Breaking News
Home / ಜಿಲ್ಲೆ / ಬೀದರ್ / ಬೀದರ್‍ನಲ್ಲಿ  5 ಜನರ ಬಲಿಯೊಂದಿಗೆ ಮತ್ತೆ 51 ಜನಕ್ಕೆ ಕೊರೊನಾ ಪಾಸಿಟಿವ್ ಪ್ರಕರಣಗಳು

ಬೀದರ್‍ನಲ್ಲಿ  5 ಜನರ ಬಲಿಯೊಂದಿಗೆ ಮತ್ತೆ 51 ಜನಕ್ಕೆ ಕೊರೊನಾ ಪಾಸಿಟಿವ್ ಪ್ರಕರಣಗಳು

Spread the love

ಬೀದರ್: ಗಡಿ ಜಿಲ್ಲೆ ಬೀದರಿನಲ್ಲಿ ಕೊರೊನಾ ಮರಣ ಕೇಕೆ ಮುಂದುವರಿದಿದೆ. ಬೀದರ್‍ನಲ್ಲಿ  5 ಜನರ ಬಲಿಯೊಂದಿಗೆ ಮತ್ತೆ 51 ಜನಕ್ಕೆ ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢವಾಗಿದೆ.

ಬೀದರಿನಲ್ಲಿ 4 ಹಾಗೂ ಬಸವಕಲ್ಯಾಣದಲ್ಲಿ ಒಬ್ಬರನ್ನು ಕೊರೊನಾಗೆ ಇಂದು ಬಲಿಯಾಗಿದ್ದಾರೆ. ಬೀದರ್, ಬಸವಕಲ್ಯಾಣ, ಭಾಲ್ಕಿ, ಔರಾದ್‍ನಲ್ಲಿ ಸೇರಿ ಒಟ್ಟು 51 ಜನಕ್ಕೆ ಕೊರೊನಾ ಪಾಸಿಟಿವ್ ಧೃಡವಾಗಿದೆ. ಅಸ್ತಮಾ, ಉಸಿರಾಟ, ಜ್ವರ, ಹೃದಯ, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಐವರು ಇಂದು ಸಾವನ್ನಪ್ಪಿದ್ದಾರೆ.

ಇಂದು 51 ಜನಕ್ಕೆ ಪಾಸಿಟಿವ್ ಬಂದಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 850ಕ್ಕೆ ಏರಿಕೆಯಾಗಿದೆ. ಇದರಲ್ಲಿ 561 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾದ್ದಾರೆ. 240 ಜನಕ್ಕೆ ಸೋಂಕು ಸಕ್ರಿಯವಾಗಿದ್ದು ಜಿಲ್ಲೆಯಲ್ಲಿ ಮಹಾಮಾರಿಗೆ ಬಲಿಯಾದವರ ಸಂಖ್ಯೆ 49ಕ್ಕೆ ಏರಿಕೆಯಾಗಿದೆ. ಈ ಚೀನಾ ಮಹಾಮಾರಿ ದಿನೇ ದಿನೇ ಬಲಿಯನ್ನು ಪಡೆಯುತ್ತಿರುವ ವೇಗ ನೋಡಿ ಜಿಲ್ಲೆಯ ಜನರು ಆತಂಕಗೊಂಡಿದ್ದಾರೆ.


Spread the love

About Laxminews 24x7

Check Also

ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಬಸವಕಲ್ಯಾಣ ಲೇಡಿ ಪಿಎಸ್​ಐ, ಪೇದೆ!

Spread the love ಬೀದರ್: ಠಾಣಾ ವ್ಯಾಪ್ತಿಯಲ್ಲಿ ಮರಳು ಸಾಗಾಣಿಕೆಗೆ ಲಾರಿಗಳಿಗೆ ಅನುಮತಿ ನೀಡಲು 25 ಸಾವಿರ ರೂಪಾಯಿ ಲಂಚಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ