Breaking News
Home / ರಾಜಕೀಯ / ದೇಶದ ಸ್ವಾತಂತ್ರö್ಯ ಸಂಗ್ರಾಮಕ್ಕಾಗಿ ಹೋರಾಡಿದ ಮಹಾನ್ ಪುರುಷರನ್ನು ಕೇವಲ ಒಂದೇ ಸಮುದಾಯಕ್ಕೆ ಸೀಮಿತ ಮಾಡುವುದು ಸರಿಯಲ್ಲ: ಬಾಲಚಂದ್ರ ಜಾರಕಿಹೊಳಿ

ದೇಶದ ಸ್ವಾತಂತ್ರö್ಯ ಸಂಗ್ರಾಮಕ್ಕಾಗಿ ಹೋರಾಡಿದ ಮಹಾನ್ ಪುರುಷರನ್ನು ಕೇವಲ ಒಂದೇ ಸಮುದಾಯಕ್ಕೆ ಸೀಮಿತ ಮಾಡುವುದು ಸರಿಯಲ್ಲ: ಬಾಲಚಂದ್ರ ಜಾರಕಿಹೊಳಿ

Spread the love

ಮೂಡಲಗಿ : ದೇಶದ ಸ್ವಾತಂತ್ರö್ಯ ಸಂಗ್ರಾಮಕ್ಕಾಗಿ ಹೋರಾಡಿದ ಮಹಾನ್ ಪುರುಷರನ್ನು ಕೇವಲ ಒಂದೇ ಸಮುದಾಯಕ್ಕೆ ಸೀಮಿತ ಮಾಡುವುದು ಸರಿಯಲ್ಲ. ಮುಂಬರುವ ದಿನಗಳಲ್ಲಿ ಎಲ್ಲ ಮಹಾನ್ ಪುರುಷರ ಜಯಂತಿ ಕಾರ್ಯಕ್ರಮಗಳನ್ನು ಎಲ್ಲ ಸಮುದಾಯದವರನ್ನು ಒಂದುಗೂಡಿಸಿ ಒಗ್ಗಟ್ಟಿನಿಂದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಹಾನ್ ಪುರುಷರಿಗೆ ಗೌರವ ಆದರ ನೀಡುವ ಮೂಲಕ ಅವರ ಸೇವೆಗಳನ್ನು ತಿಳಿಸಲು ಪ್ರಯತ್ನಿಸಲಾಗುವುದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ತಾಲೂಕಿನ ಕಲ್ಲೋಳಿ ಪಟ್ಟಣದ ಬಲಭೀಮ ರಂಗಮAದಿರದ ಆವರಣದಲ್ಲಿ ಜರುಗಿದ ವೀರ ರಾಣಿ ಕಿತ್ತೂರು ಚನ್ನಮ್ಮಾ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಿತ್ತೂರು ಚನ್ನಮ್ಮಾ-ಸಂಗೊಳ್ಳಿ ರಾಯಣ್ಣನಂತಹ ದೇಶಪ್ರೇಮಿ ಹೋರಾಟಗಾರರನ್ನು ಕೇವಲ ಒಂದು ಸಮಾಜಕ್ಕೆ ಸೀಮಿತ ಮಾಡದೇ ಪ್ರತಿಯೊಂದು ಸಮಾಜಗಳು ಇಂತಹವರ ಆದರ್ಶಗಳನ್ನು ನೆನೆಯಬೇಕಾಗಿದೆ ಎಂದು ಅವರು ಹೇಳಿದರು.

ಕಳೆದ ವರ್ಷದಿಂದ ಅರಭಾವಿ ಕ್ಷೇತ್ರದಲ್ಲಿ ಸ್ವಾತಂತ್ರö್ಯ ಹೋರಾಟಗಾರರ ಜಯಂತಿ ಕಾರ್ಯಕ್ರಮಗಳನ್ನು ಸಡಗರದಿಂದ ಆಚರಿಸಲಾಗುತ್ತಿದೆ. ಈ ವರ್ಷವೂ ಚನ್ನಮ್ಮಾ ಜಯಂತಿ ಕಾರ್ಯಕ್ರಮವನ್ನು ಎಲ್ಲ ಸಮಾಜಗಳ ಬಾಂಧವರ ಮಧ್ಯ ಅಚ್ಚುಕಟ್ಟಾಗಿ ಆಚರಿಸಲು ಸಂಘಟಕರಿಗೆ ಸಲಹೆ ಮಾಡಿದ್ದೆ. ಅದರಂತೆ ಇಂದಿನ ಕಾರ್ಯಕ್ರಮವೂ ಕೂಡ ಬಹಳ ಚೆನ್ನಾಗಿ ನೆರವೇರಿದೆ. ಚನ್ನಮ್ಮಾ, ರಾಯಣ್ಣನ ಹೋರಾಟಗಳನ್ನು ನಾವೆಂದೂ ಮರೆಯಬಾರದು. ವೈಯಕ್ತಿಕ ಲಾಭಕ್ಕಾಗಿ, ತಮ್ಮ ಆಸ್ತಿಗಾಗಿ ಹೋರಾಟ ಮಾಡದೇ ದೇಶದ ಸ್ವತಂತ್ರಕ್ಕಾಗಿ ಬ್ರಿಟೀಷರೊಂದಿಗೆ ಹೋರಾಡಿ ಭಾರತಕ್ಕೆ ಸ್ವಾತಂತ್ರö್ಯ ತಂದು ಕೊಟ್ಟ ಮಹಾನ್ ವೀರರು ಎಂದು ಅವರು ಬಣ್ಣಿಸಿದರು.
ನಮ್ಮಿಂದಾಗುವ ಒಳ್ಳೆಯ ಕಾರ್ಯಗಳು ಸ್ಮರಣಿಕೆಯಾಗಿ ಉಳಿಯಬೇಕು. ಸಮಾಜಕ್ಕೆ ಒಳ್ಳೆಯದನ್ನೇ ಬಯಸಬೇಕು. ಹೊರತು ಕೆಟ್ಟ ಕೆಲಸಗಳನ್ನು ಎಂದಿಗೂ ಮಾಡಬಾರದು. ಒಂದು ವೇಳೆ ನಮಗೆ ಒಳ್ಳೆಯ ಕೆಲಸ ಮಾಡಲಿಕ್ಕೆ ಸಾಧ್ಯವಾಗದಿದ್ದಲ್ಲಿ ಎಂದಿಗೂ ಕೆಟ್ಟ ಕಾರ್ಯಕ್ಕೆ ಕೈ ಹಾಕಬಾರದು. ಕೆಟ್ಟ ಕೆಲಸಗಳನ್ನು ಮಾಡಬೇಕಾದ ಸಂದರ್ಭ ಬಂದರೆ ಆ ಸಂದರ್ಭದಲ್ಲಿ ಮೌನಕ್ಕೆ ಶರಣಾಗಬೇಕು ಎಂದು ಅವರು ತಿಳಿಸಿದರು.

ಈಗಾಗಲೇ ಪಂಚಮಸಾಲಿ ಸಮಾಜದವರು ೨ಎ ಮೀಸಲಾತಿ, ಹಾಲುಮತ ಕುರುಬ ಸಮಾಜದವರು ಎಸ್‌ಟಿ ಮೀಸಲಾತಿ ಮತ್ತು ಉಪ್ಪಾರ ಸಮಾಜದವರು ಎಸ್‌ಸಿ ಮೀಸಲಾತಿಗಾಗಿ ಹೋರಾಟಗಳನ್ನು ಮಾಡುತ್ತಿದ್ದಾರೆ. ಆ ಸಮುದಾಯಗಳ ಹೋರಾಟಕ್ಕೆ ಸದಾ ಬೆಂಬಲ ನೀಡುವುದಾಗಿ ತಿಳಿಸಿದ ಅವರು, ನಮ್ಮ ಸರ್ಕಾರವಿದ್ದಾಗ ಮೀಸಲಾತಿ ಕಲ್ಪಿಸಿ ಕೊಡುವುದರ ಬಗ್ಗೆ ಸಮುದಾಯಗಳ ಹೋರಾಟಕ್ಕೆ ಬೆನ್ನೆಲುಬಾಗಿ ನಿಂತಿದ್ದಾಗಿ ಹೇಳಿದರು.

ಗೋಕಾಕ ಮತ್ತು ಮೂಡಲಗಿ ತಾಲೂಕುಗಳಲ್ಲಿ ಎಲ್ಲ ಸಮಾಜಗಳು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿವೆ. ಪ್ರಬಲ, ಹಿಂದುಳಿದ, ಅಲ್ಪಸಂಖ್ಯಾತ ಮತ್ತು ಪಜಾ, ಪಪಂ ಸೇರಿದಂತೆ ಎಲ್ಲ ಜಾತಿಯ ಜನರನ್ನು ಒಗ್ಗಟ್ಟಿನಿಂದ ಸೇರಿಸುವ ಮೂಲಕ ನಮ್ಮದು ಸರ್ವ ಜನಾಂಗಗಳ ಶಾಂತಿಯ ತೋಟವಾಗಿದೆ. ಕೌಜಲಗಿಯಲ್ಲಿ ಮುಂದಿನ ವರ್ಷ ಚನ್ನಮ್ಮಾ ಜಯಂತಿಯನ್ನು ಆಚರಿಸುವ ನಿರ್ಣಯ ಕೈಗೊಂಡಿರುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು.

ಸಾನಿಧ್ಯವಹಿಸಿದ್ದ ಹುಣಶ್ಯಾಳ ಪಿಜಿ ಮಹಾಸ್ವಾಮಿ ನಿಜಗುಣ ದೇವರು ಮಾತನಾಡಿ, ಕಿತ್ತೂರು ಚನ್ನಮ್ಮನ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ. ಚಿಕ್ಕ ವಯಸ್ಸಿನಲ್ಲಿಯೇ ಅಗಾಧ ಹೋರಾಟಗಳನ್ನು ಮೈಗೂಡಿಸಿಕೊಂಡು ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಅಣಿಯಾದ ಚನ್ನಮ್ಮನಂತಹ ವೀರ ವನಿತೆ ಪ್ರತಿ ಮನೆ ಮನೆಗಳಲ್ಲೂ ಹುಟ್ಟಬೇಕು. ಶೌರ್ಯಕ್ಕೆ ಮತ್ತೊಂದು ಹೆಸರೇ ಚನ್ನಮ್ಮಾ ಎಂದು ಬಣ್ಣಿಸಿದರು.
ಭಾಗೋಜಿಕೊಪ್ಪದ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಮಕ್ಕಳಿಗೆ ದೇಶಾಭಿಮಾನ ಕೊರತೆಯಾಗಿದೆ. ಸ್ವಾತಂತ್ರö್ಯ ಹೋರಾಟಗಾರರು, ದೇಶ ಭಕ್ತರ ಬಗ್ಗೆ ಪಾಲಕರು ಮಕ್ಕಳಿಗೆ ತಿಳಿಸಬೇಕಾಗಿದೆ. ಚನ್ನಮ್ಮಾ ಹಾಗೂ ರಾಯಣ್ಣನಂತಹ ಅಪ್ರತಿಮ ಸಾಧಕರನ್ನು ಪ್ರತಿಯೊಬ್ಬರೂ ಗೌರವಿಸಬೇಕಾಗಿದೆ ಎಂದು ಹೇಳಿದರು.

ಸುಣಧೋಳಿ ಶಿವಾನಂದ ಮಹಾಸ್ವಾಮಿಗಳು ಮಾತನಾಡಿ, ಚನ್ನಮ್ಮ ತಮ್ಮ ಇಡೀ ಜೀವನವನ್ನು ಈ ನಾಡಿಗಾಗಿ ಮೀಸಲಿಟ್ಟರು. ದೇಶಕ್ಕೆ ಸ್ವಾತಂತ್ರö್ಯ ತಂದುಕೊಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು ಎಂದು ತಿಳಿಸಿದರು.

ಗೋಕಾಕ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸಮರ್ಥ ನೇತೃತ್ವದಲ್ಲಿ ಕಿತ್ತೂರು ಚನ್ನಮ್ಮಾ ಜಯಂತಿ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆದಿದೆ. ವೀರ ಪುರುಷರನ್ನು ಒಂದೇ ಜಾತಿಗೆ ಸೇರಿಸದೇ ಎಲ್ಲ ಜನಾಂಗಗಳ ಸಮ್ಮುಖದಲ್ಲಿ ಕಾರ್ಯಕ್ರಮವನ್ನು ಬಾಲಚಂದ್ರ ಜಾರಕಿಹೊಳಿ ಅವರು ಆಯೋಜಿಸಿದ್ದಾರೆ. ಸರ್ವ ಜನಾಂಗಗಳ ಶಾಂತಿಯ ತೋಟ ನಮ್ಮ ಹೆಮ್ಮೆಯ ಶಾಸಕರು ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಹಿರಿಯ ಸಹಕಾರಿ ಬಿ.ಆರ್. ಪಾಟೀಲ(ನಾಗನೂರ), ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸಗೌಡ ಪಾಟೀಲ(ಕಲ್ಲೋಳಿ), ಯುವ ಧುರೀಣರಾದ ರಾಹುಲ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ, ಪ್ರದೇಶ ಕುರುಬರ ಸಂಘದ ನಿರ್ದೇಶಕ ಡಾ.ರಾಜೇಂದ್ರ ಸಣ್ಣಕ್ಕಿ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ಮೂಡಲಗಿ ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಬಸನಗೌಡ ಪಾಟೀಲ, ಜಿಲ್ಲಾ ಸಹಕಾರಿ ಯುನಿಯನ್ ಅಧ್ಯಕ್ಷ ಬಸಗೌಡ ಪಾಟೀಲ(ಮೆಳವಂಕಿ), ಟಿಎಪಿಸಿಎಂಎಸ್ ಉಪಾಧ್ಯಕ್ಷ ವಿಠ್ಠಲ ಪಾಟೀಲ, ಎಸ್‌ಎಲ್‌ಡಿಪಿ ನಿರ್ದೇಶಕ ರಾಜು ಬೈರುಗೋಳ, ಮುಖಂಡರಾದ ಸುಭಾಸ ಕುರಬೇಟ, ಮಹಾಂತೇಶ ಕಪ್ಪಲಗುದ್ದಿ, ಬಿ.ಬಿ. ದಾಸನವರ, ವಸಂತ ತಹಶೀಲ್ದಾರ, ಬಸವರಾಜ ಯಾದಗೂಡ, ಅಶೋಕ ಮಕ್ಕಳಗೇರಿ, ಮಲ್ಲಪ್ಪ ಹೆಬ್ಬಾಳ, ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ ಸ್ವಾಗತಿಸಿದರು. ಶಿಕ್ಷಕ ಎ.ಜಿ. ಕೋಳಿ ನಿರೂಪಿಸಿದರು.


Spread the love

About Laxminews 24x7

Check Also

ಹೋಟೆಲ್ ರೂಮಿನಲ್ಲಿ ಇಬ್ಬರು ಪುರುಷರೊಂದಿಗೆ ವಿವಾಹಿತ ಮಹಿಳೆಯ ಚೆಲ್ಲಾಟ

Spread the love ಇತ್ತೀಚಿನ ದಿನಗಳಲ್ಲಿ ವಿವಾಹಿತ ಪುರುಷರು ಮತ್ತು ಮಹಿಳೆಯರ ಅಕ್ರಮ ಸಂಬಂಧದ ಪ್ರಕರಣಗಳು ಹೆಚ್ಚುತ್ತಿವೆ. ಇದೀಗ ಇಂತಹದ್ದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ