Breaking News

ಡಾನ್ ಮುಂದೆ ತಲೆ ಬಾಗಿದ ಪ್ರಧಾನಿ ಮೋದಿ; ಇದು ನಾಚಿಕೆಗೇಡಿನ ಸಂಗತಿ; HDK

Spread the love

ಹಾಸನ: ನಿನ್ನೆ ಪ್ರಧಾನಿ ನರೇಂದ್ರ ಮೋದಿ ರೌಡಿ ರವಿಗೆ ತಲೆ ಬಾಗಿದ್ದಾರೆ. ಭೂಗತ ದೊರೆಗಳಿಗೆ ಬಿಜೆಪಿ ತಲೆ ಬಾಗುತ್ತಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

 

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ನಿನ್ನೆ ಪ್ರಧಾನಿ ಮೋದಿ ಡಾನ್ ಮುಂದೆ ತಲೆ ಬಾಗಿದ್ದಾರೆ. ಈ ದೃಶ್ಯ ನೋಡಿದರೆ ಬಿಜೆಪಿಯ ಸ್ಥಿತಿ ತಿಳಿಯುತ್ತದೆ. ಕ್ರಿಕೆಟ್ ಬೆಟ್ಟಿಂಗ್ ನಡೆಸುವವನಿಗೆ ಕೈ ಮುಗಿದಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದ್ದಾರೆ.

ಬಿಜೆಪಿ ದೈನೇಸಿ ಸ್ಥಿತಿಗೆ ತಲುಪಿರೋದಕ್ಕೆ ಇದೇ ಸಾಕ್ಷಿ. ಎಂಥಾ ನಾಚಿಕೆಗೇಡಿನ ವಿಚಾರ ಎಂದು ವ್ಯಂಗ್ಯವಾಡಿದ್ದಾರೆ


Spread the love

About Laxminews 24x7

Check Also

ಕೊಡಗಿನಲ್ಲಿ ಗಾಳಿ ಮಳೆ ಆರ್ಭಟ ಜೋರು – ಹಾರಂಗಿ ಜಲಾಶಯದಿಂದ 5,365 ಕ್ಯೂಸೆಕ್ ನೀರು ಕಾವೇರಿ ನದಿಗೆ

Spread the loveಮಡಿಕೇರಿ: ಕೊಡಗಿನಲ್ಲಿ  ಮತ್ತೆ ಮಳೆಯ ಆರ್ಭಟ ಜೋರಾಗಿದೆ. ಹಾರಂಗಿ ಜಲಾಶಯಕ್ಕೆ ಒಳಹರಿವು ಹೆಚ್ಚಿದ ಹಿನ್ನೆಲೆ, 5,365 ಕ್ಯೂಸೆಕ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ