Breaking News

ಬಿಗ್‍ಬಾಸ್ ಸೀಸನ್-7ರ ವಿನ್ನರ್ ನಟ ಶೈನ್ ಶೆಟ್ಟಿ ಅವರಿಗೆ ಬಿಗ್‍ಬಾಸ್ ಕಾರ್ಯಕ್ರಮದ ಪ್ರಶಸ್ತಿಯ ಕಾರು 10 ತಿಂಗಳ ಬಳಿಕ ದೊರಕಿದೆ.

Spread the love

ಬೆಂಗಳೂರು: ಬಿಗ್‍ಬಾಸ್ ಸೀಸನ್-7ರ ವಿನ್ನರ್ ನಟ ಶೈನ್ ಶೆಟ್ಟಿ ಅವರಿಗೆ ಬಿಗ್‍ಬಾಸ್ ಕಾರ್ಯಕ್ರಮದ ಪ್ರಶಸ್ತಿಯ ಕಾರು 10 ತಿಂಗಳ ಬಳಿಕ ದೊರಕಿದೆ.

ಬಿಗ್‍ಬಾಸ್ ಸೀಸನ್-7ರ ವಿನ್ನರ್ ಶೈನ್‍ಶೆಟ್ಟಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಧಾರಾವಾಹಿ ಮೂಲಕ ಜನರಿಗೆ ಹತ್ತಿರವಾಗಿದ್ದ ಅವರು, ನಂತರ ತೆರೆ ಮರೆಗೆ ಜಾರಿದ್ದರು. ಆದರೆ ಬಿಗ್‍ಬಾಸ್ ಸೀಸನ್-7ರಲ್ಲಿ ಕಾಣಿಸಿಕೊಂಡು ಕರುನಾಡ ಜನರ ಮನಸ್ಸುನ್ನು ಕದ್ದಿದ್ದರು. ಈಗ ಅವರ ಗೆಲುವಿಗೆ ಪ್ರಶಸ್ತಿಯಾಗಿ ಬಂದ ಕಾರನ್ನು ಟಾಟಾ ಮೋಟರ್ಸ್ ಅವರಿಗೆ ನೀಡಿದೆ.

ಬಿಗ್‍ಬಾಸ್ ಕಾರ್ಯಕ್ರಮದ ಪ್ರಯೋಜಕತ್ವವನ್ನು ಪಡೆದುಕೊಂಡಿದ್ದ, ಟಾಟಾ ಮೋಟರ್ಸ್ ಕಂಪನಿ ವಿನ್ನರ್ ಗೆ ಕಾರನ್ನು ಕೊಡುಗೆಯಾಗಿ ಕೊಡುವುದಾಗಿ ಹೇಳಿತ್ತು. ಅಂತೆಯೇ ಈಗ ಕಾರನ್ನು ಬಿಗ್‍ಬಾಸ್ ವಿನ್ನರ್ ಶೈನ್ ಶೆಟ್ಟಿ ಅವರಿಗೆ ನೀಡಿದೆ. ಈ ಕಾರನ್ನು ಮೊದಲೇ ನೀಡಬೇಕಿತ್ತು. ಆದರೆ ಹೊಸ ಮಾದರಿಯ ಕಾರನ್ನು ನೀಡುವ ಸಲುವಾಗಿ ಇಷ್ಟು ದಿನ ನೀಡಿರಲಿಲ್ಲ. ಈಗ ಟಾಟಾ ಮೋಟರ್ಸ್ ಅವರು ಉನ್ನತ ಮಟ್ಟದ ಟಾಟಾ ಆಲ್ಟ್ರೋಜ್ ಹೊಸ ಮಾದರಿಯ ಕಾರನ್ನು ಶೈನ್ ಶೆಟ್ಟಿಯವರಿಗೆ ನೀಡಿದೆ.

ಈ ವಿಚಾರವಾಗಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ವಿಡಿಯೋವನ್ನು ಹಂಚಿಕೊಂಡಿರುವ ಶೈನ್ ಶೆಟ್ಟಿ, ಟಾಟಾ ಆಲ್ಟ್ರೋಜ್ ಬಿಗ್‍ಬಾಸ್ ಸೀಸನ್-7 ಕಾರ್. ನಿಮ್ಮೆಲ್ಲರ ಆಶೀರ್ವಾದದಿಂದ ಈ ಕಾರು ನನಗೆ ದೊರಕಿರುವುದೆಂದು ಸಂತಸದಿಂದ ತಿಳಿಸ ಬಯಸುತ್ತೇನೆ. ಎಲ್ಲ ಕೆಲಸಗಳನ್ನು ಉತ್ತಮವಾಗಿ ನಿಭಾಯಿಸಿದ ಕೀ ಮೋಟರ್ಸ್ ಕನಕಪುರ ರೋಡ್ ಇವರಿಗೆ ಧನ್ಯವಾದಗಳು. ಹಾಗೆಯೇ ಕೊಡುಗೆ ನೀಡಿರುವ ಟಾಟಾ ಮೋಟರ್ಸ್ ಅವರಿಗೂ ಧನ್ಯವಾದ ಎಂದು ಶೈನ್ ತಿಳಿಸಿದ್ದಾರೆ.

 


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ