Breaking News

ಐಡಿಬಿಐನಲ್ಲಿ 2,100 ಹುದ್ದೆಗಳ ಭರ್ತಿಗೆ

Spread the love

ಬೆಂಗಳೂರು: ಇಂಡಸ್ಟ್ರಿಯಲ್​ ಡೆವಲಪ್‌ಮೆಂಟ್​​ ಬ್ಯಾಂಕ್​ ಆಫ್​ ಇಂಡಿಯಾದಲ್ಲಿ (ಐಡಿಬಿಐ) ಖಾಲಿ ಇರುವ 2,100 ಹುದ್ದೆಗಳ ಭರ್ತಿಗೆ ಅರ್ಜಿ ಕರೆಯಲಾಗಿದೆ.

ಭಾರತದಾದ್ಯಂತ ನೇಮಕಾತಿ ನಡೆಯಲಿದೆ. ಬ್ಯಾಂಕಿಂಗ್​ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದು.

ಹುದ್ದೆಗಳ ವಿವರ: ಜ್ಯೂನಿಯರ್​ ಅಸಿಸ್ಟೆಂಟ್​ ಮ್ಯಾನೇಜರ್​ 800, ಎಕ್ಸಿಕ್ಯುಟಿವ್​ (ಸೇಲ್ಸ್​ ಆಯಂಡ್​ ಆಪರೇಷನ್ಸ್​​) 1,300 ಹುದ್ದೆಗಳಿವೆ.

 ಅಧಿಸೂಚನೆವಿದ್ಯಾರ್ಹತೆ: ಅಧಿಕೃತ ವಿಶ್ವವಿದ್ಯಾಲಯ/ಮಂಡಳಿಯಿಂದ ಪದವಿ ಶಿಕ್ಷಣ.

ವೇತನ: ಜ್ಯೂನಿಯರ್​ ಅಸಿಸ್ಟೆಂಟ್​ ಮ್ಯಾನೇಜರ್​​ಗೆ ವಾರ್ಷಿಕ ಪ್ಯಾಕೇಜ್​ 6,14,00-6,50,000 ರೂ. ಎಕ್ಸಿಕ್ಯೂಟಿವ್​ (ಸೇಲ್ಸ್​ ಆಯಂಡ್​ ಆಪರೇಷನ್ಸ್​​) 29,000-31,000 ರೂ ವೇತನ ನಿಗದಿಪಡಿಸಲಾಗಿದೆ.

ವಯೋಮಿತಿ: ಕನಿಷ್ಠ ವಯಸ್ಸು 20. ಗರಿಷ್ಟ 25 ವರ್ಷ. ಹಿಂದುಳಿದ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ, ವಿಶೇಷಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 200 ರೂ ಶುಲ್ಕವಿದೆ. ಸಾಮಾನ್ಯ ಅಭ್ಯರ್ಥಿಗಳು 1,000 ರೂ ಅರ್ಜಿ ಶುಲ್ಕ ನಿಗದಿಸಲಾಗಿದೆ.

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ, ಸಂದರ್ಶನ ಮತ್ತು ವೈದ್ಯಕೀಯ ತಪಾಸಣೆ ಮೂಲಕ ಆಯ್ಕೆ.

ನವೆಂಬರ್​ 22ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಡಿಸೆಂಬರ್​ 6 ಕಡೇಯ ದಿನಾಂಕ. ಜ್ಯೂನಿಯರ್​ ಅಸಿಸ್ಟೆಂಟ್​ ಮ್ಯಾನೇಜರ್​​ ಹುದ್ದೆಗೆ ಡಿಸೆಂಬರ್​​ 31ರಂದು ಎಕ್ಸಿಕ್ಯೂಟಿವ್​ ಹುದ್ದೆಗೆ ಡಿಸೆಂಬರ್​ 30ರಂದು ಪರೀಕ್ಷೆ ನಡೆಯಲಿದೆ. ಹೆಚ್ಚಿನ ಮಾಹಿತಿ, ಅಧಿಕೃತ ಅಧಿಸೂಚನೆಗೆ idbibank.in ಇಲ್ಲಿಗೆ ಭೇಟಿ ನೀಡಿ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ