ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಭೇಟಿಗೆ ಪತ್ನಿ ವಿಜಯಲಕ್ಷ್ಮಿ ಹಾಗೂ ನಟಿ ರಕ್ಷಿತಾ ತೆರಳಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿಗೆ ಇಬ್ಬರು ಪ್ರತ್ಯೇಕವಾಗಿ ಆಗಮಿಸಿದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ದರ್ಶನ್ ಅವರೊಂದಿಗೆ ಮಾತುಕತೆ ನಡೆಸಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಜೈಲಿನಲ್ಲಿರುವ ಗೆಳೆಯ ದರ್ಶನ್ ರನ್ನ ಎರಡನೇ ಬಾರಿಗೆ ರಕ್ಷಿತಾ ಭೇಟಿ ಮಾಡಿದ್ದು, ಜೈಲಿನಲ್ಲಿ ದರ್ಶನ್ ಪರಿಸ್ಥಿತಿ ಕಂಡು ರಕ್ಷಿತಾ ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ.
ಗೆಳೆಯನಿಗೆ ಎದುರಾಗಿರುವ ಸಂಕಷ್ಟದ ಬಗ್ಗೆ ರಕ್ಷಿತಾ ಬೇರಸಗೊಂಡಿದ್ದರು. ಭೇಟಿ ಬಳಿಕ ಜೈಲಿನಿಂದ ಬೇಸರದಿಂದಲೇ ರಕ್ಷಿತಾ ಮತ್ತು ದರ್ಶನ್ ಪತ್ನಿ ವಿಜಯಲಕ್ಷ್ಮೀ ಹೊರಬಂದರು. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ರಕ್ಷಿತಾ ನಿರಾಕರಿಸಿದರು. ಆದರೆ ದರ್ಶನ್ ಹೇಗಿದ್ದಾರೆ? ಎಂಬ ಪ್ರಶ್ನೆಗೆ ಮಾತ್ರ ಚೆನ್ನಾಗಿದ್ದಾರೆ ಎಂದು ಉತ್ತರಿಸಿ ರಕ್ಷಿತಾ ಮತ್ತು ವಿಜಯಲಕ್ಷ್ಮೀ ತೆರಳಿದರು.
ರೇಣುಕಾಸ್ವಾಮಿ ಕೇಸಲ್ಲಿ ಇತ್ತೀಚೆಗೆ ಒಂದು ವರ್ಷದೊಳಗೆ ವಿಚಾರಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಸೂಚಿಸಿದ್ದ ಕೋರ್ಟ್ ಅಲ್ಲಿಯವರೆಗೆ ಜಾಮೀನು ನೀಡಲು ನಿರಾಕರಿಸಿತ್ತು. ಈ ಆದೇಶದ ಅನ್ವಯ ಮುಂದಿನ ವರ್ಷ ಮೇ 15ರ ವರೆಗೆ ದರ್ಶನ್‌ಗೆ ಜೈಲಿನಲ್ಲಿರುವುದು ಅನಿವಾರ್ಯವಾಗಿದೆ.
Laxmi News 24×7