Breaking News

ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಣಯಗಳು ಸರಿಯಿಲ್ಲ

Spread the love

ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವು ರೈತ ವಿರೋಧಿ ಧೋರಣೆ ಹೊಂದಿದೆ. ಅಲ್ಲದೇ, ಕೈಗಾರಿಕೆಗಳಿಗೆ ಹಾಗು ಜನಸಾಮಾನ್ಯರಿಗೆ ಹೊಡೆತ ನೀಡುವ ನಿರ್ಧಾರಗಳನ್ನು ಕೈಗೊಂಡಿದೆ ಎಂದು ರಾಜ್ಯಸಭಾ ಸಂಸದ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ತಿಳಿಸಿದ್ದಾರೆ.

ಎಪಿಎಂಸಿ ಕಾನೂನು ರದ್ದು ಮಾಡುವ ಮೂಲಕ ರೈತರು ತಾವು ಬೆಳೆದಂತಹ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡುವ ಸ್ವಾತಂತ್ರ್ಯದಿಂದ ವಂಚಿತರಾಗಿದ್ದಾರೆ. ಹಿಂದೆ ಸಾಗಾಣಿಕೆ ವೆಚ್ಚ, ದಲ್ಲಾಳಿಗಳ ಕಮಿಷನ್ ಇತರ ಖರ್ಚುಗಳ ಉಳಿತಾಯವಾಗುತ್ತಿತ್ತು.

ಈ ಮೇಲಿನ ಅನುಕೂಲಗಳನ್ನು ರದ್ದುಪಡಿಸಿ, ಕೇವಲ ಎಪಿಎಂಸಿಗಳಲ್ಲಿ ಮಾತ್ರ ಮಾರಾಟ ಮಾಡುವ ಹಳೆಯ ಕಾನೂನು ಜಾರಿಗೆ ತರುವುದು ಎಷ್ಟು ಸಮಂಜಸ ಎಂದು ಪತ್ರಿಕಾ ಹೇಳಿಕೆ ಮೂಲಕ ಪ್ರಶ್ನಿಸಿದ್ದಾರೆ. ವಿದ್ಯುತ್ ದರ ಏರಿಕೆ ಬಗ್ಗೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದು, ಏಕಾಏಕಿ ವಿದ್ಯುತ್ ದರ ಏರಿಕೆಯಿಂದ ಬಟ್ಟೆ ಕೈಗಾರಿಕೆಗಳು, ರೈಸ್ ಮಿಲ್, ಬೆಲ್ಲ- ಸಕ್ಕರೆ ಉತ್ಪಾದನಾ ಕೈಗಾರಿಕೆಗಳು ಸೇರಿದಂತೆ ಅತಿ ಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆ (ಎಂಎಸ್‍ಎಂಇ) ಇವುಗಳಿಗೆ ಬಾರಿ ಹೊಡೆತ ಉಂಟಾಗಿದೆ. ಗೃಹ ಬಳಕೆಯ ಪ್ರತಿ ಯುನಿಟ್‍ಗೆ ಸರಾಸರಿ 70 ಪೈಸೆ ದರ ಹೆಚ್ಚಳ ಹಾಗೂ ಕನಿಷ್ಠ ದರವನ್ನು 60 ನಿಂದ 70 ರೂ. ಗೆ ಹೆಚ್ಚಳ ಮಾಡಲಾಗಿದೆ. ಈ ರೀತಿ ಬೇಕಾಬಿಟ್ಟಿ ದರ ಏರಿಕೆ ಮಾಡುವ ಮೂಲಕ ಗೃಹ ಬಳಕೆದಾರರಿಗೆ, ಸಣ್ಣ ಉದ್ಯಮದಾರರಿಗೆ ಪೆಟ್ಟು ನೀಡಿರುವುದು ಯಾವ ನ್ಯಾಯ ಎಂದು ಅವರು ಟೀಕಿಸಿದ್ದಾರೆ.

ರೈತ ವಿದ್ಯಾನಿಧಿ ಯೋಜನೆಯನ್ನು ರದ್ದು ಮಾಡಲಾಗಿದೆ. 11 ಲಕ್ಷ ರೈತ ಕುಟುಂಬದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ರೂ 438.69 ಕೋಟಿ ರೂಪಾಯಿಗಳ ರೈತ ವಿದ್ಯಾನಿಧಿ ಯೋಜನೆಯನ್ನು ರದ್ದು ಪಡಿಸುವ ಮೂಲಕ ಬಡ ರೈತನ ಮಕ್ಕಳಿಗೆ ಅನ್ಯಾಯವೆಸಗುತ್ತಿರುವುದು ಎಷ್ಟು ಸರಿ. ಹಾಗು ಜಿಲ್ಲೆಗೊಂದು ಗೋಶಾಲೆ ಯೋಜನೆ ರದ್ದು ಮಾಡಿದ್ದು ಸರಿಯಲ್ಲ ಎಂದಿದ್ದಾರೆ. ಗೋಹತ್ಯೆ ತಡೆ ಹಾಗೂ ಜಾನುವಾರು ಸಂರಕ್ಷಿಸಲು ಪ್ರತಿ ಜಿಲ್ಲೆಗೊಂದು ಗೋಶಾಲೆಯನ್ನು ಸ್ಥಾಪಿಸಲು ಬಿಜೆಪಿ ಸರ್ಕಾರ ತಿರ್ಮಾನಿಸಿತ್ತು. ಅಂತಹ ಪೂಜನೀಯ ಗೋಮಾತೆಯನ್ನು ಅಕ್ರಮ ಗೋ ಸಾಗಾಣೆಕಾರರಿಗೆ ಲಾಭ ಮಾಡಿಕೊಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ಹಿಂಪಡೆಯಲಾಗಿದೆ ಎಂದು ಈರಣ್ಣ ಕಡಾಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ಅತ್ತೆ-ಮಾವನ ಮನಸ್ಥಿತಿ ಎಂದಿಗೂ ಬದಲಾಗಲ್ಲʼ; ವಿಡಿಯೋ ರೆಕಾರ್ಡ್‌ ಮಾಡಿ ನೇಣಿಗೆ ಶರಣಾದ ಶಿಕ್ಷಕಿ

Spread the loveನವದೆಹಲಿ: ಮದುವೆಯಾದ 8 ತಿಂಗಳ ಬಳಿಕ ಸರ್ಕಾರಿ ಶಿಕ್ಷಕಿಯೊಬ್ಬರು ವಿಡಿಯೋ ರೆಕಾರ್ಡ್‌ ಮಾಡಿ, ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ