Breaking News

ಕುಡಿಯಲು ನೀರು ಕೊಡಲ್ಲ ಎಂದಿದ್ದಕ್ಕೆ ಗಲಾಟೆ – ಚಾಕು ಇರಿದು ಲಾರಿ ಕ್ಲೀನರ್ ಹತ್ಯೆ

Spread the love

ಬೆಂಗಳೂರು: ಕುಡಿಯಲು ನೀರು  ಕೊಡಲ್ಲ ಎಂದಿದ್ದಕ್ಕೆ ಚಾಕು ಇರಿದು ಲಾರಿ ಕ್ಲೀನರ್  ಹತ್ಯೆ ಮಾಡಿರುವ ಘಟನೆ ಆರ್‌ಎಂಸಿ ಯಾರ್ಡ್‌ನ ಫ್ಯಾಕ್ಟರಿಯೊಂದರ ಬಳಿ ನಡೆದಿದೆ.

ಆಂಧ್ರ ಮೂಲದ ಬರ್ಕತ್ ಕೊಲೆಯಾದ ದುರ್ದೈವಿ. ಮಧುಗಿರಿ ಮೂಲದ ಸೀನಪ್ಪ ಬಂಧಿತ ಆರೋಪಿ. ಬರ್ಕತ್ ಹಾಗೂ ಸೀನಪ್ಪ ಇಬ್ಬರೂ ಲಾರಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ ಊಟದ ಬಳಿಕ ಬರ್ಕತ್ ಬಳಿ ಸೀನಪ್ಪ ನೀರು ಕೇಳಿದ್ದಾನೆ. ಈ ವೇಳೆ ಬರ್ಕತ್ ನೀರು ಕೊಡಲ್ಲ ಎಂದಾಗ ಗಲಾಟೆ ನಡೆದಿದೆ.

ಗಲಾಟೆ ವೇಳೆ ಸೀನಪ್ಪ ಚಾಕುವಿನಿಂದ ಹಲ್ಲೆ ಮಾಡಿ ಬರ್ಕತ್‌ನ ಹತ್ಯೆ ಮಾಡಿದ್ದಾನೆ. ಕೊಲೆ ಬಳಿಕ ಆರೋಪಿ ಸೀನಪ್ಪ ಎಸ್ಕೇಪ್ ಆಗಿದ್ದಾನೆ. ನಂತರ ಲಾರಿ ಡ್ರೈವರ್‌ಗಳ ಮಾಹಿತಿ ಮೇರೆಗೆ ಕೇಸ್ ದಾಖಲಿಸಿದ ಆರ್‌ಎಂಸಿ ಯಾರ್ಡ್ ಪೊಲೀಸು ಆರೋಪಿ ಸೀನಪ್ಪನನ್ನು ಬಂಧಿಸಿದ್ದಾರೆ.


Spread the love

About Laxminews 24x7

Check Also

ರಾಜ್ಯದಲ್ಲಿ ಬರ – 177 ತಾಲೂಕುಗಳಲ್ಲಿ 46,324 ಕೋಟಿ ಬೆಳೆ ನಷ್ಟ , 7,142 ಕೋಟಿ ನೆರವಿಗೆ ಮನವಿ

Spread the loveಬೆಂಗಳೂರು: ರಾಜ್ಯದ 240 ತಾಲೂಕುಗಳ ಪೈಕಿ 217 ತಾಲೂಕುಗಳನ್ನ ಬರಪೀಡಿತ  ಎಂದು ಘೋಷಿಸಲಾಗಿದ್ದು, ಬರ ಪರಿಸ್ಥಿತಿ ಹಿನ್ನೆಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ