Breaking News

ಫಾರೆಸ್ಟ್ ರೇಂಜರ್ ಆಫೀಸರ್’ ಗೆ ಹಿಗ್ಗಾಮುಗ್ಗಾ ಹೊಡೆದ ಜನ ಯಾಕೆ ಗೊತ್ತಾ..?

Spread the love

ಳ್ಳಾರಿ : ನಕಲಿ ಪೊಲೀಸ್ ಎಂದು ಡೆಪ್ಯೂಟಿ ಫಾರೆಸ್ಟ್ ರೇಂಜರ್ ಆಫೀಸರ್ ಮೇಲೆ ಸಾರ್ವಜನಿಕರು ಹಲ್ಲೆ ನಡೆಸಿದ ಘಟನೆ ನಗರದ ವಿಮ್ಸ್ ಆಸ್ಪತ್ರೆ ಸಮೀಪದ ರೇಣುಕಾ ಹೋಟೆಲ್ ಬಳಿ ನಡೆದಿದೆ.

ಡೆಪ್ಯೂಟಿ ಫಾರೆಸ್ಟ್ ರೇಂಜರ್ ಕೆಂಚಪ್ಪ ಅವರ ಮೇಲೆ ಸಾರ್ವಜನಿಕರು ಹಲ್ಲೆ ನಡೆಸಿದ್ದು, ಪೊಲೀಸರ ಸೋಗಿನಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

 

ಹೋಟೆಲ್ ಹಾಗೂ ಅಂಗಡಿಗಳಲ್ಲಿ ಕೆಂಚಪ್ಪ ಹಣ ವಸೂಲಿ ಮಾಡುತ್ತಿದ್ದರು. ಹಾಗೂ ಹೋಟೆಲ್ ಕ್ಯಾಶಿಯರ್ ಬಳಿ ಹಣ ಹೇಳಿದ್ದರು ಎನ್ನಲಾಗಿದೆ. ಅಲ್ಲದೇ ಕೆಂಚಪ್ಪ ನಕಲಿ ಐಡಿ ಕೂಡ ಹೊಂದಿದ್ದರಿಂದ ತ್ರಿಬಲ್ ಸ್ಟಾರ್ ಹಾಕಿಕೊಂಡಿದ್ದರಿಂದ ಕೆಂಚಪ್ಪರ ಮೇಲೆ ಅನುಮಾನಗೊಂಡ ಹೋಟೆಲ್ ಸಿಬ್ಬಂದಿ ಕೌಲ್ ಬಜಾರ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬರುವಷ್ಟರಲ್ಲಿ ನಕಲಿ ಪೊಲೀಸ್ ಎಂದು ತಿಳಿದು ಕೆಂಚಪ್ಪ ಮೇಲೆ ಸಾರ್ವಜನಿಕರು ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದ ಮೇಲೆ ಅವರು ಡೆಪ್ಯೂಟಿ ಫಾರೆಸ್ಟ್ ರೇಂಜರ್ ಎಂದು ಗೊತ್ತಾಗಿದೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ