Breaking News

ಧಾರವಾಡ ಜಿಲ್ಲೆಯಲ್ಲಿ ಮಕ್ಕಳ ಕಳ್ಳರ ವದಂತಿ: ವಿದ್ಯುತ್ ಕಂಬಕ್ಕೆ ಕಟ್ಟಿ ವ್ಯಕ್ತಿಗೆ ಥಳಿತ

Spread the love

ಧಾರವಾಡ: ಜಿಲ್ಲೆಯಲ್ಲಿ ಮಕ್ಕಳ‌ ಕಳ್ಳರ ವದಂತಿ ಹೆಚ್ಚಿರುವ ಹಿನ್ನೆಲೆ ಸಂಶಯಾಸ್ಪದ ವ್ಯಕ್ತಿಗಳು ಓಡಾಟ ಬಹಳ ದುಸ್ತರವಾಗಿದೆ. ಹೀಗಿರುವಾಗ ಮಕ್ಕಳ ಕಳ್ಳ ಎಂದು ಅನುಮಾನಗೊಂಡ ಗ್ರಾಮಸ್ಥರು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ ಘಟನೆ ಕರಡಿಗುಡ್ಡ ಗ್ರಾಮದಲ್ಲಿ ನಡೆದಿದೆ.

ಹಿಂದಿಯಲ್ಲಿ ಮಾತನಾಡುತ್ತಿದ್ದ ಈ ವ್ಯಕ್ತಿಯ ಜೇಬಿನಲ್ಲಿ ವಿವಿಧ ಮಕ್ಕಳ ಫೋಟೋ, ಗುರುತಿನ ಚೀಟಿ ಹಾಗೂ ಎಟಿಎಂ ಕಾರ್ಡ್‌ ಇದ್ದಿದ್ದನ್ನು ನೋಡಿದ ಗ್ರಾಮಸ್ಥರು, ಆತನನ್ನು ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಈ ವಿಷಯ ಪೊಲೀಸರಿಗೆ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ 112 ವಾಹನದ ಪೊಲೀಸರು ಧಾವಿಸಿದ್ದಾರೆ. ಪೊಲೀಸರು ಬಂದರೂ ಆ ವ್ಯಕ್ತಿಯನ್ನು ಬಿಡದ ಗ್ರಾಮಸ್ಥರು ಪೊಲೀಸರ ಮುಂದೆಯೇ ಥಳಿಸಿದ್ದಾರೆ.

ನಂತರ ಗ್ರಾಮಸ್ಥರನ್ನು ಬಿಡಿಸಿದ ಪೊಲೀಸರು, ಆ ವ್ಯಕ್ತಿಯನ್ನು ತಮ್ಮ ವಶಕ್ಕೆ ಪಡೆದು ಚಿಕಿತ್ಸೆಗೆ ಎಂದು ಆಸ್ಪತ್ರೆಗೆ ದಾಖಲಿಸಿ, ಮಾಹಿತಿ ಕಲೆ ಹಾಕುತ್ತಿದ್ದಾರೆ. ಮಕ್ಕಳ ಕಳ್ಳರ ವದಂತಿ ಬಗ್ಗೆ ಈಗಾಗಲೇ ಎಸ್.ಪಿ ಅವರು ಪ್ರಕಟಣೆ ಮೂಲಕ ಮನವಿ ಮಾಡಿಕೊಂಡರು. ಗ್ರಾಮೀಣ ಭಾಗದಲ್ಲಿ ಜನರು ತಮ್ಮಿಷ್ಟದಂತೆ ನಡೆದುಕೊಳ್ಳುತ್ತಿದ್ದಾರೆ‌‌‌‌.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ