Home / ಅಂತರಾಷ್ಟ್ರೀಯ / ಮೊದಲ ‘ಜೇಮ್ಸ್‌ ಬಾಂಡ್‌’, ನಟ ಶಾನ್‌ ಕಾನರಿ ನಿಧನ

ಮೊದಲ ‘ಜೇಮ್ಸ್‌ ಬಾಂಡ್‌’, ನಟ ಶಾನ್‌ ಕಾನರಿ ನಿಧನ

Spread the love

ವಾಷ್ಟಿಂಗನ್: ಜನಪ್ರಿಯ ‘ಜೇಮ್ಸ್‌ ಬಾಂಡ್‌’ ಸರಣಿ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದ ಶಾನ್‌ ಕಾನರಿ ಶನಿವಾರ (ಆ.31) ಕೊನೆಯುಸಿರೆಳೆದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. 1962ರಿಂದ 1971ರವರೆಗೆ ಮೂಡಿಬಂದ 6 ಜೇಮ್ಸ್‌ ಬಾಂಡ್‌ ಸಿನಿಮಾಗಳಲ್ಲಿ ಶಾನ್‌ ಕಾನರಿ ಹೀರೋ ಆಗಿ ನಟಿಸಿದ್ದರು. ಆ ಮೂಲಕ ಅವರು ಸ್ಟಾರ್‌ ನಟನಾಗಿ ಮಿಂಚಿದರು.

ಚಿತ್ರರಂಗದಲ್ಲಿ ಬಾಂಡ್ ಚಿತ್ರಗಳಿಗೆ ಪ್ರತ್ಯೇಕ ಸ್ಥಾನವಿದೆ. ಇಲ್ಲಿಯವರೆಗೂ ಹಾಲಿವುಡ್ ನಲ್ಲಿ ಬಾಂಡ್ ಹೆಸರಿನಲ್ಲಿ 25 ಸಿನಿಮಾಗಳು ಬಂದಿವೆ. ಅದರಲ್ಲೂ ಮೊದಲ ಬಾಂಡ್ ಸಿನಿಮಾದಲ್ಲಿ ನಟಿಸಿದ್ದ ಸೀನ್ ಕಾನರಿ ಅವರು ನಿಧನ ಹೊಂದಿದ್ದಾರೆ

90 ವರ್ಷದ ಸೀನ್ ಕಾನರಿ ಅವರು ಬಾಂಡ್ ಸರಣಿಯ 7 ಚಿತ್ರಗಳಲ್ಲಿ ಬಾಂಡ್ ಪಾತ್ರದಲ್ಲಿ ನಟಿಸಿದ್ದಾರೆ. ಬಾಂಡ್ ಸರಣಿ ಮೊದಲ ಐದು ಚಿತ್ರಗಳಲ್ಲಿ ಸೀನ್ ಕನರಿ ನಟಿಸಿದ್ದರು. ಸರ್ ಥಾಮಸ್ ಸೀನ್ ಕಾನರಿ ಅವರು 1930ರ ಆಗಸ್ಟ್ 25ರಂದು ಫೌಂಟೇನ್ ಬ್ರಿಡ್ಜ್ ನಲ್ಲಿ ಜನಿಸಿದ್ದರು.

‘ದಿ ಅನ್‌ಟಚಬಲ್ಸ್‌’ ಚಿತ್ರದಲ್ಲಿನ ಅಭಿನಯಕ್ಕಾಗಿ ಶಾನ್‌ ಕಾನರಿ ಅವರು 1988ರಲ್ಲಿ ಅತ್ಯುತ್ತಮ ಪೋಷಕ ನಟ ಆಸ್ಕರ್‌ ಪ್ರಶಸ್ತಿ ಪಡೆದುಕೊಂಡಿದ್ದರು. ಮೂರು ಬಾರಿ ‘ಗೋಲ್ಡನ್‌ ಬ್ಲೋಬ್‌’ ಅವಾರ್ಡ್‌ ಪಡೆದುಕೊಂಡಿದ್ದು ಅವರು ಹೆಚ್ಚುಗಾರಿಕೆ. ‘ಮರ್ಡರ್‌ ಆನ್‌ ದಿ ಓರಿಯಂಟ್‌ ಎಕ್ಸ್‌ಪ್ರೆಸ್‌’, ‘ದ ಮ್ಯಾನ್‌ ಹೂ ವುಡ್‌ ಬಿ ಕಿಂಗ್‌’, ‘ದ ನೇಮ್‌ ಆಫ್‌ ದ ರೋಸ್‌’ ಮುಂತಾದವು ಶಾನ್‌ ಕಾನರಿ ನಟನೆಯ ಇತರೆ ಪ್ರಮುಖ ಸಿನಿಮಾಗಳು.

ಸೀನ್ ಕಾನರಿ ಡಾ. ನಂ., ಫ್ರಮ್ ರಷ್ಯಾ ವಿತ್ ಲವ್, ಗೋಲ್ಡ್ ಫಿಂಗರ್, ಥಂಡರ್ ಬಾಲ್, ಯು ಓನ್ಲಿ ಲಿವ್ ಟ್ವೈಸ್, ಡೈಮಂಡ್ ಫೇವರ್ ಮತ್ತು ನೇವರ್ ಸೇ ನೇವರ್ ಅಗೇನ್ ಚಿತ್ರಗಳಲ್ಲಿ ನಟಿಸಿದ್ದಾರೆ.


Spread the love

About Laxminews 24x7

Check Also

100 ರನ್​ಗಳಿಂದ ಗೆದ್ದ ಭಾರತ; ವಿಶ್ವಕಪ್​ನಿಂದ ಹೊರಬಿದ್ದ ಹಾಲಿ ಚಾಂಪಿಯನ್ …

Spread the loveಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಹೈವೋಲ್ಟೇಜ್ ವಿಶ್ವಕಪ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ