Breaking News

ಶಿವಶಕ್ತಿ ಪಾಯಿಂಟ್​ನಲ್ಲಿ 3×4 ವ್ಯಾಸದ ಕುಳಿ ಚಿತ್ರ ಕಳುಹಿಸಿದ ರೋವರ್​.. ಪಥ ಬದಲಿಸಿ ಅಧ್ಯಯನ ಮುಂದುವರಿಕೆ

Spread the love

ಬೆಂಗಳೂರು​: ಚಂದ್ರನ ಶಿವಶಕ್ತಿ ಪಾಯಿಂಟ್​ ಸುತ್ತಲೂ ಅಧ್ಯಯನ ಆರಂಭಿಸಿರುವ ಪ್ರಜ್ಞಾನ್​ ರೋವರ್​ ದೊಡ್ಡ ಕುಳಿಯನ್ನು ಗುರುತಿಸಿದೆ.

8 ಮೀಟರ್ ದೂರದ ಸಂಚಾರದಲ್ಲಿ ಮಾರ್ಗ ಮಧ್ಯೆ ಕುಳಿಯೊಂದು ಬಂದಿದ್ದು, ನೇರವಾಗಿ ಚಲಿಸುವ ಬದಲು ಅಲ್ಲಿಂದ ಪಕ್ಕಕ್ಕೆ ಸರಿದು ಪ್ರಯೋಗ ಮುಂದುವರಿಸಿದೆ. ಶಶಿಯ ಈ ಕುಳಿ 3×4 ವ್ಯಾಸ ಹೊಂದಿದೆ ಎಂದು ಇಸ್ರೋ ತಿಳಿಸಿದೆ. ಆಗಸ್ಟ್ 27 ರಂದು ರೋವರ್​ ಈ ಕುಳಿಯ ಸಮೀಪ ಸಾಗಿದೆ. ಬಳಿಕ ಹೊಸ ಮಾರ್ಗವನ್ನು ಆಯ್ದುಕೊಂಡು ಸುರಕ್ಷಿತವಾಗಿ ಮುಂದೆ ಸಾಗುತ್ತಿದೆ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

ರೋವರ್​ ಸಾಗಿರುವ ಹಾದಿಯಲ್ಲಿ ಮೂಡಿರುವ ಗುರುತು ಮತ್ತು ದೊಡ್ಡ ಕುಳಿಯನ್ನು ಅದರಲ್ಲಿರುವ ನ್ಯಾವಿಗೇಷನ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದರ ಎರಡು ಚಿತ್ರಗಳನ್ನು ಇಸ್ರೋ ಸಾಮಾಜಿಕ ಮಾಧ್ಯಮವಾದ ಎಕ್ಸ್​ನಲ್ಲಿ (ಹಿಂದಿನ ಟ್ವಿಟರ್​) ಹಂಚಿಕೊಂಡಿದೆ.

ತಾಪಮಾನ ಅಳೆದ ರೋವರ್​: ನಿನ್ನೆ(ಆಗಸ್ಟ್​ 27) ಯಷ್ಟೇ ಚಂದ್ರನ ಮೇಲ್ಮೈ ಮತ್ತು ಮಣ್ಣಿನ ಆಳದಲ್ಲಿನ ತಾಪಮಾನವನ್ನು ಅಳೆದು ಭೂಮಿಗೆ ರವಾನಿಸಿತ್ತು. ಚಂದ್ರನ ಮಣ್ಣಿನ 10 ಸೆಂ.ಮೀ ಆಳದಲ್ಲಿ -10 ಡಿಗ್ರಿ ಸೆಲ್ಸಿಯಸ್ ತಾಪ ಇದೆ ಎಂದು ಗುಣಿಸಿ ಹೇಳಿತ್ತು. ಈ ಮೂಲಕ ಚಂದ್ರಯಾನ-3 ಯೋಜನೆಯ ಮೂರನೇ ಉದ್ದೇಶವೂ ಸಫಲತೆ ಕಂಡಿತ್ತು.

ಆಗಸ್ಟ್​ 23 ರಂದು ಲ್ಯಾಂಡರ್​ ಚಂದ್ರನ ಮೇಲೆ ಇಳಿದು ಮೊದಲ ಉದ್ದೇಶ ಪೂರ್ಣಗೊಂಡಿತ್ತು. ಬಳಿಕ ಅದರಲ್ಲಿನ ಪ್ರಜ್ಞಾನ್​ ರೋವರ್​ ಸಂಚಾರ ಆರಂಭಿಸಿ ಎರಡನೇ ಉದ್ದೇಶವೂ ಸಾಕಾರವಾಗಿತ್ತು. ಮೂರನೇ ಮತ್ತು ಮುಖ್ಯ ಉದ್ದೇಶವಾದ ಅಲ್ಲಿನ ವಾತಾವರಣ ಅಧ್ಯಯನದ ಬಗ್ಗೆಯೂ ರೋವರ್​ ಕೆಲಸ ಮಾಡಿ, ವಿಜ್ಞಾನಿಗಳು ಅಂದುಕೊಂಡಂತೆ ಎಲ್ಲ ಕಾರ್ಯಗಳನ್ನೂ ಪೂರೈಸುತ್ತಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ