Breaking News

ಲಕ್ಷ್ಮಣ್‌ ಸವಧಿ ಕಾಂಗ್ರೆಸ್‌ ಪಕ್ಷಕ್ಕೆ ಬರೋದ್ರಿಂದ ಅನುಕೂಲವಾಗಲಿದೆ : ಸತೀಶ್‌ ಜಾರಕಿಹೊಳಿ

Spread the love

ಬೆಳಗಾವಿ : ಲಕ್ಷ್ಮಣ್‌ ಸವಧಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆ ವಿಚಾರವಾಗಿ,ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಮಾತನಾಡಿಬಿಜೆಪಿ ಬಂಡಾಯದಿಂದ ಕಾಂಗ್ರೆಸ್‌ ಲಾಭವಾಗಿದೆ ಎಂದಿದ್ದಾರೆ.

ಬೆಳಗಾವಿ ಜಿಲ್ಲಾ ಬಿಜೆಪಿ ಟಿಕೆಟ್‌ ಅಸಮಾಧಾನ ಭುಲೆದಿದ್ದು, ಒಂದೆಡೆ ಬಿಜೆಪಿ ತೊರೆದು ಕಾಂಗ್ರೆಸ್‌ ಪಕ್ಷಕ್ಕೆ ಲಕ್ಷ್ಮಣ್‌ ಸವಧಿ ಸೆರ್ಪಡೆಯಾಗಲಿದ್ದಾರೆ.

ಈ ನಿಟ್ಟಿನಲ್ಲಿ ಸತೀಶ್‌ ಜಾರಕಿಹೊಳಿ ಬೇರೆಯೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದರಿಂದ ಸ್ವಾಗತಾರ್ಹ ಎಂದಿದ್ದಾರೆ. ಲಕ್ಷ್ಮಣ್‌ ಸವಧಿ ಪಕ್ಷಕ್ಕೆ ಬರುವುದರಿಂದ ಅನುಕೂಲವಾಗಲಿದೆ . ಸತೀಶ್‌ ಜಾರಕಿಹೊಳಿ ಅತೀಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಾಗಲಿದೆ. ಬಿಜೆಪಿ ಬಂಡಾಯದಿಂದ ಕಾಂಗ್ರೆಸ್‌ ಪಕ್ಷಕ್ಕೆ ಲಾಭವಾಗಿದೆ ಎಂದಿದ್ದಾರೆ.

ಲಕ್ಷ್ಮಣ್‌ ಸವಧಿ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ನನಗೆ ಬಹಳ ದುಃಖ ಆಗ್ತಿದೆ, ಉತ್ತಮ ಭವಿಷ್ಯ ಇತ್ತು : ಸಿಎಂ ಬೊಮ್ಮಾಯಿ

ಬೆಂಗಳೂರು : ಲಕ್ಷ್ಮಣ್‌ ಸವಧಿ ಕಾಂಗ್ರೆಸ್‌ ಸೇರ್ಪಡೆ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ನನಗೆ ಬಹಳ ದುಃಖ ಆಗ್ತಿದೆ, ಸವಧಿಗೆ ಉತ್ತಮ ಭವಿಷ್ಯ ಇತ್ತು ಎಂದು ಪ್ರತಿಕ್ರಿಯಿದ್ದಾರೆ.

ಮಾಧ್ಯಮಗಳೊಂದಿಗೆ ಸಿಎಂ ಬೊಮ್ಮಾಯಿ ಮಾತನಾಡಿ, ಲಕ್ಷ್ಮಣ್‌ ಸವಧಿ ಕಾಂಗ್ರೆಸ್‌ ಸೇರಿರುವುದು ಗೊತ್ತಿರುವ ವಿಚಾರವಾಗಿದೆ ಲಕ್ಷ್ಮಣ್‌ ಸವಧಿ ಜೊತೆ ಹಲವು ವರ್ಷಗಳಿಂದ ನಾನು ಒಟ್ಟಿಗೆ ಕೆಲಸ ಮಾಡದ್ದೇನೆ. ಲಕ್ಷ್ಮಣ್‌ ಸವದಿ ಕಾಂಗ್ರೆಸ್ನಲ್ಲಿ ಭವಿಷ್ಯ ಕಾಣಿಸಿದೆ ಅದಕ್ಕೆ ಹೋಗಿದ್ದಾರೆ, ನನಗೆ ಬಹಳ ದುಃಖ ಆಗ್ತಿದೆ, ಸವಧಿಗೆ ಉತ್ತಮ ಭವಿಷ್ಯ ಇತ್ತು ಕೆಲವೊಮ್ಮೆ ರಾಜಕೀಯ ಸನ್ನಿವೇಶದಲ್ಲಿ ಇಂತಹ ಘಟನೆಗಳು ನಡೆಯುತ್ತದೆ ಎಂದು ಪ್ರತಿಕ್ರಿಯಿದ್ದಾರೆ.


Spread the love

About Laxminews 24x7

Check Also

ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನದ ಪೂರ್ವಭಾವಿ ಸಭೆ

Spread the loveಬೆಳಗಾವಿ: ನವದೆಹಲಿಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ