Breaking News

ಎಲ್ ನಿನೋ ಎಫೆಕ್ಟ್ – ರಾಜ್ಯದ 25 ಜಿಲ್ಲೆಗಳಲ್ಲಿ ಮಳೆ ಕೊರತೆ

Spread the love

ಬೆಂಗಳೂರು: ಎಲ್‌ನಿನೋ ಎಫೆಕ್ಟ್‌ನಿಂದ ರಾಜ್ಯದಲ್ಲಿ ಮಳೆ ಕೊರತೆಯಾಗಿದೆ. ದಕ್ಷಿಣ ಕನ್ನಡ, ಮೈಸೂರು, ಕೊಡಗು, ಉತ್ತರ ಕನ್ನಡ, ಉಡುಪಿ, ಮಂಡ್ಯ ಸೇರಿದಂತೆ ಒಟ್ಟು 25 ಜಿಲ್ಲೆಗಳಲ್ಲಿ ಮಳೆ ಕೊರತೆ ಉಂಟಾಗಿದೆ.

ವಿಜಯನಗರದ  ಜಿಲ್ಲೆಯಲ್ಲಂತೂ ತೀವ್ರ ಮಳೆಯ ಕೊರತೆ ಎದುರಾಗಿದ್ದು, ಕರುನಾಡು ಬರದ ತೀವ್ರತೆಗೆ ಸಿಲುಕಿದೆ. ಕೇವಲ 5 ಜಿಲ್ಲೆಗಳಿಗೆ ಮಾತ್ರ ವಾಡಿಕೆಯ ಮಳೆಯಾಗಿದೆ. ಬೆಳಗಾವಿಯ ರೈತರು ಸಹ ವಾಡಿಕೆಯಂತೆ ಕಡಿಮೆ ಮೆಳೆಯಾಗಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಪ ಮಳೆಯಿಂದ ಕುಡಿಯುವ ನೀರಿನ ಸಮಸ್ಯೆ ತಾತ್ಕಾಲಿಕ ನಿವಾರಣೆಯಾಗಿದೆ. ಆದರೆ ಕೃಷಿ ಚಟುವಟಿಕೆಗೆ ಮಳೆ ಇಲ್ಲದೆ ಜಲಾಶಯಗಳ ನೀರು ಬಳಸದ ಪರಿಸ್ಥಿತಿಗೆ ರೈತರು ಸಿಲುಕಿದ್ದಾರೆ.

ಇನ್ನು, ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ಹಾರಂಗಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಇನ್ನೊಂದು ವಾರ ಇದೇ ರೀತಿ ಮಳೆ ಮುಂದುವರಿದರೆ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ. ಒಟ್ಟು 2,859 ಅಡಿ ಗರಿಷ್ಠ ನೀರಿನ ಮಟ್ಟದ ಈ ಜಲಾಶಯ 15 ದಿನಗಳಿಂದ ಈಚೆಗೆ ಸುರಿದ ಮಳೆಯಿಂದ 17 ಅಡಿ ಭರ್ತಿಯಾಗಿದೆ. ಜಲಾಶಯ ತುಂಬಲು ಇನ್ನೂ 8 ಅಡಿಯಷ್ಟೇ ಬಾಕಿ ಉಳಿದಿದೆ. ಸದ್ಯ ಹಾರಂಗಿ ಜಲಾಶಯಕ್ಕೆ 3,000ಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದು ಬರುತ್ತಿದೆ.


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ