Breaking News

ಹನುಮಾನ್ ನಗರದ ಗ್ಲಾಸ್ ಹೌಸ್ ನಲ್ಲಿ ಝೀ ಕನ್ನಡ ಸರಿಗಮಪ ಖ್ಯಾತಿಯ ದಿಯಾ ಹೆಗಡೆಗೆ ಸನ್ಮಾನ

Spread the love

ಬೆಳಗಾವಿ: ಬೆಳಗಾವಿ ಹನುಮಾನ್ ನಗರದ ಗ್ಲಾಸ್ ಹೌಸ್ ನಲ್ಲಿ ಭಾನುವಾರ ತುಂಬಿದ ಸಭಾಗೃಹದಲ್ಲಿ ಝೀ ಕನ್ನಡ ಸರಿಗಮಪ ಖ್ಯಾತಿಯ ದಿಯಾ ಹೆಗಡೆಗೆ ಸನ್ಮಾನ ಕಾರ್ಯಕ್ರಮ ಜರುಗಿತು. ಬೆಳಗಾವಿ ನಾಗರಿಕರು, ಹನುಮಾನ್ ಪ್ರಸಾದ ಸಮಿತಿಯ ಪದಾಧಿಕಾರಿ ಗಳಾದ ರಾಹುಲ್ ಮೇತ್ರಿ, ಡಿ.ಸಿ. ದೇಶಪಾಂಡೆ, ಅಳಗುಂಡಗಿ ಮತ್ತು ಶ್ರೀ ಲಲಿತಾ ಆರಾಧನಾ ಮಂಡಳಿಯ ಪ್ರತಿಮಾ ಅಂಬೇಕರ್, ಭಾವನಾ ಕುಲ್ಕರ್ಣಿ, ಸುನೀತಾ ಮಾನೆ, ಸಾವಿತ್ರೀ ಪಾಟೀಲ್, ದೀಪಾ ದೇಶಪಾಂಡೆ, ಸಂಧ್ಯಾ ಭಟ್ ಸನ್ಮಾನಿಸಿದರು.

 

ಶಿವಪುತ್ರ ಫಟ್ಕಲ್, ಪ್ರಹಲ್ಲಾದ ಅಂಬೇಕರ್, ಚಿದಂಬರ ಕುಲ್ಕರ್ಣಿ, ಜಯೇಂದ್ರ ಮಾನೆ, ಗಣೇಶ್ ಹೆಗಡೆ, ಪರಮೇಶ್ವರ ಹೆಗಡೆ, ಸುಬ್ರಹ್ಮಣ್ಯ ಭಟ್ ಮತ್ತು ಸೀತಾರಾಂ ಭಾಗ್ವತ್ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದಿಯಾ ಹೆಗಡೆ ಮತ್ತು ಸಹೋದರಿ ದಿಶಾ ಹೆಗಡೆಯವರನ್ನು ಸನ್ಮಾನಿಸಲಾಯಿತು. ದಿಯಾ ಹೆಗಡೆ ಸನ್ಮಾನಕ್ಕೆ ಉತ್ತರಿಸಿ, ಬೆಳಗಾವಿಯ ನಾಗರಿಕರು ಹಾಗೂ ಕಾರ್ಯಕ್ರಮ ಸಂಘಟಕರಿಗೆ ಧಾನ್ಯವಾದ ಹೇಳಿದರು. ಕೊನೆಯಲ್ಲಿ, ದಿಶಾ ಹೆಗಡೆಯವರು ಶ್ಲೋಕ, ಹಾಡು, ಮತ್ತು ಸಿನೆಮಾ ಸಂಗೀತ ಪ್ರಸ್ತುತಪಡಿಸಿದರು.


Spread the love

About Laxminews 24x7

Check Also

ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆ. 1ರಂದು 16ನೇ ಪದವಿ ಪ್ರದಾನ ಸಮಾರಂಭ

Spread the loveಬಾಗಲಕೋಟೆ: ನಗರದ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನ 2024–25ನೇ ಸಾಲಿನ ವಿದ್ಯಾರ್ಥಿಗಳಿಗಾಗಿ ೧೬ನೇ ಪದವಿ ಪ್ರದಾನ ಸಮಾರಂಭವನ್ನು ಆಗಸ್ಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ