Breaking News

‘ಆದಿಪುರುಷ್’ ಟೀಸರ್‌ ನೋಡಿ ಓಂ ರಾವುತ್ ಮೇಲೆ ಪ್ರಭಾಸ್ ಗರಂ?

Spread the love

ಆದಿಪುರುಷ್’ ಟೀಸರ್ ನೋಡಿ ಸಾಕಷ್ಟು ಜನ ನಿರ್ದೇಶಕ ಓಂ ರಾವುತ್ ಮೇಲೆ ಅಸಮಾಧಾನ ವ್ಯಕ್ತಪಡಿಸ್ತಿದ್ದಾರೆ. ಟೀಸರ್ ರಿಲೀಸ್ ಈವೆಂಟ್ ನಂತರ ಸ್ವತಃ ಪ್ರಭಾಸ್ ಕೂಡ ನಿರ್ದೇಶಕರ ಮೇಲೆ ಗರಂ ಆಗಿದ್ದರು ಎನ್ನಲಾಗ್ತಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ.

 

ಭಾನುವಾರಷ್ಟೇ ಅಯೋಧ್ಯೆಯಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ‘ಆದಿಪುರುಷ್’ ಸಿನಿಮಾ ಟೀಸರ್ ಲಾಂಚ್ ಮಾಡಲಾಗಿತ್ತು. ರಾಮಾಯಣ ಕಾವ್ಯವನ್ನು ಆಧರಿಸಿ ಈ ಮೋಷನ್ ಕ್ಯಾಪ್ಚರ್ ಆನಿಮೇಷನ್ ಸಿನಿಮಾ ಕಟ್ಟಿಕೊಡಲಾಗ್ತಿದೆ. ಸಿನಿರಸಿಕರು ಸಿನಿಮಾ ಟೀಸರ್ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಆದರೆ ಚಿತ್ರತಂಡ ಭ್ರಮನಿರಸನ ಮಾಡಿದೆ. ಪ್ರಭಾಸ್ ಅಭಿಮಾನಿಗಳಂತೂ ಟೀಸರ್ ನೋಡಿ ನಿರ್ದೇಶಕ ಓಂ ರಾವುತ್ ಮೇಲೆ ಆಕ್ರೋಶಗೊಂಡಿದ್ದಾರೆ. ಮತ್ತೊಂದ್ಕಡೆ ಟೀಸರ್ ಸಿಕ್ಕಾಪಟ್ಟೆ ಟ್ರೋಲ್ ಆಗ್ತಿದೆ.

ಓಂ ರಾವುತ್ ಮೇಲೆ ಪ್ರಭಾಸ್ ಗರಂ?

ಅಷ್ಟಕ್ಕೂ ಟೀಸರ್ ರಿಲೀಸ್ ಈವೆಂಟ್ ನಂತರ ಏನಾಯಿತು ಎನ್ನುವುದು ಗೊತ್ತಿಲ್ಲ. ಹೋಟೆಲ್ ರೂಂ ಬಳಿ ಪ್ರಭಾಸ್ ಗರಂ ಆಗಿರುವುದಂತು ನಿಜ. ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಪ್ರಭಾಸ್ ಕೋಪದಿಂದ “ಓಂ ನೀನು ಬಾ ನನ್ನ ರೂಂಗೆ, ಬರ್ತಿದ್ದೀಯಾ ಅಲ್ವಾ, ಬಾ” ಎಂದು ಕೈ ಬರೆಳು ತೋರಿಸುತ್ತಾ ಆಕ್ರೋಶದಿಂದ ಹೇಳಿರುವುದು ಕಾಣುತ್ತಿದೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ