Breaking News

ತಡವಾಗಿ ಬಂದ ವೈದ್ಯರು; ಆಸ್ಪತ್ರೆ ಆವರಣದಲ್ಲಿಯೇ ಮಗುವಿಗೆ ಜನ್ಮ ಕೊಟ್ಟ ಮಹಿಳೆ

Spread the love

ವಿಜಯಪುರ: ಬೆಳಗ್ಗೆ ಸಮಯಕ್ಕೆ ಸರಿಯಾಗಿ ಸಿಬ್ಬಂದಿ ಆಸ್ಪತ್ರೆಗೆ ಬಾರದ ಹಿನ್ನೆಲೆ ಮಹಿಳೆ ಆಸ್ಪತ್ರೆ ಆವರಣದಲ್ಲಿಯೇ ಮಗುವಿಗೆ ಜನ್ಮ ನೀಡಿ ನರಳಾಡುತ್ತಿದ್ದ ಘಟನೆ ವಿಜಯಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.

ಹೆರಿಗೆಗೆ ನೋವು ಕಾಣಿಸಿಕೊಂಡಿದ್ದ ಹಿನ್ನೆಲೆ ಮಹಿಳೆ ವಿಜಯಪುರ ತಾಲೂಕಿನ ನಾಗಠಾಣ ಪ್ರಾಥಮಿಕ ಆರೋಗ್ಯ ಕೇಂದ್ರದ ಆಸ್ಪತ್ರೆಗೆ ಬಂದಿದ್ದಾರೆ.

ಬೆಳಗ್ಗೆಯೇ ಆಸ್ಪತ್ರೆಗೆ ಬಂದಿದ್ದು ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಬಾರದ ಹಿನ್ನೆಲೆ ಹೊರಗಡೆಯೇ ಹೆರಿಗೆಯಾಗಿದೆ. ಅರ್ಧ ಗಂಟೆಯಾದರೂ ಶಿಶುವಿನ ಹುರಿ ಕಟ್ ಮಾಡದ ಹಿನ್ನೆಲೆ ಬಾಣಂತಿ ತೀವ್ರ ನೋವು ಅನುಭವಿಸಬೇಕಾಗಿದೆ.

ಹೆರಿಗೆಯಾಗಿ ತಡಹೊತ್ತು ಹೊಕ್ಕಳ ಹುರಿ ಕಟ್ ಮಾಡದ ಕಾರಣ ಆರೋಗ್ಯ ಕೇಂದ್ರದ ಎದುರು ಬಾಣಂತಿ ನರಳಾಟ ನೋಡದೆ ಸಾರ್ವಜನಿಕರು ವ್ಯವಸ್ಥೆ ವಿರುದ್ಧ ಆಕ್ರೋಶ ಮತ್ತು ಅಸಮಾಧಾನ ಹೊರಹಾಕಿದ್ದಾರೆ.


Spread the love

About Laxminews 24x7

Check Also

ವಿಜಯಪುರದಲ್ಲಿ ಗೃಹ ಬಳಕೆಯ ಅನಿಲ ಅಭಾವ

Spread the loveವಿಜಯಪುರ ಜಿಲ್ಲೆಯಲ್ಲಿ ಗೃಹ ಬಳಕೆಯ ಅನಿಲ ಕೊರತೆ ಸಮಸ್ಯೆ ಮುಂದುವರೆ ದಿದ್ದು, ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಯುದ್ಧ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ