Breaking News
Home / ರಾಜಕೀಯ / ಕೊಮುಲ್​ನಲ್ಲಿ 179 ಹುದ್ದೆಗಳಿಗೆ ನೇಮಕಾತಿ

ಕೊಮುಲ್​ನಲ್ಲಿ 179 ಹುದ್ದೆಗಳಿಗೆ ನೇಮಕಾತಿ

Spread the love

ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಕರ್ನಾಟಕ ಹಾಲು ಉತ್ಪಾದಕರ ಸಂಘದಿಂದ ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟ ನಿಯಮಿತಕ್ಕೆ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ.

ಸಂಸ್ಥೆಯಲ್ಲಿ ಖಾಲಿ ಇರುವ ಸಹಾಯಕ ವ್ಯವಸ್ಥಾಪಕರು, ಲೆಕ್ಕಾಧಿಕಾರಿ ಸೇರಿದಂತೆ ಒಟ್ಟು 179 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪದವಿ ಪಡೆದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆ, ನೇಮಕಾತಿ, ಅರ್ಜಿ ಸಲ್ಲಿಕೆ ಸೇರಿದಂತೆ ಇನ್ನಿತರ ಮಾಹಿತಿ ಈ ಕೆಳಗಿನಂತಿದೆ.

 ಅಧಿಸೂಚನೆಹುದ್ದೆ ವಿವರ:

  • ಸಹಾಯಕ ವ್ಯವಸ್ಥಾಪಕರು (ಎಎಚ್​ ಮತ್ತು ಎಐ) -26
  • ಸಹಾಯಕ ವ್ಯವಸ್ಥಾಪಕರು (ಹಣಕಾಸು ) – 1
  • ತಾಂತ್ರಿಕ ಅಧಿಕಾರಿ ಡಿಟಿ – 15
  • ಮಾರ್ಕೆಟಿಂಗ್​ ಅಧಿಕಾರಿ – 1
  • ಸಿಸ್ಟಂ ಅಧಿಕಾರಿ – 1
  • ಕೃಷಿ ಅಧಿಕಾರಿ – 3
  • ಆಡಳಿತಾತ್ಮಕ ಅಧಿಕಾರಿ – 1
  • ತಾಂತ್ರಿಕ ಅಧಿಕಾರಿ – 1
  • ಲೆಕ್ಕಾಧಿಕಾರಿ – 1
  • ವಿಸ್ತರಣಾಧಿಕಾರಿ ಗ್ರೇಡ್​3 -13
  • ಡೈರಿ ಮೇಲ್ವಿಚಾರಕರು ಗ್ರೇಡ್​2 – 12
  • ಆಡಳಿತಾತ್ಮಕ ಸಹಾಯಕ ಗ್ರೇಡ್​2 -24
  • ಕೆಮಿಸ್ಟ್​ ಗ್ರೇಡ್​2 -21
  • ಅಕೌಂಟ್​ ಅಸಿಸ್ಟಂಟ್​ ಗ್ರೇಡ್​2 -21
  • ಮಾರ್ಕೆಟಿಂಗ್​ ಅಸಿಸ್ಟಂಟ್​ ಗ್ರೇಡ್​2 -11
  • ಜ್ಯೂನಿಯರ್​ ಸಿಸ್ಟಂ ಆಪರೇಟರ್​ -15
  • ಕೊ- ಆರ್ಡಿನೇಟರ್​ – 6

ವಿದ್ಯಾರ್ಹತೆ: ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ ವಾಣಿಜ್ಯ, ಬಿಇ, ಸೇರಿದಂತೆ ಇನ್ನಿತರ ವಿಷಯದಲ್ಲಿ ಪದವಿಯನ್ನು ಪೂರ್ಣಗೊಳಿಸಿರಬೇಕು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಂಪ್ಯೂಟರ್​ನ ಮೂಲಭೂತ ಜ್ಞಾನವನ್ನು ಹೊಂದಿರುವುದು ಕಡ್ಡಾಯವಾಗಿದೆ. ಪದವಿಯಲ್ಲಿ ಕಂಪ್ಯೂಟರ್​ ಅಭ್ಯಾಸ ಮಾಡಿದ ಅಭ್ಯರ್ಥಿಗಳು ಕಂಪ್ಯೂಟರ್​ ಸರ್ಟಿಫಿಕೆಟ್​ ಸಲ್ಲಿಕೆ ಮಾಡಲು ವಿನಾಯಿತಿ ಹೊಂದಿರುತ್ತಾರೆ.

ವೇತನ: ಹುದ್ದೆಗೆ ಅನುಸಾರವಾಗಿ 27650-97100 ರೂ. ವೇತನವನ್ನು ನಿಗದಿಸಲಾಗಿದೆ.

ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಗರಿಷ್ಠ 35 ವರ್ಷಗಳನ್ನು ಪೂರ್ಣಗೊಳಿಸಿರಬೇಕು. ಪ.ಜಾ, ಪ.ಪಂ ಮತ್ತು ಪ್ರವರ್ಗ 1 ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪ್ರವರ್ಗ 2ಎ, 2ಬಿ ಮತ್ತು 3 ಬಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಅರ್ಜಿ ಸಲ್ಲಿಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ 1 ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ 500 ರೂ. ಮತ್ತು ಇತರೆ ಅಭ್ಯರ್ಥಿಗಳಿಗೆ 1000 ರೂ. ಅರ್ಜಿ ಶುಲ್ಕ ನಿಗದಿಸಲಾಗಿದೆ.

ಈ ಹುದ್ದೆಗಳಿಗೆ ಸೆಪ್ಟೆಂಬರ್​ 5ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಅಕ್ಟೋಬರ್​ 6 ಆಗಿದೆ.

ಈ ಹುದ್ದೆ ನೇಮಕಾತಿಯ ಸಂಪೂರ್ಣ ವಿವರ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು komul.coop ಈ ಜಾಲತಾಣಕ್ಕೆ ಭೇಟಿ ನೀಡಬೇಕಿದೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ