Breaking News

ಕಾಡಾನೆಗಳನ್ನು ನಮ್ಮ ಜಿಲ್ಲೆಗೆ ಓಡಿಸಿದ್ರೆ ಉಗ್ರ ಹೋರಾಟ – ಸರ್ಕಾರಕ್ಕೆ ಮೂಡಿಗೆರೆ ಜನರಿಂದ ಎಚ್ಚರಿಕೆ

Spread the love

ಚಿಕ್ಕಮಗಳೂರು: ಹಾಸನದ  ಬೇಲೂರು ತಾಲೂಕಿನಲ್ಲಿ ಆನೆಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಆನೆಯನ್ನ ಭದ್ರಾ ಅಭಯಾರಣ್ಯಕ್ಕೆ ಓಡಿಸಲು ಜಿಲ್ಲಾಡಳಿತ ಹಾಗೂ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಇದಕ್ಕೆ ಮೂಡಿಗೆರೆ ಜನ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಶಾಸಕರು, ಸಚಿವರು, ಅಧಿಕಾರಿಗಳು ತಮ್ಮ ತಲೆ ತೊಳೆದುಕೊಳ್ಳಲು ಆನೆ ಸಮಸ್ಯೆಯನ್ನು ನಮ್ಮ ತಲೆಗೆ ಕಟ್ಟಲು ಮುಂದಾಗಿದ್ದಾರೆ. 50ಕ್ಕೂ ಹೆಚ್ಚು ಆನೆಗಳ ಹಿಂಡು ಬೇಲೂರು – ಮೂಡಿಗೆರೆ ತಾಲೂಕಿನ ಗಡಿಯಲ್ಲಿವೆ. ದನ-ಕರುಗಳೇ ನಾವು ಹೇಳಿದಂತೆ ಹೋಗಲ್ಲ, ಇನ್ನೂ ಆನೆಗಳು ಹೋಗ್ತಾವಾ? ಎಂದು ಆಕ್ರೋಶ ಹೊರಹಾಕಿದ್ದಾರೆ.

ಬೇಲೂರಿನಿಂದ ಭದ್ರಾ ಅಭಯಾರಣ್ಯಕ್ಕೆ ಸುಮಾರು 100 ಕಿ.ಮೀ ದೂರವಿದೆ. 100 ಕಿ.ಮೀ ದೂರ 50 ಆನೆಯನ್ನ ಓಡೊಸೋದು ಅಂದ್ರೆ ಹುಡುಗಾಟನಾ? ಅಡಿಕೆ-ಕಾಫಿ ಕೊಯ್ಲಿನ ಸಮಯ, ತೋಟಗಳಲ್ಲಿ ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಿರುತ್ತಾರೆ. ಇದರಿಂದ ಅವರೆಲ್ಲ ತೊಂದರೆಗೆ ಒಳಗಾಗುತ್ತಾರೆ.

ಆನೆಗಳಿಂದ ಅನಾಹುತವಾದರೆ ಹೊಣೆ ಯಾರು? ಬೇಲೂರು ಶಾಸಕರ ಸ್ಥಿತಿಯೇ ನಾಳೆ ಮೂಡಿಗೆರೆ ಶಾಸಕರಿಗೂ ಬರುತ್ತದೆ. ಆನೆಯನ್ನು ಓಡಿಸೋದು ಬಿಟ್ಟು, ಬೇರೆ ಮಾರ್ಗ ಯೋಚಿಸಿ, ಸೆರೆ ಹಿಡಿದು ಸ್ಥಳಾಂತರಿಸಬೇಕು. ಆನೆಯನ್ನು ಓಡಿಸುವ ಕ್ರಮಕ್ಕೆ ಮುಂದಾದರೆ ನೀವು ಊಹೆ ಮಾಡದ ರೀತಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.


Spread the love

About Laxminews 24x7

Check Also

ದೇಶದ ಮೊದಲ ಕಾಲಿನ್ಸ್ ಏರೋಸ್ಪೇಸ್ ಎಂ.ಆರ್.ಓ ಘಟಕಕ್ಕೆ ಸಚಿವ ಎಂ.ಬಿ.ಪಾಟೀಲ್ ಭೂಮಿಪೂಜೆ

Spread the loveಬೆಂಗಳೂರು: ಇಲ್ಲಿನ ದೇವನಹಳ್ಳಿ ಏರೋಸ್ಪೇಸ್ ಪಾರ್ಕ್ ಪ್ರದೇಶದಲ್ಲಿ ಕಾಲಿನ್ಸ್ ಏರೋಸ್ಪೇಸ್ ಕಂಪನಿಯು ದೇಶದ ಮೊದಲ ವಿಮಾನ ನಿರ್ವಹಣೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ