Breaking News

ಯುಗಾದಿ ನಂತರ‌ ರಾಜ್ಯದಲ್ಲಿ ಒಳ್ಳೆ ಬೆಳೆ-ಮಳೆ, ಧಾರ್ಮಿಕ ಮುಖಂಡನ ಸಾವಾಗಲಿದೆ: ಕೋಡಿಶ್ರೀ ಸ್ಫೋಟಕ ಭವಿಷ್ಯ

Spread the love

ಕೋಲಾರ,  ಯುಗಾದಿ (Ugadi) ಕಳೆದ ನಂತರ‌ ರಾಜ್ಯದಲ್ಲಿ ಒಳ್ಳೆ ಬೆಳೆ ಮತ್ತು ಮಳೆಯಾಗುವ ಲಕ್ಷಣಗಳಿವೆ ಎಂದು ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ (kodimath dr sivananda shivayogi rajendra swamiji) ಭವಿಷ್ಯ ನುಡಿದಿದ್ದಾರೆ. ಸದ್ಯ ಮಳೆ-ಬೆಳೆ ಇಲ್ಲದೇ ಕಂಗಾಲಾಗಿರುವ ರೈತರಿಗೆ ಒಂದು ಸಮಾಧಾನಕರ ಭವಿಷ್ಯವೊಂದನ್ನು ಹೇಳಿದ್ದಾರೆ. ಅಲ್ಲದೇ ಮತಾದಂತೆ‌ ಹೆಚ್ಚಾಗುತ್ತದೆ, ಬಾಂಬ್ ಸ್ಫೋಟ, ಭೂಕಂಪ ಆಗುತ್ತೆ. ಧಾರ್ಮಿಕ ಮುಖಂಡನ ಸಾವು ಸಹ ಆಗಲಿದೆ ಎಂದು ಆಘಾತಕಾರಿ ಭವಿಷ್ಯ ನುಡಿದಿದ್ದಾರೆ.

ಯುಗಾದಿ ನಂತರ‌ ರಾಜ್ಯದಲ್ಲಿ ಒಳ್ಳೆ ಬೆಳೆ-ಮಳೆ, ಧಾರ್ಮಿಕ ಮುಖಂಡನ ಸಾವಾಗಲಿದೆ: ಕೋಡಿಶ್ರೀ ಸ್ಫೋಟಕ ಭವಿಷ್ಯ

ಕೋಲಾರದ ಜಿಲ್ಲೆ‌ ಮಾಲೂರು ಪಟ್ಟಣದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಕೋಡಿ ಮಠದ ಡಾ.ಶಿವನಂದ‌ ಶಿವಯೋಗಿ ಸ್ವಾಮೀಜಿ, ಯುಗಾದಿ ಕಳೆದ ನಂತರ‌ ರಾಜ್ಯದಲ್ಲಿ ಒಳ್ಳೆ ಬೆಳೆ ಮತ್ತು ಮಳೆಯಾಗುವ ಲಕ್ಷಣಗಳಿವೆ ಎಂದು ಭವಿಷ್ಯ ನುಡಿದರು. ಇನ್ನು ಇದೇ ವೇಳೆ ರಾಜ್ಯ ರಾಜಕೀಯ ಬಗ್ಗೆ ಯುಗಾದಿ ಕಳೆದ ನಂತರ ಹೇಳುವೆ, ಇನ್ನ ಸಾಕಷ್ಟು ಸಮಯವಿದೆ ಎಂದರು.ಗ್ಯಾರೆಂಟ್ ಗಳಿಂದ‌ ಸರ್ಕಾರ ನಡೆಯುತ್ತಿದ್ದೀಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ನನ್ನಗಿಂತ ನಿಮಗೆ ಚೆನ್ನಾಗಿ ಗೊತ್ತು. ರಾಷ್ಟ್ರ ರಾಜಕಾರಣ ಸಹ ಯುಗಾದಿ ಮೇಲೆ ಗೊತ್ತಾಗುತ್ತದೆ. ಯುಗಾದಿ ನಂತರ‌ ಭವಿಷ್ಯ ಬರುವುದು. ಒಂದು ತಿಂಗಳು ಕಳೆದ ಮೇಲೆ ಮಳೆ, ಬೇಳೆ, ರಾಜಕೀಯ, ದುಡಿಮೆ, ವ್ಯಾಪಾರ ಎಲ್ಲಾ ಗೊತ್ತಾಗಲಿದೆ ಎಂದು ಹೇಳಿದರು.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ