Breaking News

ಶ್ರೀರಾಮ ಬಿಜೆಪಿಯವರ ಆಸ್ತಿಯಲ್ಲ; ಪರಮೇಶ್ವರ್

Spread the love

ಬೆಂಗಳೂರು: ಶ್ರೀರಾಮ ಎಲ್ಲರಿಗೂ ಶ್ರೀರಾಮ. ಬಿಜೆಪಿಯವರು ಎಲ್ಲದರೂ ಖರೀದಿಸಿದ್ದಾರೆಯೇ. ಶ್ರೀರಾಮ ಈ ದೇಶದ ಸಂಸ್ಕೃತಿ, ಪರಂಪರೆಯ ಆಸ್ತಿ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ, ಬಿಜೆಪಿ ವಿರುದ್ಧ ಗುಡುಗಿದ್ದಾರೆ.

ಭಾನುವಾರ ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರ ಜತೆ ಮಾತನಾಡಿದ ಡಾ.

ಜಿ. ಪರಮೇಶ್ವರ ಅವರು, ಆಯೋಧ್ಯದಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಬಳಿಕ ರಾಮನ ಹೆಸರು ಟಾರ್ಗೆಟ್ ಆಗುತ್ತಿದೆ ಎಂದು ಬಿಜೆಪಿಯವರ ಆರೋಪದ ಕುರಿತು ಪ್ರತಿಕ್ರಿಯಿಸಿದರು.

ಶ್ರೀರಾಮ ಬಿಜೆಪಿಯವರ ಆಸ್ತಿಯಲ್ಲ; ಪರಮೇಶ್ವರ್

ನಾವು ಪದೇ ಪದೆ ಹೇಳುತ್ತಿದ್ದೇವೆ. ಶ್ರೀರಾಮ ಎಲ್ಲರಿಗೂ ಶ್ರೀರಾಮ. ಬಿಜೆಪಿ ಅವರು ಎಲ್ಲದರೂ ಖರೀದಿಸಿದ್ದಾರೆಯೇ. ಅದಕ್ಕೆ ಎಷ್ಟು ಹಣ ಆಯ್ತೋ ನಮಗೆ ಗೊತ್ತಿಲ್ಲ.

ಬಿಜೆಪಿಯವರಿಗೆ ದುಡ್ಡು ಕೊಟ್ಟು ಕೊಂಡುಕೊಳ್ಳೋ ಅಭ್ಯಾಸ ಇದೆ. ಹೀಗಾಗಿ ಶ್ರೀರಾಮನನ್ನ ಕೊಂಡು ಕೊಂಡಿದ್ದರೆಯೇ ನನಗೆ ಗೊತ್ತಿಲ್ಲ. ನಾನು ಸಣ್ಣವನಿದ್ದಾಗ ಶ್ರೀರಾಮ ನವಮಿ ದಿನ ಪಾನಕ, ಕೋಸಂಬರಿ, ಮಜ್ಜಿಗೆ ಹಂಚಿದ್ದೇನೆ. ನಮಗೆ ಅಂತಹ ರಾಮ ಬೇಕು. ಶ್ರೀರಾಮ ಬಿಜೆಪಿಯವರ ಆಸ್ತಿಯಲ್ಲ. ಈ ದೇಶದ ಸಂಸ್ಕೃತಿ, ಪರಂಪರೆಯ ಆಸ್ತಿ ಎಂದು ಗೃಹ ಸಚಿವರು ತಿಳಿಸಿದರು.


Spread the love

About Laxminews 24x7

Check Also

ವಸ್ತುಗಳನ್ನು ಸಾಗಿಸುತ್ತಿದ್ದಾಗ ಏಕಾಏಕಿ ಕುಸಿದ ಲಿಫ್ಟ್‌ – ಇನ್‌ಸ್ಟಾ ಮಾರ್ಟ್‌ ಉದ್ಯೋಗಿ ಸಾವು

Spread the loveಮಂಗಳೂರು: ವಸ್ತುಗಳನ್ನು ಸಾಗಿಸುತ್ತಿದ್ದಾಗ ಏಕಾಏಕಿ ಲಿಫ್ಟ್‌ ಕುಸಿದು ಇನ್‌ಸ್ಟಾ ಮಾರ್ಟ್‌ ಉದ್ಯೋಗಿ ಸಾವನ್ನಪ್ಪಿರುವ ಘಟನೆ ಮಂಗಳೂರಿನ  ಕುಂಟಿಕಾನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ