದಾರರ ಪಟ್ಟಿಯು ಮತದಾರರ ಹೆಸರುಗಳು, ವಯಸ್ಸು, ಲಿಂಗ, ಮನೆ ಸಂಖ್ಯೆಗಳು ಮತ್ತು ಸಂಬಂಧಿಕರ ಹೆಸರುಗಳಂತಹ ವಿವರಗಳನ್ನ ಹೊಂದಿದೆ. ಇದರ ಹೊರತಾಗಿ ಯಾವುದೇ ಧರ್ಮ ಅಥವಾ ಜಾತಿಯ ಬಗ್ಗೆ ಯಾವುದೇ ಮಾಹಿತಿಯನ್ನ ಹೊಂದಿಲ್ಲ. ನಮ್ಮ ದತ್ತಾಂಶವು ಧರ್ಮ, ಜಾತಿಯಂತಹ ಯಾವುದೇ ವಿವರಗಳನ್ನ ಒಳಗೊಂಡಿಲ್ಲ. ನಮ್ಮ ಮತದಾರರ ಪಟ್ಟಿಯನ್ನ ಬಳಸಿಕೊಂಡು ಈ ಅಂಶಗಳ ಆಧಾರದ ಮೇಲೆ ಧರ್ಮದ ವಿಶ್ಲೇಷಣೆ ನಡೆಸುವುದು ಅಸಾಧ್ಯ ಎಂದಿದ್ದಾರೆ.

ತಮ್ಮದೇ ವಿಶ್ಲೇಷಣೆಗೆ ಅವಕಾಶ ಇದೆ
ಧರ್ಮ ಅಥವಾ ಜಾತಿಯಿಂದ ಮತದಾರರನ್ನ ವರ್ಗೀಕರಿಸುವ ಯಾವುದೇ ವಿಶ್ಲೇಷಣೆಯು, ಹೆಸರುಗಳಿಂದ ಅಂತಹ ವಿವರಗಳನ್ನ ಗುರುತಿಸುವ ಸಾಫ್ಟ್‌ವೇರ್ ಅನ್ನು ಬಳಸಿಕೊಂಡು ಸಾರ್ವಜನಿಕವಾಗಿ ಲಭ್ಯವಿರುವ ಮತದಾರರ ಪಟ್ಟಿಗಳ ಸ್ವತಂತ್ರ ಮೌಲ್ಯಮಾಪನಗಳನ್ನ ಆಧರಿಸಿರಬಹುದು. ಎಸ್‌ಐಆರ್‌ ನಂತರ ನವೀಕರಿಸಿದ ಮತದಾರರ ಪಟ್ಟಿಗಳು ಪಿಡಿಎಫ್ ರೂಪದಲ್ಲಿ ಡೌನ್‌ಲೋಡ್ ಮಾಡಲು ಲಭ್ಯವಿದೆ. ವ್ಯಕ್ತಿಗಳು ಮತ್ತು ಸಂಸ್ಥೆಗಳು ಡೇಟಾವನ್ನ ಡೇಟಾಬೇಸ್‌ಗಳಾಗಿ ಪರಿವರ್ತಿಸಲು ಮತ್ತು ತಮ್ಮದೇ ಆದ ವಿಶ್ಲೇಷಣೆಯನ್ನ ನಡೆಸಲು ಅವಕಾಶ ನೀಡುತ್ತದೆ ಎಂದು ಅವರು ಗಮನಸೆಳೆದಿದ್ದಾರೆ.

ಇದೇ ವೇಳೆ ಪರಿಷ್ಕರಣೆಯ ಸಮಯದಲ್ಲಿ ನಿರ್ದಿಷ್ಟ ಧರ್ಮ, ಜಾತಿ ಅಥವಾ ಸಮುದಾಯವನ್ನು ಗುರಿಯಾಗಿಸಲು ಚುನಾವಣಾ ಆಯೋಗ, ಅದರ ಅಧಿಕಾರಿಗಳು, ರಾಜಕೀಯ ಪಕ್ಷಗಳು ಅಥವಾ ಇತರ ಗುಂಪುಗಳು ಮಾಡಿದ ಯಾವುದೇ ಪ್ರಯತ್ನವನ್ನು ಅವರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.


Spread the love

About Laxminews 24x7

Check Also

ಶಾರ್ಟ್ ಸರ್ಕ್ಯೂಟ್‌ನಿಂದ ಆಟೋಮೊಬೈಲ್ ಗ್ಯಾರೇಜ್‌ಗೆ ಬೆಂಕಿ; ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

Spread the loveಕಲಬುರಗಿ: ಆಕಸ್ಮಿಕವಾಗಿ ಬೆಂಕಿ ತಗುಲಿ ಎರಡು ಆಟೋಮೊಬೈಲ್ ಅಂಗಡಿಗಳು ಸುಟ್ಟು ಭಸ್ಮವಾಗಿರುವ ಘಟನೆ ಕಲಬುರಗಿ ಜಿಲ್ಲೆಯ  ಅಫಜಲಪುರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ