Home / ರಾಜಕೀಯ / ವಿಜಯಪುರ ಪಿಎಫ್‌ಐ ಜಿಲ್ಲಾಧ್ಯಕ್ಷ ಅಶ್ಫಾಕ್ ಪೊಲೀಶ ವಶಕ್ಕೆ

ವಿಜಯಪುರ ಪಿಎಫ್‌ಐ ಜಿಲ್ಲಾಧ್ಯಕ್ಷ ಅಶ್ಫಾಕ್ ಪೊಲೀಶ ವಶಕ್ಕೆ

Spread the love

ವಿಜಯಪುರ: ವಿಜಯಪುರ ಪಿಎಫ್‌ಐ ಸಂಘಟನೆ ಜಿಲ್ಲಾಧ್ಯಕ್ಷ ಅಶ್ಫಾಕ್ ಜಮಖಂಡಿ ಎಂಬವನನ್ನು ಪೊಲೀಸರು ಮಂಗಳವಾರ ಬೆಳಂಬೆಳಿಗ್ಗೆ ವಶಕ್ಕೆ ಪಡೆದು, ವಿಚಾರಣೆ ಆರಂಭಿಸಿದ್ದಾರೆ.

ನಗರದ ಜಾಮಿಯಾ ಮಜೀದ್ ರಸ್ತೆಯಲ್ಲಿರೋ ಅಶ್ಪಾಕ್ ಜಮಖಂಡಿ ಮನೆಯಲ್ಲಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.

 

ಪಿಎಫ್‌ಐ ಸಂಘಟನೆ ಹೋರಾಟ, ಹಣಕಾಸಿನ ವ್ಯವಹಾರ ಸೇರಿದಂತೆ ಇತರೆ ವಿಷಯಗಳ ವಿಚಾರಣೆ ನಡೆಸುತ್ತಿರುವ ಪೊಲೀಸರು, ಸ್ಥಳೀಯ ವಿಚಾರಣೆ ಬಳಿಕ, ಅಗತ್ಯ ಎನಿಸಿದರೆ ಅಶ್ಫಾಕ್ ನನ್ನು ಬೆಂಗಳೂರಿಗೆ ಕರೆದೊಯ್ಯುವ ಸಾಧ್ಯತೆ ಇದೆ ಎಂಬ ಮಾಹಿತಿ ಇದೆ.

ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಪಿಎಫ್‌ಐ ಜಿಲ್ಲಾಧ್ಯಕ್ಷ ಆಶ್ಫಾಕ್ ಜಮಖಂಡಿ ಎಂಬಾತನನ್ನು ಬಂಧಿಸಿದ್ದಾಗಿ ವಿಜಯಪುರ ಎಸ್ಪಿ ಹೆಚ್‌.ಡಿ.ಆನಂದಕುಮಾರ ತಿಳಿಸಿದ್ದಾರೆ.

ಎನ್.ಐ.ಎ ದಾಳಿ ವಿರೋಧಿಸಿ ಹಾಗೂ ಇತರೆ ಪ್ರತಿಭಟನೆ, ಸಂಘಟನೆಯ ಆರ್ಥಿಕ ವಹಿವಾಟು ಸೇರಿದಂತೆ ಇತರೆ ಚಟುವಟಿಕೆ ಹಿನ್ನೆಲೆಯಲ್ಲಿ ಬಂಧಿಸಿ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.

 


Spread the love

About Laxminews 24x7

Check Also

ಕರ್ನಾಟಕ ‘SSLC ಪರೀಕ್ಷೆ-2’ರ ‘ಪರಿಷ್ಕೃತ ವೇಳಾಪಟ್ಟಿ’ ಪ್ರಕಟ

Spread the love ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಎಸ್ ಎಸ್ ಎಲ್ ಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ