Breaking News
Home / ರಾಜಕೀಯ / Bigg Boss season 10: ಬಿಗ್​ ಬಾಸ್​ ಸೀಸನ್​ 10 ಶೀಘ್ರವೇ ಪ್ರಾರಂಭವಾಗಲಿದೆ.

Bigg Boss season 10: ಬಿಗ್​ ಬಾಸ್​ ಸೀಸನ್​ 10 ಶೀಘ್ರವೇ ಪ್ರಾರಂಭವಾಗಲಿದೆ.

Spread the love

Bigg Boss season 10: ಬಿಗ್​ ಬಾಸ್​ ಸೀಸನ್​ 10 ಶೀಘ್ರವೇ ಪ್ರಾರಂಭವಾಗಲಿದೆ.

ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ‘ಬಿಗ್​ ಬಾಸ್’​ ಕೂಡ ಒಂದು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ನಡೆಸಿಕೊಡುವ ಈ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ.

ಈವರೆಗೆ ಒಂಬತ್ತು ಸೀಸನ್​ಗಳನ್ನು ಯಶಸ್ವಿಯಾಗಿ ಮುಗಿಸಿರುವ ಬಿಗ್​ ಬಾಸ್​ ಇದೀಗ ಮತ್ತೆ ಬಂದಿದೆ. ಬಿಗ್​ ಬಾಸ್​ 10ನೇ ಸೀಸನ್​ ಶೀಘ್ರವೇ ಪ್ರಾರಂಭವಾಗಲಿದೆ. ನಿನ್ನೆ ಕಿಚ್ಚನ ಹುಟ್ಟುಹಬ್ಬದಂದು ಹೊಸ ಸೀಸನ್​ನ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಈ ಹಿಂದಿನ ಎಲ್ಲಾ ಸೀಸನ್​ಗಿಂತ ಈ ಬಾರಿಯ ಬಿಗ್​ ಬಾಸ್​ ಸಂಥಿಂಗ್​ ಸ್ಪೆಷಲ್​ ಆಗಿರಲಿದೆ ಎಂದು ಪ್ರೋಮೋದಲ್ಲಿ ಹೇಳಲಾಗಿದೆ.

ಈ ಬಾರಿ ಸಂಥಿಂಗ್​ ಸ್ಪೆಷಲ್​.. ಹೌದು, ಬಿಗ್​ ಬಾಸ್​ ಸೀಸನ್​ 10ರ ಪ್ರೋಮೋ ಕುತೂಹಲ ಮೂಡಿಸಿದೆ. ಏಕೆಂದರೆ ಬಿಗ್​ ಬಾಸ್​ ಮನೆಯಲ್ಲಿ ಕ್ಯಾಮರಾಗಳನ್ನಿಟ್ಟು ಸ್ಪರ್ಧಿಗಳ ಚಲನ ವಲನ, ಅವರ ಮಾತುಗಳನ್ನು ಈವರೆಗೆ ಪ್ರೇಕ್ಷಕರಿಗೆ ತೋರಿಸಲಾಗುತ್ತಿತ್ತು. ಎಲ್ಲಾ ಸೀಸನ್​ಗಳ ಪ್ರೋಮೋಗಳು ಕೂಡ ಹೀಗೆಯೇ ಇರುತ್ತಿತ್ತು. ಆದರೆ ಇದೀಗ ಬಿಡುಗಡೆಯಾಗಿರುವ ಪ್ರೋಮೋ ತುಸು ಭಿನ್ನವಾಗಿದೆ. ಈ ಬಾರಿ ರಿಯಾಲಿಟಿ ಶೋ ಸಂಥಿಂಗ್​ ಸ್ಪೆಷಲ್​ ಆಗಿರಲಿದೆ. ಪ್ರೋಮೋದಲ್ಲಿ ಮನೆಯೊಳಗಿನ ಕ್ಯಾಮರಾದ ಬದಲಿಗೆ ರಸ್ತೆಯಲ್ಲಿನ ಕ್ಯಾಮರಾಗಳನ್ನು ತೋರಿಸಲಾಗಿದೆ.

 

 

ರಸ್ತೆಯಲ್ಲಿ ಕಟ್ಟಡಗಳಿಗೆ ಅಳವಡಿಸಿರುವ ಸಿಸಿಟಿವಿ ಕ್ಯಾಮರಾಗಳನ್ನು ತೋರಿಸಿ, ರಸ್ತೆಯಲ್ಲಿ ಓಡಾಡುವ ವ್ಯಕ್ತಿಗಳ ದೃಶ್ಯಗಳನ್ನು ಸೆರೆ ಹಿಡಿದು ಪ್ರೋಮೋವನ್ನು ಕೊಂಚ ಡಿಫರೆಂಟ್​ ಆಗಿಯೇ ತೋರಿಸಲಾಗಿದೆ. ಅಲ್ಲದೇ ಪ್ರೋಮೋದ ಹಿನ್ನಲೆ ಧ್ವನಿಯಲ್ಲಿ, “ನಮಸ್ತೆ ಕರ್ನಾಟಕ. ಹೇಗಿದ್ದೀರಾ? ನನ್ನ ಮಿಸ್​ ಮಾಡ್ಕೊಂಡ್ರಾ? ಇಟ್ಟ ನೋಟ ಗಟ್ಟಿಯಾಗಿದೆ. ಆಟ ಮತ್ತೆ ಶುರುವಾಗ್ತಿದೆ. ಆದ್ರೆ ಈ ಬಾರಿ ಸಂಥಿಂಗ್​​ ಸ್ಪೆಷಲ್​” ಎಂದು ಹೇಳಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ