Home / ರಾಜಕೀಯ / SC/ST ವಿದ್ಯಾರ್ಥಿಗಳಿಗೆ ‘ಗುಡ್ ನ್ಯೂಸ್ ಎಲ್ಲರಿಗೂ ಸಿಗಲಿದೆ ‘ಪ್ರೋತ್ಸಾಹ ಧನ’

SC/ST ವಿದ್ಯಾರ್ಥಿಗಳಿಗೆ ‘ಗುಡ್ ನ್ಯೂಸ್ ಎಲ್ಲರಿಗೂ ಸಿಗಲಿದೆ ‘ಪ್ರೋತ್ಸಾಹ ಧನ’

Spread the love

ಬೆಂಗಳೂರು: ಮೆಟ್ರಿಕ್ ನಂತರದ ವ್ಯಾಸಂಗದಲ್ಲಿ ಪಥಮ ಪ್ರಯತ್ನದಲ್ಲಿ, ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಕಾರ್ಯಕ್ರಮ ಸಂಬಂಧ ಹಾಲಿ ಇರುವ ಆದೇಶವನ್ನು ಮಾರ್ಪಡಿಸಿ ಆದೇಶವನ್ನು ಹೊರಡಿಸಿದೆ. ಹೊಸ ಆದೇಶದಲ್ಲಿ ಸ್.ಎಸ್.ಎಲ್.ಸಿ.

ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ ಜಾತಿಯ ವಿದ್ಯಾರ್ಥಿಗಳು ಶೇ.60 ರಿಂದ ಶೇ.74.99 ಅಂಕ ಪಡೆದಲ್ಲಿ ರೂ.7000/-ಗಳನ್ನು ಮತ್ತು ಶೇ.75 ಕ್ಕಿಂತ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ರೂ.15000/- ಗಳನ್ನು ಒಂದು ಬಾರಿಗೆ ಪ್ರೋತ್ಸಾಹ ಧನ ಮಂಜೂರು ಮಾಡಲು ಆದೇಶಿಸಲಾಗಿದೆ. ಅದರಂತೆ ಪಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿಯ ಎಲ್ಲಾ ವಿಧ್ಯಾರ್ಥಿಗಳಿಗೂ ಯಾವುದೇ ಅದಾಯ మితి ನಿಗದಿಪಡಿಸ ಪ್ರತಿಯೊಬ್ಬರಿಗೂ ಪ್ರೋತ್ಸಾಹಧನ ನೀಡಲು ಆದೇಶಿಸಲಾಗಿರುತ್ತದೆ.

ಮುಂದುವರದು, ಮೇಲೆ ಓದಲಾದ ಕ್ರಮಾಂಕ (2)ರ ಆದೇಶದಲ್ಲಿ ಯಾವುದ ಅದಾಯ ಮಿತಿ ನಿಗದಿಪಡಿಸದ ಮೆಟ್ರಿಕ್ ನಂತರದ ವಿವಿಧ ಕೋರ್ಸುಗಳಲ್ಲಿ ಪಥವ ಭಾರಿಗೆ, ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಎಲ್ಲಾ ಅರ್ಹ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ Online ಮೂಲಕ ಅರ್ಜಿ ಪಡೆದು ವಿದ್ಯಾರ್ಥಿಗಳ ಆಧಾ‌ ಜೋಡಿತ ಬ್ಯಾಂಕ್‌ ಖಾತೆಗಳಿಗೆ DBT ಮುಖಾಂತರ ಪ್ರೋತ್ಸಾಹಧನವನ್ನು ಮಂಜೂರು ಮಾಡಲು ಭಾರತ ಸರ್ಕಾರದ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನದ ಮಾರ್ಗಸೂಚಿಯನುಸಾರ ಈ ಕೆಳಗಿನಂತೆ ಕೋರ್ಸುಗಳನ್ನು ವಿಂಗಡಣೆ ಮಾಡಿ ವಿದ್ಯಾರ್ಥಿಗಳಿಗಿರಬೇಕಾದ ಅರ್ಹತೆ ಹಾಗೂ ಮಂಜೂರಾತಿ ವಿಧಾನದ ವಿವರವಾದ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಅದರ ವಿವರ ಈ ಕೆಳಕಂಡತಿದೆ.

ಸರ್ಕಾರದ ಆದೇಶ ಸಂಖ್ಯೆ:ಸಕಇ 89 ಸಮನ್ವಯ 2013(2), ದಿನಾಂಕ:04-09-2013 ಮತ್ತು ಸರ್ಕಾರದ ಆದೇಶ ಸಂಖ್ಯೆ:ಸಕಇ 9 ಪಕವಿ 2023 ದಿನಾಂಕ: 23-08-2023ರ ಆದೇಶಗಳನ್ನು ರದ್ದುಪಡಿಸುತ್ತಾ, 2023-2024ನೇ ಶೈಕ್ಷಣಿಕ ಸಾಲಿನಿಂದ ಜಾರಿಗೆ ಬರುವಂತೆ ಎಸ್.ಎಸ್.ಎಲ್.ಸಿ ಹಾಗೂ ಮೆಟ್ರಿಕ್ ನಂತರದ ವಿವಿಧ ಕೋರ್ಸುಗಳಲ್ಲಿ ಪಥಮ ಭಾರಿಗೆ, ಪಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ ಜಾತಿಯ ವಿದ್ಯಾರ್ಥಿಗಳಿಗೆ Online ಮೂಲಕ ಅರ್ಜಿ ಪಡೆದು ಅರ್ಹ ವಿದ್ಯಾರ್ಥಿಗಳ ಆಧಾ‌ ಜೋಡಿತ ಬ್ಯಾಂಕ್‌ ಖಾತೆಗಳಿಗೆ DBT ಮುಖಾಂತರ ಪ್ರೋತ್ಸಾಹಧನವನ್ನು ಮಂಜೂರು ಮಾಡಲು ಈ ಕೆಳಕಂಡಂತೆ ಕೋರ್ಸುಗಳನ್ನು ವಿಂಗಡಣೆ ಮಾಡಿ, ಪ್ರತಿಯೊಂದು ಕೋರ್ಸಿನಲ್ಲೂ ವಿದ್ಯಾರ್ಥಿಗಳು – ಪ್ರೋತ್ಸಾಹಧನ ಯೋಜನೆಗೆ ಪಡೆಯಬೇಕಾದ ಕನಿಷ್ಠ ಅಂಕಗಳು, ಅರ್ಜಿ ಸಲ್ಲಿಸಲು ಗರಿಷ್ಠ ಆದಾಯ ಮಿತಿ, ವಿದ್ಯಾರ್ಥಿಗಳಿಗಿರಬೇಕಾದ ಅರ್ಹತೆ ಹಾಗೂ ಮಾರ್ಗಸೂಚಿಗಳನ್ನು ಪರಿಷ್ಕರಿಸಿ ಆದೇಶಿಸಿದೆ.

Dailyhunt

Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ