Breaking News
Home / ರಾಜಕೀಯ / ಬೆಳಗಾವಿ: ಕನ್ನಡಕ್ಕಾಗಿ ಬದುಕು ತೇಯ್ದ ಡಾ| ಕರ್ಕಿ

ಬೆಳಗಾವಿ: ಕನ್ನಡಕ್ಕಾಗಿ ಬದುಕು ತೇಯ್ದ ಡಾ| ಕರ್ಕಿ

Spread the love

ಬೆಳಗಾವಿ: ನಾಡಿನ ಖ್ಯಾತ ಸಾಹಿತಿ ಡಾ. ಡಿ. ಎಸ್‌. ಕರ್ಕಿಯವರಿಗೆ ಇದುವರೆಗೆ ಯಾವ ಪ್ರಶಸ್ತಿಯನ್ನೂ ನೀಡಿಲ್ಲ, ಈಗ ಮರಣೋತ್ತರವಾದರೂ ಅವರಿಗೆ ಪಂಪ ಪ್ರಶಸ್ತಿ ನೀಡಬೇಕು ಎಂದು ಜಾನಪದ ವಿದ್ವಾಂಸರಾದ ಡಾ| ಬಸವರಾಜ ಜಗಜಂಪಿ ಆಗ್ರಹಿಸಿದರು.

ಎಸ್‌. ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಸಭಾಗೃಹದಲ್ಲಿ ರವಿವಾರ ಡಾ. ಡಿ. ಎಸ್‌. ಕರ್ಕಿ ಪ್ರತಿ,ಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದ ಡಾ. ಡಿ. ಎಸ್‌. ಕರ್ಕಿಯವರ 115ನೇ ಜನ್ಮ ದಿನೋತ್ಸವ ಹಾಗೂ ರಾಜ್ಯ ಮಟ್ಟದ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಕರ್ಕಿ, ಇಂಚಲ, ತುರಮರಿ ಅವರು ತಮ್ಮ ಇಡೀ ಬದುಕನ್ನು ಕನ್ನಡಕ್ಕಾಗಿ ತೇಯ್ದ ನಿಜ ಕನ್ನಡಿಗರು. ಇವರನ್ನು ನಾವು ಸ್ಮರಿಸಬೇಕು ಎಂದರು.

ಮುಂಬೈ ವಿಶ್ವವಿದ್ಯಾಲಯದಿಂದ ಪಿಎಚ್‌ ಡಿ ಪದವಿ ಪಡೆದು, ಗಿಲಗಂಚಿ ಅರಟಾಳ ಶಾಲೆಯ ಶಿಕ್ಷಕರಾಗಿ ಸೇವೆ ಆರಂಭಿಸಿ, ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಡೀನ್‌ ಆಗಿ ನಿವೃತ್ತಿಯಾಗಿದ್ದರು. ಡಾ. ಡಿ. ಎಸ್‌. ಕರ್ಕಿ ಅವರು ಭಾವಜೀವಿ, ಮೃದು ಸ್ವಭಾವದವರು. ಎಲ್ಲ ಪ್ರಚಾರದಿಂದ ದೂರ ಉಳಿದ ಶ್ರೇಷ್ಠ ಕವಿಗಳು ಮತ್ತು ಶಿಕ್ಷಕರಾಗಿದ್ದರು. ರಾಷ್ಟ್ರ, ನಾಡು, ನಿಸರ್ಗ ಪ್ರೇಮದ ಬಗ್ಗೆ ಅದ್ಭುತವಾದ ಕವನಗಳನ್ನು ರಚಿಸಿದ್ದರು. ಅಧಿಕೃತವಾಗಿ ರಾಷ್ಟ್ರಕವಿ ಕುವೆಂಪು ಅವರ ಕವಿತೆ ನಾಡಗೀತೆಯಾಗಿದ್ದರೂ, ಕನ್ನಡ ಕಾರ್ಯಕ್ರಮದ ಆರಂಭದಲ್ಲಿ ಕರ್ಕಿಯವರ ಹಚ್ಚೇವು ಕನ್ನಡ ಗೀತೆ ಕೇಳುವುದು ತುಂಬಾ ಹೆಮ್ಮೆ ಎನಿಸುತ್ತದೆ ಎಂದು


Spread the love

About Laxminews 24x7

Check Also

ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

Spread the love ಬೆನಕಟ್ಟಿ: ಗ್ರಾಮಕ್ಕೆ ಆಗಮಿಸಿದ ಮಾಜಿ ಕೇಂದ್ರ ಸಚಿವ ದಿ. ಸುರೇಶ ಅಂಗಡಿ ಪುತ್ರಿ ಶ್ರದ್ಧಾ ಶೆಟ್ಟರ್ ಬಿಜೆಪಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ