Breaking News

ಕ್ಷುಲ್ಲಕ ಕಾರಣಕ್ಕಾಗಿ ನವ ವಿವಾಹಿತೆ ಆತ್ಮಹತ್ಯೆ

Spread the love

ಬೆಳಗಾವಿ: ಕ್ಷುಲ್ಲಕ ಕಾರಣಕ್ಕಾಗಿ ನವ ವಿವಾಹಿತೆ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಸುಳಗಾ ಗ್ರಾಮದಲ್ಲಿ ನಡೆದಿದೆ.
ಜ್ಯೋತಿ ನಿಖಿಲ್‌ ಚೋಪಡೆ (19) ಆತ್ಮಹತ್ಯೆಗೆ ಶರಣಾದ ನವ ವಿವಾಹಿತೆ.

ಕಳೆದ ಐದು  ತಿಂಗಳ ಹಿಂದಷ್ಟೇ ಜ್ಯೋತಿ, ಉಚಗಾಂವ ಗ್ರಾಮದ ನಿಖಿಲ್ ಎಂಬಾತನೊಂದಿಗೆ ಪ್ರೇಮ ವಿವಾಹವಾಗಿದ್ದಳು.  ತವರು ಮನೆಗೆ ಆಗಮಿಸಿದ್ದ  ಜ್ಯೋತಿ ಒಂದಿಲ್ಲದೊಂದು ಬೇಡಿಕೆ ಇಡುತ್ತಿದ್ದಳು. ಇತ್ತೀಚೆಗಷ್ಟೆ ಪೋಷಕರಿಗೆ ಕಾಡಿಬೇಡಿ  ಫ್ರೀಡ್ಜ್  ಖರೀದಿಸಿದ್ದಳು. ಇದೀಗ  ಸೋಫಾ‌ ಸೆಟ್ ಕೊಡಿಸುವಂತೆ ಬೇಡಿಕೆ ಇಟ್ಟಿದ್ದಳು.  ಹಣ ಬಂದ ಕೂಡಲೇ ಕೊಡಿಸುವುದಾಗಿ ತಂದೆ ಹೇಳಿದ್ದರು‌. ಆದ್ರೆ ತಾಳ್ಮೆ ಕಳೆದುಕೊಂಡ ಜ್ಯೋತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

 


Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ