Home / ರಾಜಕೀಯ / ಗೆರೆ ದಾಟಿ ನೀನು ಬರಂಗಿಲ್ಲ, ನಾನು ಬರಲ್ಲ?

ಗೆರೆ ದಾಟಿ ನೀನು ಬರಂಗಿಲ್ಲ, ನಾನು ಬರಲ್ಲ?

Spread the love

ರಾಮನಗರ: ಜೋಡೆತ್ತುಗಳ ಮಧ್ಯೆ ಹೊಂದಾಣಿಕೆ ರಾಜಕೀಯ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಕನಕಪುರ ಕ್ಷೇತ್ರಕ್ಕೆ ಮಾಜಿ ಸಿಎಂ HDK ಹೋಗುತ್ತಿಲ್ಲ, ಚನ್ನಪಟ್ಟಣಕ್ಕೆ ಡಿ.ಕೆ.ಶಿವಕುಮಾರ್ ಕಾಲಿಡುತ್ತಿಲ್ಲ ಏಕೆ ಎಂದು ಬಿಜೆಪಿ ಗರಂ ಆಗಿದೆ. ಇದನ್ನ ಜನರ ಎದುರು ಸಾಬೀತು ಮಾಡಲು ಬಿಜೆಪಿ ಸಕಲ ಸಿದ್ಧತೆ ನಡೆಸಿದಂತೆ ಕಾಣುತ್ತಿದೆ.

ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.

ಎಲ್ಲರಿಗೂ ಗೊತ್ತಿರುವಂತೆ ಕನಕಪುರ ಮತ್ತು ಚನ್ನಪಟ್ಟಣ ಭಾಗದಲ್ಲಿಜೆಡಿಎಸ್ಬಲವಾಗಿದೆ. ಜೆಡಿಎಸ್ ಬಿಟ್ಟರೆ ಕಾಂಗ್ರೆಸ್ ಮಾತ್ರ ಅವರ ವಿರುದ್ಧ ಗುಡುಗುವಷ್ಟು ಶಕ್ತಿಯುತವಾಗಿದೆ. ಪರಿಸ್ಥಿತಿ ಹೀಗಿದ್ದಾಗ ಎರಡೂ ಪಕ್ಷಗಳ ನಡುವೆ ಹೊಂದಾಣಿಕೆ ರಾಜಕೀಯ ನಡೆಯುತ್ತಿದ್ದು, ಕನಕಪುರ ಹಾಗೂ ಚನ್ನಪಟ್ಟಣ ಕ್ಷೇತ್ರವನ್ನ ಸೇಫ್ ಮಾಡಿಕೊಳ್ಳುವ ಪ್ಲ್ಯಾನ್ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಹಿಂದೆ ಕೂಡ ಬಿಜೆಪಿ ನಾಯಕರು ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ಆರೋಪ ಮಾಡಿದ್ದರು. ಆದ್ರೆ ಬಿಜೆಪಿ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ.

ಹೊಂದಾಣಿಕೆ ವಿರುದ್ಧ ಬಿಜೆಪಿ ರಣಕಹಳೆ

ಈಗಾಗಲೇ ಹಲವು ಬಾರಿ ಇಂತಹದ್ದೇ ಹೊಂದಾಣಿಕೆ ಮೇಲೆ ಮಾಜಿ ಸಿಎಂಹೆಚ್‌ಡಿಕೆಹಾಗೂ ಡಿಕೆಶಿ ಇಬ್ಬರೂ ಗೆದ್ದಿದ್ದಾರೆ ಎಂಬ ಆರೋಪ ಬಿಜೆಪಿ ನಾಯಕರದ್ದು. ಆದರೆ ಈ ಬಾರಿ ಅಂತಹದ್ದೇ ಸ್ಥಿತಿ ಇದೆಯಾ? ಎಂಬ ಡೌಟ್ ಮೂಡದೇ ಇರಲ್ಲ. ಮತ್ತೊಂದು ಕಡೆ ಕನಕಪುರದಲ್ಲಿ ಡಿ.ಕೆ. ಶಿವಕುಮಾರ್ ಅವರಿಗೆ ಹಾಗೂ ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಹೆಚ್‌ಡಿಕೆಗೆ ಸೋಲು ಕಾಣಿಸಲೇಬೇಕು ಎಂದು ಪಣತೊಟ್ಟಿರುವ ಬಿಜೆಪಿಗೆ ಇದು ಹಿನ್ನಡೆ ತರುವ ಎಲ್ಲಾ ಸಾಧ್ಯತೆ ಇದೆ. ಹೀಗಾಗಿಯೇ ಹೊಂದಾಣಿಕೆ ರಾಜಕೀಯದ ವಿರುದ್ಧ ರಣಕಹಳೆ ಮೊಳಗಿಸಿದೆ ಬಿಜೆಪಿ.

ವರಿಷ್ಠರಿಂದಲೂ ಈ ವಿಚಾರ ಪ್ರಸ್ತಾಪ?

ಇನ್ನೇನು ಪ್ರಧಾನಿ ಮೋದಿ ಅವರ ಚುನಾವಣಾ ಪ್ರಚಾರಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಹಳೇ ಮೈಸೂರಿನಲ್ಲಿ ಪಿಎಂ ಮೋದಿ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ಇದೇ ಸಂದರ್ಭದಲ್ಲಿ ಕನಕಪುರ ಮತ್ತು ಚನ್ನಪಟ್ಟದಲ್ಲಿ ಹೊಂದಾಣಿಕೆ ಪಾಲಿಟಿಕ್ಸ್ ನಡೆಯುತ್ತಿದೆ ಎಂದು ಆರೋಪಿಸಬಹುದು. ಆ ಮೂಲಕ ಇದೇ ವಿಚಾರ ಪ್ರಸ್ತಾಪಿಸಿ, ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಶಾಕ್ ಕೊಡಲು ಕಮಲ ಪಡೆ ರಣತಂತ್ರ ರೂಪಿಸಿರುವ ಸಾಧ್ಯತೆ ಇದೆ.

ವರ್ಕೌಟ್ ಆಗುತ್ತಾ ಬಿಜೆಪಿ ರಣತಂತ್ರ?

ಇಷ್ಟೆಲ್ಲಾ ಅಳೆದು ತೂಗಿ ಲೆಕ್ಕಾಚಾರ ಹಾಕಿರುವ ಬಿಜೆಪಿ ನಾಯಕರ ರಣತಂತ್ರ ವರ್ಕೌಟ್ ಆಗುತ್ತಾ? ಎಂಬ ಅನುಮಾನ ಕಾಡುವುದು ಪಕ್ಕಾ. ಅದು ವರ್ಕೌಟ್ ಆಗುತ್ತೋ, ಬಿಡುತ್ತೋ, ಆದರೆ ಭವಿಷ್ಯದಲ್ಲಿ ಈ ಲೆಕ್ಕಾಚಾರ ಉಪಯೋಗಕ್ಕೆ ಬರಬಹುದು. ಹೀಗಾಗಿಯೇ ದಿಲ್ಲಿಯಿಂದ ಬರುತ್ತಿರುವ ನಾಯಕರು ಬಿಜೆಪಿ ರಣತಂತ್ರ ರೂಪಿಸಿರುವ ಕ್ಷೇತ್ರಗಳ ಸುತ್ತಲೂ ಹೆಚ್ಚಿನ ಗಮನ ಕೇಂದ್ರೀಕರಿಸುತ್ತಿರುವುದು ಗಮನಾರ್ಹ. ಈಗ ಪ್ರಧಾನಿ ಮೋದಿ ಅವರ ಪ್ರಚಾರ ಕೂಡ ಇದೇ ಕ್ಷೇತ್ರಗಳ ಸುತ್ತಲೂ ನಡೆಯುತ್ತಿರುವುದು ಮತ್ತೊಂದು ಹೈಲೈಟ್.

ಚನ್ನಪಟ್ಟಣಕ್ಕೆ ಕೇಸರಿ ಪಡೆ ಮುತ್ತಿಗೆ

ಮಾಜಿ ಸಿಎಂ ಕುಮಾರಸ್ವಾಮಿಗೆ ಈ ಚುನಾವಣೆ ಅಗ್ನಿಪರೀಕ್ಷೆ. ಸ್ವತಃ HDK ಸ್ಪರ್ಧೆ ಮಾಡ್ತಿರುವ ಚನ್ನಪಟ್ಟಣದಲ್ಲಿ ಮಾಡು ಇಲ್ಲವೇ ಮಡಿ ಹೋರಾಟ ಶುರುವಾಗಿದೆ. ಹೇಗಾದರೂ ಹೆಚ್‌ಡಿಕೆಗೆ ಸೋಲಿನ ರುಚಿ ತೋರಿಸಬೇಕು ಅಂತಾ ಬಿಜೆಪಿ ಪಣತೊಟ್ಟಿದೆ. ಈ ಮೂಲಕ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್‌ ಪರವಾಗಿ ಬಿರುಸಿನ ಪ್ರಚಾರ ಶುರುವಾಗಿದೆ. ಪಿಎಂ ಮೋದಿ ಸೇರಿದಂತೆ ಇನ್ನೂ ಹಲವು ಘಟಾನುಘಟಿ ನಾಯಕರು ಯೋಗೇಶ್ವರ್‌ ಪರ ಪ್ರಚಾರ ನಡೆಸಲಿದ್ದಾರೆ.

ಕನಕಪುರ ಕ್ಷೇತ್ರದಲ್ಲೂ ಕೇಸರಿ ಸದ್ದು

ಇದಿಷ್ಟೂ ಒಂದೆಡೆಯಾದರೆ, ಮತ್ತೊಂದು ಕಡೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಗೆಲುವಿಗೂ ಬ್ರೇಕ್ ಹಾಕಲು ಸದ್ಯ ಬಿಜೆಪಿ ಭರದ ಸಿದ್ಧತೆ ರೂಪಿಸಿದೆ. ಕಾಂಗ್ರೆಸ್ ಭದ್ರಕೋಟೆ ಕನಕಪುರ ಕ್ಷೇತ್ರಕ್ಕೆ ಲಗ್ಗೆ ಇಡಲು ಆರ್. ಅಶೋಕ್ ನೇತೃತ್ವ ಆಯ್ಕೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಬಿಜೆಪಿ ನಾಯಕರು, ವರಿಷ್ಠರ ದಂಡೇ ಕನಕಪುರ ಕ್ಷೇತ್ರಕ್ಕೆ ಬಂದು ಅಶೋಕ್ ಪರ ಪ್ರಚಾರ ಮಾಡಿದೆ. ಮುಂದೆ ಮತ್ತಷ್ಟು ಘಟಾನುಘಟಿ ನಾಯಕರು ಎಂಟ್ರಿಯಾಗುವ ನಿರೀಕ್ಷೆ ಇದೆ. ಈ ಮೂಲಕ ಕನಕಪುರದಲ್ಲೂ ಹೊಸ ತಂತ್ರ ಪ್ರಯೋಗಿಸುತ್ತಿದೆ ಕಮಲ ಪಡೆ.

ಒಟ್ನಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಏನೇ ಇದ್ದರೂ ಮತದಾರ ಪ್ರಭು ಯಾವ ನಿಲುವು ಕೈಗೊಳ್ಳಲಿದ್ದಾನೆ ಎಂಬ ಅಂಶದ ಮೇಲೆ ಎಲ್ಲಾ ನಿರ್ಧಾರ ಆಗಲಿದೆ. ಮೇ 10ರಂದು ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಕೂಡ ಪ್ರಕಟವಾಗಲಿದೆ. ಅಂದೇ ಕರ್ನಾಟಕದಲ್ಲಿ ರಣತಂತ್ರ ಎಷ್ಟರಮಟ್ಟಿಗೆ ವರ್ಕೌಟ್ ಆಗಿದೆ ಎಂಬುದರ ರಿಸಲ್ಟ್ ಕೂಡ ಸಿಗಲಿದೆ.


Spread the love

About Laxminews 24x7

Check Also

ಕೇಜ್ರಿವಾಲ್‌ ಸೆರೆ‌ ಆಪ್‌ಗೆ ವರವೇ? ಶಾಪವೇ?

Spread the love ಬೇಸಗೆ ಝಳದಲ್ಲಿ ಬೇಯುತ್ತಿರುವ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಲೋಕಸಭೆ ಚುನಾವಣೆಯ ಕಾವೂ ಹೆಚ್ಚಿದ್ದು, ರಾಜಧಾನಿಯ ಗದ್ದುಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ