Breaking News

ಬಿರಿಯಾನಿ ತಿನ್ನೋಕೆ ಬಂದವರು ಜೈಲು ಪಾಲಾದ್ರು;

Spread the love

ಹುಬ್ಬಳ್ಳಿ: ಇನ್ನೇನು ಹುಬ್ಬಳ್ಳಿ (Hubballi) ಶಾಂತವಾಯಿತು ಅನ್ನುವಷ್ಷರೊಳಗಾಗಿ ಏನಾದರೂ ಒಂದು ಘಟನೆಗಳು ನಡೆಯುತ್ತಲೇ ಇವೆ.  ಗುರಾಯಿಸಿ ನೋಡಿದ ಅಂತ ಗ್ಯಾಂಗ್​ವೊಂದು ಯುವಕನ (Youth Assault) ಮೇಲೆ ಮಾರಣಾಂತಿಕ ಹಲ್ಲೆ ಮಾಡಿದೆ. ಬಿರಿಯಾನಿ (Biryani) ತಿನ್ನೋಕೆ ಹೋದವರು ಹಲ್ಲೆ ಮಾಡಿ ಈಗ ಕಂಬಿ ಎಣಿಸುತ್ತಿದ್ದಾರೆ.

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಪುಡಿ ರೌಡಿಗಳ ಅಟ್ಟಹಾಸ ಮುಂದುವರಿದಿದೆ. ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನ ಮೇಲೆ ಚಾಕು ಮತ್ತು ಬಾಟಲಿಯಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಸ್ಕೂಲ್ ಬಳಿ ನಡೆದಿದೆ.

ಬಿರಿಯಾನಿ ತೆಗೆದುಕೊಂಡು ಹೋಗಲು ಬಂದಿದ್ರು

ಇಂದಿರಾನಗರ ನಿವಾಸಿ ಯಶವಂತ್ ಭಂಡಾರಿ ಎಂಬ ಯುವಕನ ಮೇಲೆ ಹಲ್ಲೆ ಮಾಡಲಾಗಿದೆ. ಹೋಟೆಲ್​ನಲ್ಲಿ ಬಿರಿಯಾನಿ ತೆಗೆದುಕೊಂಡು ಹೋಗೋಕೆ ಯಶವಂತ್ ಭಂಡಾರಿ ಬಂದಿದ್ದ. ಅದೇ ವೇಳೆ ಬಿರಿಯಾನಿ ತೆಗೆದುಕೊಂಡು ಹೋಗೋಕೆ ಸೆಟ್ಲ್ ಮೆಂಟ್ ಏರಿಯಾದ ಅಭಿಷೇಕ್ ಜಾಧವ್ ಬಂದಿದ್ದಾನೆ.ಗುರಾಯಿಸಿ ನೋಡಿದ್ದೀ ಅಂತ ಜಗಳ ಆರಂಭಿಸಿದ ಅಭಿಷೇಕ್ ಜಾಧವ್ ತಲ್ವಾರ್ ತೆಗೆದುಕೊಂಡು ಹಣೆ ಮೇಲೆ ಹಲ್ಲೆ ಮಾಡಿದ್ದಾನೆ. ನಂತರ ಹತ್ತಕ್ಕೂ ಹೆಚ್ಚು ಸಹಚರರು ಬಾಟಲಿ ಮತ್ತು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ


Spread the love

About Laxminews 24x7

Check Also

ಹಾಸ್ಟೆಲ್ ನಾಲ್ಕನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

Spread the loveಹುಬ್ಬಳ್ಳಿ: ಕಾಲೇಜಿನ ವಿದ್ಯಾರ್ಥಿಯೊಬ್ಬ ಹಾಸ್ಟೆಲ್ ನಾಲ್ಕನೇ ಮಹಡಿಯಿಂದ ಬಿದ್ದು ಅನುಮಾನಸ್ಫದವಾದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಭೈರಿದೇರಕೊಪ್ಪದಲ್ಲಿರುವ ಸನಾ ಕಾಲೇಜಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ