Breaking News
Home / ಜಿಲ್ಲೆ / ಬೆಳಗಾವಿ / ಅಥಣಿ / ಖಾಸಗಿ ಆಸ್ಪತ್ರೆಗಳಿಂದ ರೋಗದ ಭೀತಿಯಲ್ಲಿ ಗ್ರಾಮೀಣ ಜನರು….

ಖಾಸಗಿ ಆಸ್ಪತ್ರೆಗಳಿಂದ ರೋಗದ ಭೀತಿಯಲ್ಲಿ ಗ್ರಾಮೀಣ ಜನರು….

Spread the love

ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಕೊಕಟನೂರು ಗ್ರಾಮೀಣ ಪ್ರದೇಶದ ಜನರು ಖಾಸಗಿ ಆಸ್ಪತ್ರೆ ಎಡವಟ್ಟು ಹಾಗೂ ಹವಮಾನ ವೈಪರಿತೆಯಿಂದ ರೋಗರುಜನೆಗಳು ಜನರಿಗೆ ತಗಲುತ್ತವೆ ಎಂಬ ಭಯದ ವಾತಾವರಣದಲ್ಲಿದ್ದಾರೆ.

 

ಇದೆಲ್ಲಾ ಕಂಡು ಬಂದಿದ್ದು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಜನಸಂಖ್ಯೆವುಳ್ಳ ಗ್ರಾಮವಾದ ಕೊಕಟನೂರ ದಲ್ಲೀ ಖಾಸಗಿ ಆಸ್ಪತ್ರೆಯದವರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು.

ತಮ್ಮ ಆಸ್ಪತ್ರೆಗಳಲ್ಲಿ ರೋಗಿಯನ್ನ ಗುಣಪಡಿಸಲು ಉಪಯೋಗಿಸಿದ ಔಷಧೀಯ ಮೆಡಿಸನಗಳಾದ, ಸಿರಂಜ್,ಸಲೈನ್,ಬ್ಯಾಂಡೇಜ್, ವೇಸ್ಟ್ ಆದ ಔಷಧಿ ಬಾಟಲಿಗಳನ್ನು ಹಾಗೂ ಮುಂತಾದವುಗಳು ಆಸ್ಪತ್ರೆಯಲ್ಲಿ ಉಪಯೋಗಿಸಿ ಅವುಗಳನ್ನ ಗ್ರಾಮದಲ್ಲಿ ಅಲ್ಲಲ್ಲಿ ಬಿಸಾಡಿ, ಸಂಗ್ರಹವಾದ ಗುಂಪಿಗಳನ್ನ ನೋಡಿ ಭಯದ ವಾತಾವರಣದಲ್ಲಿದ್ದಾರೆ.

ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಗೆ ಗ್ರಾಮಸ್ಥರು ಎಷ್ಟೊಂದು ಬಾರಿಗೆ ಮನವಿಯನ್ನು ಸಲ್ಲಿಸಿದರು ಯಾವುದೇ ಪ್ರಯೋಜನ ವಾಗಿಲ್ಲ ಎಂದು ಇಲ್ಲಿಯ ಗ್ರಾಮಸ್ಥರು ಅಳಲಾಗಿದ್ದೆ,

ಮಾಧ್ಯಮ ಮಿತ್ರರು ಗ್ರಾಮ ಪಂಚಾಯತಿಯ ಪಿಡಿಒ ಎಸ್ ಎಸ್ ತುಂಗಳ ಅವರಿಗೇ ಸಂಪರ್ಕಿಸಿ ಕೇಳಿದಾಗ, ನನಗೆ ಇಲ್ಲಿವರೆಗೆ ಯಾವುದೇ ಗಮನಕ್ಕೆ ಬಂದಿಲ್ಲ, ಆದಷ್ಟು ಬೇಗ ಅದನ್ನ ಸರಿಪಡಿಸುವ ಗೋಳು ಪುರಾಣವನ್ನೇ ಓದುತ್ತಿದ್ದಾರೆ ಹೊರತು, ಸ್ವಚ್ಛತೆಗೆ ಮುಂದಾಗುತ್ತಿಲ್ಲ ಇಲ್ಲಿಯ ಆಡಳಿತ ಮಂಡಳಿ.

ಕಳೆದ ಮೂರು ನಾಲ್ಕು ವಾರಗಳ ಗತಿಸಿದ್ದು ಶಾಸಕರು ಗ್ರಾಮಕ್ಕೆ ಬಂದು ಕಸ ವಿಲೇವಾರಿ ವಾಹನವನ್ನು ಹಸ್ತಾಂತರಿಸಿದ್ದರು,ಗ್ರಾಮವನ್ನು ಸ್ವಚ್ಛತೆ ಇಡುವ ಉದ್ದೇಶವಾಗಿತ್ತು ಆದರೆ ಗ್ರಾಮದಲ್ಲಿ ವಾಹನ ಎಲ್ಲಿದೆ ಎಂಬುದು ತಪಾಸವೇ ಉಂಟಾಗಿದೆ ಎಂದು ಗ್ರಾಮಸ್ಥರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ

“ಕೊರೋಣ ಎಂಬ ಮಹಾಮಾರಿ ಕಡಿಮೆ ಆಗುತ್ತಿದ್ದ ಹಿನ್ನೆಲೆ*, ಈ ಖಾಸಗಿ ಆಸ್ಪತ್ರೆಯವರಿಂದ ಮತ್ತೊಂದು ದೊಡ್ಡ ಮಹಾಮಾರಿ ನಮಗೆ ಎದುರಾಗುತ್ತದೆ ನೋಡಿ ಎಂದು ಇಲ್ಲಿಯ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ .


Spread the love

About Laxminews 24x7

Check Also

ನೇಹಾ ಕೊಲೆ ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ

Spread the loveಹುಬ್ಬಳ್ಳಿ : ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿ ನೇಹಾ ಹಿರೇಮಠ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಆರೋಪಿ ಫಯಾಝ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ