Breaking News

2023: ಧೂಮಪಾನಿಗಳ ಜೇಬಿಗೆ ಬಿಸಿ ಮುಟ್ಟಿಸಿದ ‘ಅಮೃತಕಾಲದ ಬಜೆಟ್’

Spread the love

ವದೆಹಲಿ: ‌2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಬುಧವಾರ ಮಂಡಿಸಿದ್ದಾರೆ.

ಸಿಗರೇಟ್ ಮೇಲಿನ ತೆರಿಗೆಯನ್ನು ಶೇಕಡ 16ಕ್ಕೆ ಹೆಚ್ಚಳ ಮಾಡಿರುವುದಾಗಿ ನಿರ್ಮಲಾ ಘೋಷಿಸಿದರು.

 

ಕೇಂದ್ರ ಬಜೆಟ್‌ನಲ್ಲಿ ಸಿಗರೇಟ್ ಮೇಲಿನ ತೆರಿಗೆಯನ್ನು ಹೆಚ್ಚಿಸುವುದಾಗಿ ಘೋಷಿಸಿದ ಬೆನ್ನಲ್ಲೇ ಗಾಡ್‌ಫ್ರೇ ಫಿಲಿಪ್ಸ್ ಇಂಡಿಯಾ ಮತ್ತು ಐಟಿಸಿ ಲಿಮಿಟೆಡ್ ಸೇರಿದಂತೆ ಸಿಗರೇಟ್ ಕಂಪನಿಗಳ ಷೇರುಗಳು ಷೇರುಪೇಟೆ ಸಂವೇದಿ ಸೂಚ್ಯಂಕದಲ್ಲಿ (ಬಿಎಸ್‌ಇ) ಶೇಕಡ 5 ರಷ್ಟು ಕುಸಿತ ಕಂಡಿವೆ.

ಗಾಡ್‌ಫ್ರೇ ಫಿಲಿಪ್ಸ್ ಷೇರುಗಳು ಬಿಎಸ್‌ಇಯಲ್ಲಿ ಶೇಕಡ 4.92 ರಷ್ಟು ಕುಸಿದು ₹1,828.75ಕ್ಕೆ ತಲುಪಿದರೆ, ಗೋಲ್ಡನ್ ಟೊಬ್ಯಾಕೋ ಶೇಕಡ 3.81ರಷ್ಟು ಕುಸಿದು ₹59.4ಕ್ಕೆ ತಲುಪಿದೆ. ಷೇರುಪೇಟೆಯಲ್ಲಿ ಐಟಿಸಿ ಷೇರುಗಳು ಶೇಕಡ 0.78ರಷ್ಟು ಕಡಿಮೆಯಾಗಿ ₹349ಕ್ಕೆ ವಹಿವಾಟು ನಡೆಸುತ್ತಿವೆ. ಅಂತೆಯೇ ಎನ್‌ಟಿಸಿ ಇಂಡಸ್ಟ್ರೀಸ್ ಶೇಕಡ 1.4 ಮತ್ತು ವಿಎಸ್‌ಟಿ ಇಂಡಸ್ಟ್ರೀಸ್ ಶೇಕಡ 0.35 ರಷ್ಟು ಕುಸಿದಿದೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ