Breaking News

ಕೋಟಿ ಗೆದ್ದು ಕರೋಡ್‍ಪತಿಯಾದ ಐಪಿಎಸ್‍ ಅಧಿಕಾರಿ..!

Spread the love

ಮುಂಬೈ,ನ.18- ಬಾಲಿವುಡ್‍ನ ಬಿಗ್‍ಬಿ ಅಮಿತಾಬ್‍ಬಚ್ಚನ್ ನಡೆಸಿಕೊಡುತ್ತಿರುವ ಕೌನ್ ಬನೇಗಾ ಕರೋಡ್‍ಪತಿಗೆ ಈಗ 12ರ ಸಂಭ್ರಮ. ಕಾರ್ಯಕ್ರಮ ಶುರುವಾದಾಗಿನಿಂದಲೂ ಕೋಟಿ ಗೆದ್ದ ವೀರರ ಸಂಖ್ಯೆಯ ಪಟ್ಟಿ ಹೆಚ್ಚಾಗಿದೆ. ಆದರೆ ಈ ಬಾರಿಯ ರಿಯಾಲ್ಟಿ ಶೋನಲ್ಲಿ ಇಬ್ಬರು ಮಹಿಳೆಯರು ಕೋಟಿ ಪ್ರಶ್ನೆಗೆ ಉತ್ತರಿಸಿ ಕರೋಡ್‍ಪತಿಗಳಾಗಿದ್ದಾರೆ.

ಕಳೆದ ರಾತ್ರಿ ಈ ಕಾರ್ಯಕ್ರಮದ ಹಾಟ್‍ಸೀಟ್‍ನಲ್ಲಿ ಕುಳಿತಿದ್ದ ಐಪಿಎಸ್ ಅಧಿಕಾರಿ ಮೋಹಿತಾಶರ್ಮಾ ಕೋಟಿ ಗೆಲ್ಲುವ ಮೂಲಕ ಸಂಭ್ರಮಿಸಿದರಾದರೂ 7 ಕೋಟಿ ಪ್ರಶ್ನೆಗೆ ಉತ್ತರಿಸಲು ಹಿಂಜರಿದರು. ಕೌನ್‍ಬನೇಗಾ ಕರೋಡ್‍ಪತಿಯ 12ನೇ ಸೀಸನ್‍ನಲ್ಲಿ ಈಗಾಗಲೇ ನವದೆಹಲಿಯ ನಾಜಿಯಾ ನಸಿಮ್ ಕೋಟ್ಯಾಧಿಪತಿಗಳಾಗಿದ್ದರೆ ಈಗ ಆ ಸಾಲಿಗೆ ಐಪಿಎಸ್ ಅಧಿಕಾರಿ ಮೋಹಿತಾಶರ್ಮಾ ಸೇರಿಕೊಂಡಿದ್ದಾರೆ.

ಮೊದಲ ದಿನವೇ 9 ಪ್ರಶ್ನೆಗಳಿಗೆ ಉತ್ತರಿಸಿದ್ದ ಮೋಹಿತಾಶರ್ಮಾ ಕೋಟಿ ಗೆಲ್ಲುವ ಭರವಸೆ ಮೂಡಿಸಿಕೊಂಡಿದ್ದರು. ಎರಡನೇ ದಿನವೂ ಉತ್ತಮವಾಗಿ ಆಟವಾಡಿದ ಅವರು ಕೋಟಿ ಪ್ರಶ್ನೆಗೆ ಉತ್ತರ ನೀಡಿ ಕೋಟ್ಯಾಧಿಪತಿಗಳಾದರೂ 7 ಕೋಟಿ ಪ್ರಶ್ನೆಯ ವೇಳೆಗೆ ಅವರಿಗಿದ್ದ ಎಲ್ಲಾ 3 ಲೈಫ್‍ಲೈನ್‍ಗಳು ಮುಗಿದಿದ್ದರಿಂದ ಅವರು ಆ ಸುತ್ತಿನಿಂದ ಹಿಂದೆ ಸರಿದು 1 ಕೋಟಿ ರೂ.ಗೆ ತೃಪ್ತಿಪಟ್ಟುಕೊಂಡರು.

ಸುದ್ದಿಗಾರರೊಂದಿಗೆ ಮಾತನಾಡಿದ ಮೋಹಿತಾ ನನ್ನ ಪತಿ ಈ ಶೋಗೆ ಬರಲು ಪ್ರಯತ್ನಿಸುತ್ತಿದ್ದರಾದರೂ ಅವರಿಗೆ ಅವಕಾಶ ಸಿಕ್ಕಿರಲಿಲ್ಲ, ಆದರೆ ನನಗೆ ಅವಕಾಶ ಸಿಕ್ಕಿ ಕೋಟಿ ರೂಪಾಯಿ ಗೆಲ್ಲುವ ಮೂಲಕ ಅವರ ಆಸೆಯನ್ನು ಈಡೇರಿಸಿದ್ದೇನೆ ಎಂದು ಹೇಳಿದರು.


Spread the love

About Laxminews 24x7

Check Also

ಭಾರತದ ಮುಂದಿನ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ನೇಮಕ

Spread the loveನವದೆಹಲಿ: ಭಾರತದ ಮುಂದಿನ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್  ಅವರನ್ನ ಕೇಂದ್ರ ಸರ್ಕಾರ ನೇಮಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ