Breaking News

ವಿಜಯೇಂದ್ರ ಹೂಗುಚ್ಚ ನೀಡಿ ನಾಟಕೀಯ ಪೋಸ್ ಕೊಡೋದು ಬೇಡ: ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಯತ್ನಾಳ್ ಕಿಡಿ

Spread the love

ನನ್ನ ಭೇಟಿಗೆ ಬರೋದು ಬೇಡ ಅಂತ ಬಿಜೆಪಿ ರಾಜ್ಯಾಧ್ಯಕ್ಷ ವಿ.ವೈ. ವಿಜೇಂದ್ರ ಅವರಿಗೆ ಹೇಳಿರುವುದಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಶುಕ್ರವಾರ ಹೇಳಿದ್ದಾರೆ. ವಿಜಯಪುರ: ನನ್ನ ಭೇಟಿಗೆ ಬರೋದು ಬೇಡ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜೇಂದ್ರ ಅವರಿಗೆ ಹೇಳಿರುವುದಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಶುಕ್ರವಾರ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್ ಅವರು, ವಿಜಯೇಂದ್ರ ಯಾಕ್ ಬರುತ್ತಾರೆ ನನ್ನ ಭೇಟಿಗೆ. ಸುಮ್ನೆ ಬರೋದ ಬೇಡ ಅಂತ ಹೇಳಿದ್ದೇನೆ. ಬಂದು ಹೂಗುಚ್ಚ ನೀಡಿ ನಾಟಕೀಯವಾಗಿ ಪೋಸ್ ಕೊಡುವುದು ಬೇಡ ಅಂತ ಹೇಳಿದ್ದೇನೆ ಎಂದರು

ನನ್ನನ್ನು ಪಕ್ಷದಿಂದ ಹೊರಹಾಕುವಲ್ಲಿ ನಿಮ್ಮ ಪಾತ್ರವೇನು? ಮಂತ್ರಿ ಮಾಡದೇ ನನ್ನನ್ನು ತುಳಿಯುವ ಪ್ರಯತ್ನ ಮಾಡಿದ್ದು ಸಹ ಗೊತ್ತು ಎಂದು ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಜಯಪುರಕ್ಕೆ ನೀಡಿದ್ದ 125 ಕೋಟಿ ರೂಪಾಯಿ ವಾಪಸ್ ಪಡೆದಿದ್ದು, ಯಡಿಯೂರಪ್ಪ ಸಿಎಂ ಆಗಿದ್ದಾಗ ನಾನು ಕೊಟ್ಟ ಪತ್ರ ಇಟ್ಕೊಂಡಿದ್ದು. ಹೀಗೆ ವಿಜಯೇಂದ್ರ ಮಾಡಿದ ಕೆಲಸಗಳ ಮಾಹಿತಿ ನನ್ನ ಬಳಿ ಇದೆ. ಸುಮ್ಮನೇ ಕಾಟಾಚಾರಕ್ಕೆ ನಮ್ಮ ಬಳಿ ಬರುವುದು ಬೇಡ. ಬಂದು ಹೂಗುಚ್ಚ ನೀಡಿ ನಾಟಕೀಯವಾಗಿ ಪೋಸ್ ಕೊಡೋದು ಬೇಡ ಎಂದು ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ