ಲೋಕಸಭೆ ಎಲೆಕ್ಶನ್ ಗೆ (MP election) ಕೆಲವೇ ತಿಂಗಳು ಬಾಕಿ ಉಳಿದಿದೆ. ಬಿಜೆಪಿ ಸದೆಬಡಿಯಲು ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ (Siddaramiah) ಚಕ್ರವ್ಯೂಹವನ್ನೇ ಸೃಷ್ಟಿ ಮಾಡೋಜೆ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಗ್ಯಾರಂಟಿ ಮೂಲಕ ಜನರ ಮನಗೆಲ್ಲೊ ಪ್ರಯತ್ನ ಮಾಡಿರೋ ಕಾಂಗ್ರೆಸ್ ಸರ್ಕಾರದ ಸಾರಥಿ ಸಿಎಂ ಸಿದ್ದರಾಮಯ್ಯ ಫೆ.16ಕ್ಕೆ ಬಜೆಟ್ (Budget) ಮಂಡನೆ ಮಾಡಲು ರೆಡಿಯಾಗಿದ್ದಾರೆ.
ಫೆಬ್ರವರಿ 12ರಿಂದ ಫೆಬ್ರವರಿ 23ರವರೆಗೆ ರಾಜ್ಯ ವಿಧಾನಮಂಡಲ ಅಧಿವೇಶನ ನಡೆಸಲು ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಬ್ರವರಿ 12ರಿಂದ ಫೆಬ್ರವರಿ 23ರವರೆಗೆ ಅಧಿವೇಶನ ನಡೆಸಲು ಮತ್ತು ಫೆಬ್ರವರಿ 16ರಂದು ರಾಜ್ಯ ಬಜೆಟ್ ಮಂಡಿಸಲು ನಿರ್ಧರಿಸಲಾಗಿದೆ.