Breaking News
Home / ಜಿಲ್ಲೆ / ಬೆಳಗಾವಿ / ವಿಜಯಾನಂದ ಕಾಶಪ್ಪನವರ್ ಎರಡನೇ ಮದುವೆ ಬಗ್ಗೆ ಹೀಗಿದೆ ಪತ್ನಿ ವೀಣಾ ಕಾಶಪ್ಪನವರ್ ಪ್ರತಿಕ್ರಿಯೆ

ವಿಜಯಾನಂದ ಕಾಶಪ್ಪನವರ್ ಎರಡನೇ ಮದುವೆ ಬಗ್ಗೆ ಹೀಗಿದೆ ಪತ್ನಿ ವೀಣಾ ಕಾಶಪ್ಪನವರ್ ಪ್ರತಿಕ್ರಿಯೆ

Spread the love

ಬಾಗಲಕೋಟೆ: ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಎರಡನೇ ಮದುವೆಯಾಗಿದ್ದಾರೆ ಎನ್ನಲಾದ ವಿಚಾರಕ್ಕೆ ಸಂಬಂಧಿಸಿದಂತೆ ಪತ್ನಿ ವೀಣಾ ಕಾಶಪ್ಪನವರ್ ಪ್ರತಿಕ್ರಿಯೆ ನೀಡಿದ್ದಾರೆ.

ಹುನಗುಂದ ಕ್ಷೇತ್ರದಲ್ಲಿ ವೈಯಕ್ತಿಕ ವಿಚಾರ ಹರಿದಾಡುತ್ತಿದೆ.

ನಾನು ಆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇನೆ. ಸಂಪೂರ್ಣ ಮಾಹಿತಿ ಕಲೆ ಹಾಕಿದ ಮೇಲೆ ಸುದ್ದಿಗೋಷ್ಠಿ ನಡೆಸುತ್ತೇನೆ. ಇದರ ಬಗ್ಗೆ ಸಂಬಂಧಿಸಿದವರನ್ನೇ ಕೇಳಬೇಕು ಎಂದು ಹೇಳಿದ್ದಾರೆ.

ವಿಜಯಾನಂದ ಕಾಶಪ್ಪನವರ್ ಹೆಸರು ಪ್ರಸ್ತಾಪಿಸದೆ ಪ್ರತಿಕ್ರಿಯೆ ನೀಡಿ, ಮಾಧ್ಯಮದಲ್ಲಿ ಮಗುವಿನ ಬರ್ತ್ ಸರ್ಟಿಫಿಕೇಟ್ ತೋರಿಸಲಾಗಿದೆ. ಮಾಧ್ಯಮದಲ್ಲಿ ತೋರಿಸಿದ ಸರ್ಕಾರಿ ದಾಖಲಾತಿ ಸುಳ್ಳಾಗುತ್ತದೆಯೇ? ಮಾಹಿತಿ ಕಲೆಹಾಕಿ ಮುಂದಿನ ದಿನಗಳಲ್ಲಿ ಸುದ್ದಿಗೋಷ್ಠಿ ನಡೆಸುತ್ತೇನೆ ಎಂದು ಕೆಪಿಸಿಸಿ ಮಹಿಳಾ ಘಟಕದ ಉಪಾಧ್ಯಕ್ಷರಾದ ವೀಣಾ ಕಾಶಪ್ಪನವರ್ ಹೇಳಿದ್ದಾರೆ.

ವಿಜಯಾನಂದ ಕಾಶಪ್ಪನವರ್ ನಟಿಯೊಬ್ಬರ ಮದುವೆಯಾಗಿದ್ದು, ಅವರಿಗೆ ಜನಿಸಿದ ಮಗುವಿನ ಬರ್ತ್ ಸರ್ಟಿಫಿಕೇಟ್ ನಲ್ಲಿ ತಂದೆ ಹೆಸರು ವಿಜಯಾನಂದ ಕಾಶಪ್ಪನವರ್ ಎಂದು ಉಲ್ಲೇಖಿಸಲಾಗಿದೆ. ಆದರೆ, ಇದನ್ನು ಅಲ್ಲಗಳೆದಿದ್ದ ವಿಜಯಾನಂದ ಕಾಶಪ್ಪನವರ್, ದಾಖಲೆ ಇದ್ರೆ ಪ್ರತಿಕ್ರಿಯೆ ಕೊಡುತ್ತೇನೆ ಎಂದು ಪ್ರತಿಕ್ರಿಯೆ ನೀಡಿದ್ದರು. ಇದೇ ವಿಚಾರಕ್ಕೆ ವೀಣಾ ಕಾಶಪ್ಪನವರ್ ಮತ್ತು ವಿಜಯಾನಂದ ಕಾಶಪ್ಪನವರ್ ನಡುವೆ ಜಗಳವಾಗಿ ವೀಣಾ ಕಾಶಪ್ಪನವರ್ ಬೆಂಗಳೂರಿನಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗಿದೆ.


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ