Breaking News

ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ನೌಕಾಪಡೆಯ ತುಕಡಿಗೆ ಮಂಗಳೂರಿನ ದಿಶಾ ಕ್ಯಾಪ್ಟನ್‌

Spread the love

ಮಂಗಳೂರು: ಇಲ್ಲಿನ ತಿಲಕನಗರದ ದಿಶಾ ಅಮೃತ್‌ ಅವರು, ಇದೇ 26ರಂದು ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ನೌಕಾಪಡೆಯ ತುಕಡಿಯನ್ನು ಮುನ್ನಡೆಸಲಿದ್ದಾರೆ. ನೌಕಾಪಡೆಯ 144 ಸೈನಿಕರನ್ನು ಒಳಗೊಂಡ ತುಕಡಿ ಹಾಗೂ ಸ್ತಬ್ಧಚಿತ್ರವು ಈ ಕವಾಯತಿನಲ್ಲಿ ‘ನಾರಿಶಕ್ತಿ’ಯನ್ನು ಪ್ರದರ್ಶಿಸಲಿದೆ.

 

ಅಂಡಮಾನ್‌ ನಿಕೋಬಾರ್‌ನಲ್ಲಿ ನೌಕಾಪಡೆಯಲ್ಲಿ ಲೆಫ್ಟಿನೆಂಟ್‌ ಕಮಾಂಡರ್‌ ಆಗಿರುವ ಮಗಳು ಗಣರಾಜ್ಯೋತ್ಸವ ಪರೇಡ್‌ನಲ್ಲಿ ತುಕಡಿಯ ನಾಯಕಿಯಾಗಿ ಹೆಜ್ಜೆಹಾಕುವುದನ್ನು ಕಣ್ತುಂಬಿಕೊಳ್ಳಲು ಆಕೆಯ ತಂದೆತಾಯಿ ಅಮೃತ್ ಕುಮಾರ್‌- ಲೀಲಾ ದಂಪತಿ ನವದೆಹಲಿಗೆ ತೆರಳಿದ್ದಾರೆ.

ಮಗಳ ಸಾಧನೆ ಬಗ್ಗೆ ‘ಪ್ರತಿಕ್ರಿಯಿಸಿದ ದಿಶಾ ಅವರ ತಂದೆ ಅಮೃತ್ ಕುಮಾರ್‌, ‘ನಮ್ಮ ಮನೆಯಲ್ಲೇ ಭಗತ್‌ ಸಿಂಗ್‌, ಝಾನ್ಸಿ ರಾಣಿ ಲಕ್ಷ್ಮೀ ಬಾಯಿಯಂತಹ ಮಕ್ಕಳು ಹುಟ್ಟಬೇಕೆಂದು ಬಯಸಿದ್ದೆವು. ನಮ್ಮ ಮಗಳು ಅಂತಹ ಸಾಧನೆ ಮಾಡುತ್ತಿದ್ದಾಳೆ’ ಎಂದು ಸಂತಸ ಹಂಚಿಕೊಂಡರು.


Spread the love

About Laxminews 24x7

Check Also

ಕರ್ತವ್ಯದ ವೇಳೆ ನೌಕಾಪಡೆಯ ಯೋಧ ಹುತಾತ್ಮ

Spread the loveಹಾವೇರಿ: ನೌಕಾಪಡೆಯ ಯೋಧ  ಕರ್ತವ್ಯದ ವೇಳೆ ಹುತಾತ್ಮರಾದ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ. ಹಾವೇರಿ  ಜಿಲ್ಲೆಯ ಹಾನಗಲ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ