Breaking News

ಡಾಲರ್ ಎದುರು ಕುಸಿಯುತ್ತಿರುವ ರೂಪಾಯಿ ಮೌಲ್ಯ: ಇದೇ ಮೊದಲ ಬಾರಿಗೆ 80 ರೂ. ಗಡಿ ದಾಟಿದ ದೇಶಿಯ ಕರೆನ್ಸಿ

Spread the love

ನವದೆಹಲಿ: ಡಾಲರ್ ಎದುರು ದುರ್ಬಲಗೊಳ್ಳುತ್ತಿರುವ ರೂಪಾಯಿ ಮೌಲ್ಯ ಇದೇ ಮೊದಲ ಬಾರಿಗೆ 80 ರೂ. ಮುಟ್ಟಿದೆ. ಸೋಮವಾರ ವಿದೇಶಿ ವಿನಿಮಯ ಮಾರುಕಟ್ಟೆಯು 79.76 ರೂಪಾಯಿ ಮೂಲಕ ವಹಿವಾಟು ಆರಂಭಿಸಿ, ಮಧ್ಯಂತರದಲ್ಲಿ 80 ರೂ. ಗಡಿ ದಾಟಿತು. ಕಡೆಗೆ ಕೊಂಚ ಚೇತರಿಸಿಕೊಂಡು 16 ಪೈಸೆ ಇಳಿಕೆ ಆಗಿ ದಿನ ಅಂತ್ಯಕ್ಕೆ 79.98 ರೂ.ಗೆ ವಿನಿಮಯ ದರ ಸ್ಥಿರಗೊಂಡಿತು.

ಇದೀಗ ಮಂಗಳವಾರ ಆರಂಭಿಕ ವಹಿವಾಟಿನಲ್ಲಿ ಶೇ.0.03 ಕುಸಿತದೊಂದಿಗೆ ಮತ್ತೆ 80.02 ರೂ. ಗಡಿ ದಾಟಿದೆ.

ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ದರದ ಏರಿಳಿತದಿಂದ ವಿದೇಶಿ ಹೂಡಿಕೆದಾರರು ಷೇರುಪೇಟೆಯಲ್ಲಿ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ.

ಹೀಗಾಗಿ ರೂಪಾಯಿ ಅಧಃಪತನ ಮುಂದುವರಿದು ಈ ವರ್ಷದಲ್ಲಿ ಈವರೆಗೆ ಶೇ. 8ರಷ್ಟು ಕುಸಿತ ಕಂಡಿದೆ. ದೇಶದಲ್ಲಿ ವಿದೇಶಿ ಬಂಡವಾಳ ಹಿಂತೆಗೆತವು ಹೆಚ್ಚಾಗುತ್ತಿದೆ. ವಿದೇಶಿ ಹೂಡಿಕೆದಾರರು ರಾಷ್ಟ್ರದ ಷೇರುಗಳನ್ನು ಮಾರಾಟ ಮಾಡುವುದನ್ನು ಮುಂದುವರೆಸಿರುವ ಕಾರಣದ ಭಾರತದ ರೂಪಾಯಿ ಮತ್ತೊಂದು ದಾಖಲೆಯ ಕುಸಿತವನ್ನು ಮುಟ್ಟಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ