Breaking News
Home / ಜಿಲ್ಲೆ / ಬೆಳಗಾವಿ / ಬೆಳಗಾವಿ ಮಹಾನಗರದಲ್ಲಿ ಬುಧವಾರದಿಂದ ಮಾಸ್ಕ್ ಧರಿಸದಿದ್ದರೆ ಒಂದು ಸಾವಿರ ರೂ. ದಂಡ ಕಟ್ಟುವುದು ಅನಿವಾರ್ಯ

ಬೆಳಗಾವಿ ಮಹಾನಗರದಲ್ಲಿ ಬುಧವಾರದಿಂದ ಮಾಸ್ಕ್ ಧರಿಸದಿದ್ದರೆ ಒಂದು ಸಾವಿರ ರೂ. ದಂಡ ಕಟ್ಟುವುದು ಅನಿವಾರ್ಯ

Spread the love

ಬೆಳಗಾವಿ – ಮಾಸ್ಕ್ ಧರಿಸದಿದ್ದರೆ ನಗರ ಪ್ರದೇಶದಲ್ಲಿ 1000 ರೂ. ಹಾಗೂ ಗ್ರಾಮೀಣ ಪ್ರದೇಶದಲ್ಲಿ 500 ರೂ. ದಂಡ ವಿಧಿಸುವ ನೂತನ ನಿಯಮವನ್ನು ರಾಜ್ಯ ಸರಕಾರಿ ಅಕ್ಟೋಬರ್ 1ರಿಂದ ಜಾರಿಗೊಳಿಸಿದೆ.

ಈ ನಿಯಮವನ್ನು ಬೆಳಗಾವಿ ಮಹಾನಗರದಲ್ಲಿ ಬುಧವಾರ (7-10-2020) ದಿಂದ ಜಾರಿಗೊಳಿಸಲು ಪೊಲೀಸ್ ಆಯುಕ್ತಾಲಯ ನಿರ್ಧರಿಸಿದೆ. ಈ ಕುರಿತು ಪೊಲೀಸ್ ಆಯುಕ್ತರು ಪ್ರಕಟಣೆ ಹೊರಡಿಸಿದ್ದಾರೆ.

ಬುಧವಾರದಿಂದ ಮಾಸ್ಕ್ ಧರಿಸದೆ ಹೊರಗೆ ಹೋದಲ್ಲಿ ಒಂದು ಸಾವಿರ ರೂ. ದಂಡ ಕಟ್ಟುವುದು ಅನಿವಾರ್ಯವಾಗಲಿದೆ. ಹಾಗಾಗಿ ಮನೆಯಿಂದ ಹೊರಡುವ ಮುನ್ನ ಸರಿಯಾಗಿ ಪರಿಶೀಲಿಸಿಕೊಳ್ಳಿ. ಮಾರ್ಗ ಮಧ್ಯೆ ಒಂದು ಮಾಸ್ಕ್ ಬಿದ್ದು ಹೊದಲ್ಲಿ ಬಳಸಿಕೊಳ್ಳಲು ಇನ್ನೊಂದನ್ನು ರಿಸರ್ವ್ ಇಟ್ಟುಕೊಳ್ಳುವುದೂ ಒಳ್ಳೆಯದೇ.


Spread the love

About Laxminews 24x7

Check Also

ಪಕ್ಷದಿಂದ ಟಿಕೆಟ್‌ ಘೋಷಣೆಯ ಮರುದಿನವೇ ಪ್ರಚಾರ’- ಶೆಟ್ಟರ್‌

Spread the loveಹುಬ್ಬಳ್ಳಿ:ಪಕ್ಷದಿಂದ ಟಿಕೆಟ್ ಅಧಿಕೃತವಾಗಿ ಘೋಷಣೆಯಾದ ಮರು ದಿನದಿಂದಲೇ ಬೆಳಗಾವಿಯಲ್ಲಿ ಪ್ರಚಾರ ಮಾಡಲಾಗುವುದು. ಒಂದೆರಡು ದಿನಗಳಲ್ಲಿಯೇ ಘೋಷಣೆ ಮಾಡುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ