Home / ಜಿಲ್ಲೆ / ಬೆಂಗಳೂರು / ಆ’ ಫೋಟೋ ಹಾಕಿ ಹೊಗಳಿದ್ದ ಸಂಜನಾ!

ಆ’ ಫೋಟೋ ಹಾಕಿ ಹೊಗಳಿದ್ದ ಸಂಜನಾ!

Spread the love

ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪರಪ್ಪನ ಅಗ್ರಹಾರ ಸೇರಿರುವ ನಟಿ ಸಂಜನಾ ಗಲ್ರಾನಿ ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿದ್ದಾರಾ ಎಂಬ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಮತಾಂತರ ಸುದ್ದಿಗೆ ಪುಷ್ಠಿ ಎಂಬಂತೆ ಸಂಜನಾ ಸಿನಿಮಾ ಶೂಟಿಂಗ್ ಗೆ ಬುರ್ಖಾ ಧರಿಸಿದ್ದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಆ ಧರ್ಮವನ್ನು ಹೊಗಳಿರುವುದು ಬೆಳಕಿಗೆ ಬಂದಿದೆ.

ಹೌದು, ಅಂದು ಬ್ಲಾಕ್ ಆಂಡ್ ವೈಟ್ ಫೋಟೋ ಪೋಸ್ಟ್ ಮಾಡಿದ್ದ ಸಂಜನಾ, ಇಸ್ಲಾಂ ಧರ್ಮದ ಬಗ್ಗೆ ಅತೀವ ಒಲವು ತೋರಿರುವ ಸಂಜನಾ, ಇಸ್ಲಾಂ ಸಂಸ್ಕೃತಿ, ಸಂಪ್ರದಾಯದ ಬಗ್ಗೆ ಪ್ರಭಾವಿತಳಾಗಿದ್ದೇನೆ. ಅಲ್ಲದೆ ಧರ್ಮದ ಬಗ್ಗೆ ಆಕರ್ಷಿತಳಾಗಿದ್ದೇನೆ ಎಂದು ಬರೆದುಕೊಳ್ಳುವ ಮೂಲಕ ಮುಸ್ಲಿಂ ಧರ್ಮವನ್ನು ಹೊಗಳಿದ್ದರು. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಅವರು ದಾಖಲೆ ಬಿಡುಗಡೆ ಮಾಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದಾಗ ನಟಿ 2014ರಲ್ಲೇ ಮತಾಂತರಕ್ಕೆ ಮನಸ್ಸು ಮಾಡಿದ್ರಾ ಎಂಬ ಪ್ರಶ್ನೆ ಎದ್ದಿದೆ.ಡ್ರಗ್ಸ್ ಪ್ರಕರಣದಲ್ಲಿ ಸಂಜನಾ ಅವರ ಹೆಸರು ಕೇಳಿ ಬಂದ ಸಮಯದಿಂದಲೂ ಅವರ ಮೇಲೆ ಸಾಕಷ್ಟು ಆರೋಪಗಳು ಕೇಳಿ ಬರುತ್ತಿದೆ. ಬಂಧನದ ಮುನ್ನ 32 ವರ್ಷವಾದರೂ ಇನ್ನು ಮದುವೆಯೇ ಆಗಿಲ್ಲ. ನನ್ನ ಕ್ಯಾರೆಕ್ಟರ್ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಸಂಜನಾ ಆರೋಪಿಸಿದ್ದರು. ಆದರೆ ಆ ಬಳಿಕ ಅವರು ವೈದ್ಯರೊಬ್ಬರನ್ನು ಕಳೆದ ವರ್ಷವೇ ಮದುವೆಯಾಗಿದ್ದರು ಎಂಬ ಫೋಟೋ ಸಾಕಷ್ಟು ವೈರಲ್ ಆಗಿತ್ತು.

 

 


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ