Breaking News
Home / ಅಂತರಾಷ್ಟ್ರೀಯ / ಡಿ.1ರವರೆಗೆ ಮತ್ತೆ ಲಾಕ್‍ಡೌನ್..!

ಡಿ.1ರವರೆಗೆ ಮತ್ತೆ ಲಾಕ್‍ಡೌನ್..!

Spread the love

ಜರ್ಮನಿ,ಅ.29- ವಿಶ್ವವನ್ನೇ ಕಂಗೆಡಿಸಿರುವ ಮಹಾಮಾರಿ ಕೊರೊನಾ ಕೆಲವು ದೇಶಗಳಲ್ಲಿ ನಿಯಂತ್ರಣದಲ್ಲಿದ್ದರೂ ಇನ್ನು ಕೆಲವು ದೇಶಗಳಲ್ಲಿ ತನ್ನ ಅಬ್ಬರವನ್ನು ಮುಂದುವರೆಸಿದ್ದು ಆತಂಕಕಾರಿಯಾಗಿದೆ. ಕೊರೊನಾ ಮಹಾಮಾರಿಯನ್ನು ತಡೆಯಲು ಆಯಾ ದೇಶಗಳಲ್ಲಿ ಅಗತ್ಯವಾದ ಕ್ರಮಗಳನ್ನು ಕೈಗೊಂಡಿದ್ದರೂ ಇದರ ಕಾಟ ಕಡಿಮೆಯಾಗದಿರುವುದರಿಂದ ಕೆಲವು ದೇಶಗಳಲ್ಲಿ ಮತ್ತೆ ಲಾಕ್‍ಡೌನ್ ಏರಿಕೆ ಮಾಡಲು ಸರ್ಕಾರಗಳು ಮುಂದಾಗಿವೆ.

ಜರ್ಮನಿ ಹಾಗೂ ಫ್ರಾನ್ಸ್ ಗಳಲ್ಲಿ ಕೊರೊನಾ ಮಹಾಮಾರಿಯ ಕಾಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇರುವುದರಿಂದ ಆ ದೇಶಗಳಲ್ಲಿ 2ನೇ ಲಾಕ್‍ಡೌನ್ ಮಾಡಲು ಚಿಂತಿಸಿದೆ. ಜರ್ಮನ್‍ನ ಚಾನ್ಸಲರ್ ಏಂಜೆಲಾ ಮರ್ಕೆಲ್ ಅವರು ಈಗಾಗಲೇ ಡಿಸೆಂಬರ್‍ವರೆಗೆ ಲಾಕ್‍ಡೌನ್ ಅನ್ನು ಘೋಷಿಸಿದ್ದಾರೆ. ಆದರೆ ಸುರಕ್ಷಿತ ಕ್ರಮಗಳನ್ನು ಅಳವಡಿಸಿಕೊಂಡು ಶಾಲೆಗಳನ್ನು ನಡೆಸಲು ಚಿಂತಿಸಲಾಗಿದೆ ಎಂದು ತಿಳಿಸಿದ್ದಾರೆ.ಫ್ರಾನ್ಸ್‍ನಲ್ಲಿ ದಿನನಿತ್ಯ 36 ಸಾವಿರ ಮಂದಿಯಲ್ಲಿ ಕೊರೊನಾ ಕೇಸ್‍ಗಳು ಪತ್ತೆಯಾಗುತ್ತಿರುವುದರಿಂದ ಅಧ್ಯಕ್ಷ ಇಮ್ಯೂನ್ಯುಯಲ್ ಮಾಕ್ರನ್ ಅವರು ಕೂಡ ಡಿಸೆಂಬರ್ 1ರವರೆಗೆ ಲಾಕ್‍ಡೌನ್ ಜಾರಿ ಮಾಡಿದ್ದಾರೆ.


Spread the love

About Laxminews 24x7

Check Also

100 ರನ್​ಗಳಿಂದ ಗೆದ್ದ ಭಾರತ; ವಿಶ್ವಕಪ್​ನಿಂದ ಹೊರಬಿದ್ದ ಹಾಲಿ ಚಾಂಪಿಯನ್ …

Spread the loveಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಹೈವೋಲ್ಟೇಜ್ ವಿಶ್ವಕಪ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ