Breaking News

ಅಧಿವೇಶನ ಅಂತ್ಯದಲ್ಲಿ ಉದ್ಘಾಟನೆಗೆ ಸೂಪರ್ ಮಲ್ಟಿ ಆಸ್ಪತ್ರೆ ಉದ್ಘಾಟನೆ:

Spread the love

ನಗರದ ಬಿಮ್ಸ್ ಆವರಣದಲ್ಲಿ ನಿರ್ಮಾಣ ಆಗಿರುವ ಸುಸಜ್ಜಿತ ಸೂಪರ್ ಮಲ್ಟಿ ಸ್ಪೇಷಾಲಟಿ ಆಸ್ಪತ್ರೆಯ ಎರಡು ಮಹಡಿಗಳ ಕಾಮಗಾರಿ ಮುಗಿದಿದ್ದು, ಅಧಿವೇಶನ ಅಂತ್ಯದಲ್ಲಿ ಉದ್ಘಾಟನೆಗೆ ಪ್ರಯತ್ನ ಮಾಡುತ್ತೇವೆ ಎಂದು ಶಾಸಕ ಅನಿಲ ಬೆನಕೆ ಅವರು ತಿಳಿಸಿದರು.

ಇಂದು ಬಿಮ್ಸ್ ಆವರಣದಲ್ಲಿ ಆಸ್ಪತ್ರೆಯ ಕಾಮಗಾರಿ ವೀಕ್ಷಿಸಿದ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು, ಸಭೆಯಲ್ಲಿ ಅಧಿವೇಶನದ ಕೊನೆಯಲ್ಲಿ ಆಸ್ಪತ್ರೆ ಉದ್ಘಾಟನೆ ಮಾಡುವುದಿದೆ.‌ ಅಷ್ಟರಲ್ಲಿ ಬಾಕಿ ಕಾಮಗಾರಿ ಮುಗಿಯಬೇಕು. ಅದಕ್ಕಿಂತ ಮುಂಚೆ ತಾಯಿ ಮಕ್ಕಳ ಆಸ್ಪತ್ರೆ ಮತ್ತು ಟ್ರಾಮಾ ಸೆಂಟರ್ ಗೆ ಅಡಿಗಲ್ಲೂ ಸಮಾರಂಭ ಮಾಡುತ್ತೇವೆ.‌ ಮ್ಯಾನ್ ಪಾವರ್, ಸಲಕರಣೆಗಳ ಕೊರತೆ ಇದ್ದು, ನಾಳೆ ಸಿಎಂ ಮತ್ತು ಆರೋಗ್ಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಭೇಟಿ ಆಗಿ ಈ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ಚರ್ಚಿಸಿದರು.‌

ಬಳಿಕ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನವೆಂಬರ್ ನಲ್ಲಿ ಎರಡು ಮಹಡಿ ಕಾಮಗಾರಿ ಆಗವೇಕು ಎಂದು ಸಂಕಲ್ಪ ಮಾಡಲಾಗಿತ್ತು, ಆಪ್ರಕಾರ ಕಾಮಗಾರಿ ಆಗಿದೆ. ಸಲಕರಣೆಗಳು ಮತ್ತು ಮ್ಯಾನ್ ಪಾವರ್ ಗಳ ಕೊರತೆ ಇದೆ, ಹಾಗಾಗಿ ಸಿಎಂ ಆರೋಗ್ಯ ಸಚಿವರಿಗೆ ಭೇಟಿ ಆಗಲಿದ್ದೇವೆ ಎಂದು ತಿಳಿಸಿದರು. ‌


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ